ಹಲ್ಲುಗಳ ನಡುವೆ ಅಂತರ ಇದ್ರೆ ಈ ವಯಸ್ಸಿನಲ್ಲಿ ಶ್ರೀಮಂತರಾಗ್ತೀರ!

0 25,609

ಪ್ರತಿಯೊಬ್ಬರೂ ಸಹ ಯಾವುದೇ ಒಂದು ಕಾರ್ಯವನ್ನು ಹೊಸದಾಗಿ ಆರಂಭಿಸಬೇಕಾದರೆ ಅಲ್ಲಿ ಶಾಸ್ತ್ರವನ್ನು ಕೇಳುವಂತಹ ಸಂಪ್ರದಾಯವನ್ನು ಇಟ್ಟು ಕೊಂಡಿರುತ್ತಾರೆ, ಹಿಂದೂ ಸಂಪ್ರದಾಯದಲ್ಲಿ ಜ್ಯೋತಿಷ್ಯಶಾಸ್ತ್ರಕ್ಕೆ ಹೆಚ್ಚು ಮಹತ್ವವನ್ನು ನೀಡಲಾಗಿದೆ, ಜ್ಯೋತಿಷ್ಯ ಶಾಸ್ತ್ರವೆಂಬುದು ಪುರಾಣಗಳ ಕಾಲದಿಂದಲೂ ಇರುವಂತಹ ಒಂದು ಅಧ್ಯಯನ, ಆ ಕಾಲದಿಂದಲೂ ಸಹ ಯಾವುದಾದರೂ ಕೆಲಸ ಕಾರ್ಯವನ್ನು ಮಾಡಬೇಕಾದರೆ ಮೊದಲು ಜ್ಯೋತಿಷ್ಯ ಶಾಸ್ತ್ರವನ್ನು ನೋಡಿ ಯಾವ ದಿನ ಯಾವ ಸಮಯದಲ್ಲಿ ಏನನ್ನು ಮಾಡಿದರೆ ಒಳ್ಳೆಯದು ಎಂದು ಕೇಳುತ್ತಿದ್ದರು ಅದರಂತೆ ಮಾಡುತ್ತಿದ್ದರು,

ಅದು ಈಗಲೂ ಸಹ ಮುಂದುವರೆದಿದೆ, ಜ್ಯೋತಿಷ್ಯಶಾಸ್ತ್ರದಲ್ಲಿ ಹಲವಾರು ವಿಧಗಳಿವೆ ವಾಸ್ತುಶಾಸ್ತ್ರ, ಹಸ್ತ ಶಾಸ್ತ್ರ, ಜಾತಕ ಶಾಸ್ತ್ರ, ಮುಖ ಶಾಸ್ತ್ರ ಹೀಗೆ ಹಲವಾರು ವಿಧಗಳಿವೆ ಅದರಲ್ಲಿ ದಂತ ಶಾಸ್ತ್ರವು ಒಂದು. ಇನ್ನು ಈ ತಂದೆ ಶಾಸ್ತ್ರದಲ್ಲಿ ಮುಂದುಗಡೆ ಇರುವ ಎರಡು ಹಲ್ಲುಗಳ ಮಧ್ಯೆ ಅಂತರ ಅಥವಾ ಗ್ಯಾಪ್ ಇದ್ದರೆ ಅಂಥವರು ಅದೃಷ್ಟವಂತರು ಎಂದು ಈ ದಂತ ಶಾಸ್ತ್ರವು ಹೇಳುತ್ತದೆ. ಇದು ಸಹ ಜಾತಕ, ಹಸ್ತರೇಖೆ ಗಳನ್ನು ನೋಡಿ ಭವಿಷ್ಯವನ್ನು ಹೇಳುವ ಹಾಗೆ ಹಲ್ಲುಗಳ ನಡುವೆ ಇರುವ ಅಂತರವನ್ನು ನೋಡಿ ಮುಂದಿನ ಭವಿಷ್ಯವನ್ನು ಹೇಳಬಹುದು, ಅದರಲ್ಲಿ ಮುಖ್ಯವಾಗಿ ಮುಂದುಗಡೆ ಇರುವ

ಎರಡು ಹಲ್ಲುಗಳ ಮಧ್ಯೆ ಇರುವ ಗ್ಯಾಪ್ ನೋಡಿ ಭವಿಷ್ಯ ಹೇಳುವುದು. ಯಾರಿಗಾದರೂ ಈ ರೀತಿ ಹಲ್ಲುಗಳ ಮಧ್ಯೆ ಅಂತರವಿದ್ದರೆ ಅವರು ಎಂದಿಗೂ ಸಹ ಆ ಖಾಲಿ ಜಾಗವನ್ನು ಮುಚ್ಚಲು ಹೋಗಬೇಡಿ ಒಂದು ವೇಳೆ ಆ ಖಾಲಿ ಜಾಗವನ್ನು ಮುಚ್ಚಿದರೆ ನಿಮ್ಮಲ್ಲಿರುವ ಅದೃಷ್ಟಗಳು ಮುಚ್ಚಿ ಹೋದಂತೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಇನ್ನು ಯಾರಿಗೆ ಈ ಹಲ್ಲಿನ ಮಧ್ಯೆ ಗ್ಯಾಪ್ ಇರುತ್ತದೆಯೋ ಅವರು ಜೀವನದಲ್ಲಿ ಚೆನ್ನಾಗಿಯೇ ಬದುಕುತ್ತಾರೆ, ಇವರು ಒಂದು ಬಾರಿ ಸೋತರೆ ಅದನ್ನು ಗೆಲ್ಲುವವರೆಗೂ ತಮ್ಮ ಪ್ರಯತ್ನವನ್ನು ನಿಲ್ಲಿಸುವುದಿಲ್ಲ, ಎಷ್ಟೇ ಕಷ್ಟವಾದರೂ ಸಹ ಹೋರಾಡಿದ ಹಿಡಿದ ಕಾರ್ಯದಲ್ಲಿ ಜಯ ಸಾಧಿಸುತ್ತಾರೆ.

