ನಿಂಬೆ ಹಣ್ಣಿನ ಸಿಪ್ಪೆಯನ್ನು ಯಾವುದೇ ಕಾರಣಕ್ಕೂ ಕಸಕ್ಕೆ ಎಸೆಯಬೇಡಿ!
ನಿಂಬೆ ಹಣ್ಣಿನಲ್ಲಿ ಇರುವ ಔಷಧಿ ಗುಣಗಳು ಹಾಗೂ ಪೋಷಕಾಂಶಗಳು ದೇಹಕ್ಕೆ ಲಭ್ಯ ಆಗುತ್ತದೆ.ಅಡುಗೆಯಿಂದ ಇಡಿದು ಪಾನೀಯದವರೆಗೆ ಪ್ರತಿಯೊಂದಕ್ಕೂ ನಿಂಬೆ ರಸವನ್ನು ಬಳಸಲಾಗುತ್ತದೆ.ಇನ್ನು ನಿಂಬೆ ಹಣ್ಣಿನ ಸಿಪ್ಪೆಯನ್ನು ಕೂಡ ಹಲವಾರು ವಿಧಾನದಿಂದ ಬಳಸಿಕೊಳ್ಳಬಹುದು.
1, ನಿಂಬೆಹಣ್ಣಿನ ಸಿಪ್ಪೆ ಕೈಯಲ್ಲಿರುವ ದುರ್ವಾಸನೆಯನ್ನು ತೆಗೆದುಹಾಕುತ್ತದೆ. ಈರುಳ್ಳಿ ಬೆಳ್ಳುಳ್ಳಿ ಮೀನು-ಮಾಂಸದಿಂದ ಕೈಯಲ್ಲಿ ದುರ್ವಾಸನೆ ಬರುತ್ತದೆ. ಇಂತಹ ಸಮಯದಲ್ಲಿ ದುರ್ವಾಸನೆಯನ್ನು ದೂರ ಮಾಡಲು ನಿಂಬೆಹಣ್ಣಿನ ಸಿಪ್ಪೆಯಿಂದ ಉಜ್ಜಬೇಕು.ಇದರಿಂದ ವಾಸನೆ ದೂರವಾಗುತ್ತದೆ.
2, ಅಷ್ಟೇ ಅಲ್ಲದೆ ಇದು ಬಟ್ಟೆಯಿಂದ ಕಲೆಗಳನ್ನು ತೆಗೆದುಹಾಕುತ್ತದೆ. ಊಟ ಮಾಡುವ ಸಂದರ್ಭದಲ್ಲಿ ನೀವು ತಿನ್ನುವ ಆಹಾರ ಬಟ್ಟೆಯ ಮೇಲೆ ಬಿದ್ದು ಕಲೆ ಆಗಿದ್ದರೆ ನಿಂಬೆ ಹಣ್ಣಿನ ರಸವನ್ನು ಕಲೆ ಇರುವ ಜಾಗಕ್ಕೆ ಹಾಕಿ ನಿಂಬೆ ಹಣ್ಣಿನ ಸಿಪ್ಪೆಗೆ ಉಪ್ಪು ಹಾಕಿ ಉಜ್ಜಿದರೆ ಸಾಕು ನಂತರ ನೀರಿನಿಂದ ತೊಳೆಯಿರಿ.ಈ ರೀತಿ 3 ಬಾರಿ ಮಾಡಿದರೆ ಕಲೆ ನಿವಾರಣೆ ಆಗುತ್ತದೆ.
3, ಮನೆಯಲ್ಲಿ ಸುವಾಸನೆಯು ಬರುತ್ತಿದ್ದರೆ ಅದು ಮನಸ್ಸಿಗೆ ಖುಷಿ ನೀಡುತ್ತದೆ. ಎರಡರಿಂದ ಮೂರು ನಿಂಬೆ ಹಣ್ಣಿನ ಸಿಪ್ಪೆಯನ್ನು ತೆಗೆದು ಕೊಂಡುಒಂದು ಕಪ್ ನಲ್ಲಿ ಹಾಕಿ ಮನೆಯ ಒಂದು ಭಾಗದಲ್ಲಿ ಇಡಬೇಕು. ಇದರಿಂದ ಮನೆಯ ತುಂಬಾ ಸುವಾಸನೆ ಹರಡುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ಸುವಾಸನೆಗಿಂತ ಇದು ಒಳ್ಳೆಯದು.
4, ತಾಮ್ರ ಹಿತ್ತಾಳೆ ಪಾತ್ರೆಯ ಹೊಳಪನ್ನು ಹೆಚ್ಚಿಸುತ್ತದೆ.ಅಷ್ಟೇ ಅಲ್ಲದೆ ಗಾಜಿನ ಪಾತ್ರೆಗಳನ್ನು ಸಹ ಶುಚಿ ಮಾಡಬಹುದು.ಕೆಲವೊಮ್ಮೆ ಗಾಜಿನ ಪಾತ್ರೆಗಳು ಕಾಂತಿಯನ್ನು ಕಳೆದುಕೊಳ್ಳುತ್ತದೆ. ಇದನ್ನು ನಿವಾರಣೆ ಮಾಡುವುದಕ್ಕೆ ನಿಂಬೆ ಹಣ್ಣಿನ ಸಿಪ್ಪೆಗೆ ಅರ್ಧಚಮಚ ಅಡುಗೆ ಸೋಡಾ ಹಾಕಿ ಉಜ್ಜಬೇಕು.ಸ್ಕ್ರಾಬ್ ಮಾಡಿದ ನಂತ್ರ 30 ನಿಮಿಷಗಳ ಕಾಲ ಹಾಗೆ ಬಿಡಿ.ನಂತರ ಇದನ್ನು ಸೋಪು ಹಾಕಿಕೊಂಡು ತೊಳೆಯಿರಿ.ಆಗ ಗಾಜಿನ ಪಾತ್ರೆಗಳು ಹೊಸದಾಗಿ ಕಾಣಿಸುತ್ತದೆ.