ದೇವರ ಪೂಜಾ ಸಾಮಗ್ರಿಗಳನ್ನು ನೀರಲ್ಲಿ ಹೀಗೆ ಹಾಕಿ ಸಾಕು ಜಾಸ್ತಿ ಉಜ್ಜಿ ತಿಕ್ಕಿ ತೊಳೆಯುವುದು ಬೇಡ!
ನಮ್ಮೆಲ್ಲರಿಗೂ ದೂಡ್ಡ ಕೆಲಸ ಎಂದರೆ ದೇವರ ಪೂಜಾ ಸಾಮಗ್ರಿಗಳನ್ನು ಕ್ಲೀನ್ ಮಾಡುವುದು. ನಾವ್ ಅವಾಗ್ ಅವಾಗ ದೇವರ ಪೂಜಾ ಸಾಮಗ್ರಿಗಳನ್ನು ಕ್ಲೀನ್ ಮಾಡುತ್ತೇವೆ. ಅದರೆ ಜಾಸ್ತಿ ಉಜ್ಜಿ ತಿಕ್ಕಿ ಶ್ರಮ ಪಡಬೇಕಾಗುತ್ತದೆ. ಈ ರೀತಿ ನೀರಿನಲ್ಲಿ ದೇವರ ಪೂಜಾ ಸಾಮಗ್ರಿಗಳನ್ನು ನೆನಸಿಟ್ಟರೆ ಸಾಕು ನೀವು ಜಾಸ್ತಿ ಉಜ್ಜಿ ತಿಕ್ಕಿ ತೊಳೆಯುವ ಅವಶ್ಯಕತೆ ಇರುವುದಿಲ್ಲ. ಸುಲಭವಾಗಿ ದೇವರ ಪೂಜಾ ಸಾಮಗ್ರಿಗಳನ್ನು ಕ್ಲೀನ್ ಮಾಡಿಕೊಳ್ಳಬಹುದು.
ಒಂದು ಪಾತ್ರೆ ನೀರಿಗೆ ಎರಡು ನಿಂಬೆಹಣ್ಣನ್ನು ಕತ್ತರಿಸಿ ರಸ ತೆಗೆದು ಹಾಕಿ ಮತ್ತು ಸಿಪ್ಪೆಯನ್ನು ಸಹ ಹಾಕಬೇಕು. ಒಂದು ಚಮಚ ವಾಷಿಂಗ್ ಪೌಡರ್, ಒಂದು ಚಮಚ ಉಪ್ಪು, ಒಂದು ಚಮಚ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದರಲ್ಲಿ ಪೂಜಾ ಸಾಮಗ್ರಿಗಳನ್ನು ನಿರೀನಲ್ಲಿ ನೆನಸಿಡಬೇಕು. ನಂತರ ಸ್ಕ್ರಾಬ್ ಮೂಲಕ ಸ್ವಲ್ಪ ಉಜ್ಜಿ ತೊಳೆದರೆ ಸಾಕು. ಇದೆ ರೀತಿ ಸುಲಭವಾಗಿ ಪೂಜಾ ಸಾಮಗ್ರಿಗಳನ್ನು ಕ್ಲೀನ್ ಮಾಡಬಹುದು.