ಇವರು ಅತಿಬುದ್ದಿವಂತರು ಆಗಿರುತ್ತಾರೆ, ಇನ್ನು ಅತಿಯಾಗಿ ಮಾತನಾಡುವ ಇವರು ತಮ್ಮ ಮಾತುಗಳಿಂದಲೇ ಬೇರೆ ವ್ಯಕ್ತಿಗಳನ್ನು ಆಕರ್ಷಿಸುತ್ತಾರೆ, ಇವರು ಅತಿ ಹೆಚ್ಚಾಗಿ ಭೋಜನವನ್ನು ಇಷ್ಟಪಡುತ್ತಾರೆ ಮತ್ತು ಹೆಚ್ಚಾಗಿ ತಿನ್ನುತ್ತಾರೆ, ಇವರು ಎಲ್ಲ ವಿಷಯದಲ್ಲೂ ಸಹ ಮನರಂಜನೆಯನ್ನು ಹುಡುಕುವಂತಹ ಸ್ವಭಾವವನ್ನು ಹೊಂದಿರುತ್ತಾರೆ, ಯಾವುದೇ ಸಮಸ್ಯೆಗಳು ಬಂದರು ಸಹ ಅದನ್ನು ತಾವೇ ಬಗೆಹರಿಸಿಕೊಳ್ಳುವಂತಹ ಚಾಣಾಕ್ಷತನವನ್ನು ಹೊಂದಿರುತ್ತಾರೆ,

ಹಣಕಾಸಿನ ವ್ಯವಹಾರದಲ್ಲಿ ಇವರು ಎತ್ತಿದ ಕೈ. ಇನ್ನು ಮಹಿಳೆಯರು ಈ ಹಲ್ಲಿನ ಮಧ್ಯೆ ಗ್ಯಾಪ್ ಅನ್ನು ಹೊಂದಿದರೆ ಅವರು ಇನ್ನೂ ಅದೃಷ್ಟವಂತರು, ಈ ದಂತ ಶಾಸ್ತ್ರದಲ್ಲಿಯೂ ಸಹ ಈ ರೀತಿ ಹಲ್ಲಿನ ಮಧ್ಯೆ ಗ್ಯಾಪ್ ಇರುವ ಮಹಿಳೆಯರು ಪುರುಷರಿಗಿಂತ ಅದೃಷ್ಟಶಾಲಿಯಾಗಿರುತ್ತಾರೆ ಎಂದು ಹೇಳಲಾಗಿದೆ, ಇನ್ನು ಇವರು ಎಷ್ಟೇ ಹಣವಿದ್ದರೂ ಸಹ ಹಣವನ್ನು ಖರ್ಚು ಮಾಡುವ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಹಣವನ್ನು ಖರ್ಚು ಮಾಡುತ್ತಾರೆ, ಇದರ ಜನರಿಗಿಂತ ಅತಿ ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸ್ವಭಾವ ಈ ಮಹಿಳೆಯಲ್ಲಿ ಇರುತ್ತದೆ.

ಇನ್ನು ಧಂತಶಾಸ್ತ್ರದಲ್ಲಿ ಹೇಳುವಹಾಗೆ ಯಾರಿಗೆ ಹಲ್ಲಿನ ಮೇಲೆ ಹಲ್ಲು ಕೂಡಿ ಬಂದಿರುತ್ತದೆಯೋ ಅವರು ಸಹ ಅದೃಷ್ಟಶಾಲಿ ಯಾಗಿರುತ್ತಾರೆ ಎಂದು ಹೇಳಲಾಗಿದೆ. ಯಾರಿಗೆ ಹೀಗೆ ಹಲ್ಲಿನ ಮೇಲೆ ಹಲ್ಲು ಕೂಡಿ ಬಂದಿರುತ್ತದೆ ಅವರು ಸೌಂದರ್ಯಕ್ಕಾಗಿ ಆ ಹಲ್ಲನ್ನು ತೆಗೆಯಬಾರದು, ಇಂಥವರು ಮುಟ್ಟಿದ್ದೆಲ್ಲವೂ ಸಹ ಚಿನ್ನವಾಗುತ್ತದೆ, ಇವರು ಅತಿ ಹೆಚ್ಚಾಗಿ ಹಣವನ್ನು ಸಂಪಾದಿಸಿ ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಪಡೆದುಕೊಂಡು ಗಣ್ಯ ವ್ಯಕ್ತಿಗಳಾಗಿರುತ್ತಾರೆ.

Leave A Reply

Your email address will not be published.