ಗ್ರಹಗಳ ಸೇನಾಪತಿಯ ರಾಶಿಯಲ್ಲಿ ಬುಧನ ವಕ್ರನಡೆ ಆರಂಭ! ಈ ರಾಶಿಗಳ ಜನರ ಮೇಲೆ ಅಪಾರ ಕನಕವೃಷ್ಟಿ!

0 6,293

ಮಂಗಳನ ರಾಶಿಯಲ್ಲಿ ಬುಧ ತನ್ನ ವಕ್ರ ನಡೆಯನ್ನು ಅನುಸರಿಸಿದರೆ, ವ್ಯಕ್ತಿಯೊಳಗೆ ಆತ್ಮವಿಶ್ವಾಸ, ಸಾಹಸ ಹೆಚ್ಚಾಗುತ್ತದೆ. ಈ ಜಾತಕದವರ ಜೀವನದಲ್ಲಿ ಅದು ಯಾವುದಾದರೊಂದು ರೀತಿಯಲ್ಲಿ ಪ್ರಭಾವ ಬೀರುತ್ತದೆ. ಸ್ವಲ್ಪ ಧೈರ್ಯದಿಂದ ಮುಂದುವರೆಯುವುದು ಸಾಕಷ್ಟು ಲಾಭಗಳನ್ನು ನೀಡುತ್ತದೆ.   

ಸಿಂಹ ರಾಶಿ: ನಿಮ್ಮ ರಾಶಿಯ ಒಂಬತ್ತನೇ ಭಾವದಲ್ಲಿ ಬುಧ ವಕ್ರನಾಗಲಿದ್ದಾನೆ. ಇದರಿಂದ ನಿಮಗೆ ವಿಶೇಷ ಲಾಭ ಸಿಗಲಿದೆ. ನೌಕರಿಯಲ್ಲಿ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ. ವಿದೇಶದಲ್ಲಿ ಕೆಲಸ ಮಾಡುವ ನಿಮ್ಮ ಆಸೆ ಈಡೇರಲಿದೆ. ಭವಿಷ್ಯಕ್ಕೆ ಸಂಬಂಧಿಸಿದಂತೆ ಉತ್ತಮ ನಿರ್ಧಾರಗಳನ್ನು ನೀವು ಕೈಗೊಳ್ಳುವಿರಿ ಮತ್ತು ಅದರಿಂದ ನಿಮಗೆ ಲಾಭ ಉಂಟಾಗಲಿದೆ. ನಿರ್ಣಯ ಕೈಗೊಳ್ಳುವ ನಿಮ್ಮ ಕ್ಷಮತೆ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ.   

ಧನು ರಾಶಿ: ನಿಮ್ಮ ಜಾತಕದ ಏಳನೇ ಭಾವದಲ್ಲಿ ಬುಧ ವಕ್ರನಾಗಲಿದ್ದಾನೆ. ಇದರಿಂದ ನಿಮ್ಮ ವೃತ್ತಿಜೀವನದಲ್ಲಿ ನಿಮಗೆ ಅಪಾರ  ಲಾಭ ಸಿಗಲಿದೆ. ಕೆಲಸದ ನಿಮಿತ್ತ ವಿದೇಶ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ನಡೆದುಕೊಂಡು ಬಂದ ಸಮಸ್ಯೆಗಳು ದೂರಾಗಲಿವೆ. ಬಿಸ್ನೆಸ್ ನಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಅಪಾಯ ತೆಗೆದುಕೊಳ್ಳಿ. ಷೇರು ಮಾರುಕಟ್ಟೆಯಲ್ಲಿನ ವ್ಯವಹಾರ ನಿಮಗೆ ಲಾಭ ತಂದುಕೊಡಲಿದೆ. ಮಾತಿನ ಬಲದಿಂದ ನೀವು ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ.   

ಕುಂಭ ರಾಶಿ: ನಿಮ್ಮ ಜಾತಕದ ಐದನೇ ಭಾವದಲ್ಲಿ ಬುಧ ವಕ್ರ ನಡೆ ಅನುಸರಿಸಲಿದ್ದಾನೆ. ಇದರಿಂದ ವೃತ್ತಿ ಜೀವನದಲ್ಲಿ ನಿಮಗೆ ಲಾಭ ಸಿಗಲಿದೆ. ನೌಕರಿಯಲ್ಲಿ ಹೊಸ ಅವಕಾಶಗಳು ಸಿಗಲಿವೆ. ಪದೋನ್ನತಿ, ವೇತನ ವೃಡ್ಡಿಯಾಗುವ ಸಾಧ್ಯತೆ ಇದೆ. ವ್ಯಾಪಾರ ವರ್ಗದ ಜನರ ಕುರಿತು ಹೇಳುವುದಾದರೆ, ನಿಮಗೆ ಲಾಭದ ಎಲ್ಲಾ ಸಾಧ್ಯತೆಗಳು ಇವೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದ್ದು, ಸಾಕಷ್ಟು ಸಂತುಷ್ಟಿಯನ್ನು ನೀವು ಅನುಭವಿಸುವಿರಿ. ಸಾಕಷ್ಟು ಹಣಗಳಿಕೆಯ ಅವಕಾಶ ನಿಮಗೆ ಸಿಗಲಿದೆ. ಇದಲ್ಲದೆ ನೀವು ಉತ್ತಮ ಹಣ ಉಳಿತಾಯ ಮಾಡುವಲ್ಲಿಯೂ ಕೂಡ ಯಶಸ್ವಿಯಾಗುವಿರಿ. ವೈವಾಹಿಕ ಜೀವನ, ಲವ್ ಲೈಫ್ ಕೂಡ ಉತ್ತಮವಾಗಿರಲಿದೆ.  

Leave A Reply

Your email address will not be published.