ಬೆಳಿಗ್ಗೆ 4-5 ಗಂಟೆಯಲ್ಲಿ ಬೀಳುವ ಕನಸುಗಳ ಅರ್ಥವೇನು ತಿಳಿದುಕೊಳ್ಳಿ!

0 291

ರಾತ್ರಿ ಮಲಗಿದ ಕನಸುಗಳು ಬೀಳುವುದು ಸಾಮಾನ್ಯ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕನಸು ಬೀಳುತ್ತದೆ. ಕೆಲವರಿಗೆ ರಾತ್ರಿ ಬಿದ್ದರೆ, ಇನ್ನೂ ಕೆಲವರಿಗೆ ಬ್ರಹ್ಮ ಮುಹೂರ್ತದಲ್ಲಿ ಕನಸು ಬೀಳುತ್ತದೆ. ಸಾಮಾನ್ಯವಾಗಿ ಬ್ರಹ್ಮ ಮುಹೂರ್ತದಲ್ಲಿ ಕನಸು ಬಿದ್ದರೆ ವಿಶೇಷ ಅರ್ಥವಿದೆ. ಆ ಅರ್ಥವೇನು ಎಂಬುದು ಇಲ್ಲಿದೆ.

ನಮ್ಮ ಸಂಪ್ರದಾಯದಲ್ಲಿ ಶಕುನಕ್ಕೆ ಹೆಚ್ಚಿನ ಮಹತ್ವವಿದೆ. ಕಾಗೆ ಕೂಗುವುದು, ಬೆಕ್ಕು ಅಡ್ಡ ಹೋಗುವುದು ಹೀಗೆ ಅನೇಕ ಶಕುನಗಳನ್ನ ನಾವು ನಂಬುತ್ತೇವೆ. ಶಕುನಗಳು ಶುಭ ಹಾಗೂ ಅಶುಭ ಎರಡನ್ನ ಕೂಡ ಸೂಚಿಸುತ್ತದೆ.

ಈ ಶಕುನದಂತೆಯೇ ಕನಸು ಸಹ ಭವಿಷ್ಯವನ್ನ ಸೂಚಿಸುವ ಒಂದು ವಿಧಾನ ಎನ್ನಬಹುದು. ನಮಗೆ ಬೀಳುವ ಕನಸು ಶುಭ ಮತ್ತು ಅಶುಭ ಫಲಿತಾಂಶಗಳನ್ನು ತಿಳಿಸುತ್ತದೆ. ಅದರಲ್ಲೂ ಕನಸು ಬರುವ ಸಮಯ ಸಹ ಬಹಳ ಮುಖ್ಯವಾಗುತ್ತದೆ.

ನಂಬಿಕೆಯ ಪ್ರಕಾರ ಬ್ರಹ್ಮ ಮುಹೂರ್ತದಲ್ಲಿ ಬರುವ ಕನಸುಗಳು ಶುಭ ಫಲ ನೀಡುತ್ತವೆ ಎನ್ನಲಾಗುತ್ತದೆ. ಇನ್ನು ಬೆಳಗಿನ ಜಾವ 3 ರಿಂದ 5 ಗಂಟೆಯ ನಡುವಿನ ಸಮಯವನ್ನು ಬ್ರಹ್ಮ ಮುಹೂರ್ತ ಎನ್ನಲಾಗುತ್ತದೆ. ಈ ಸಮಯದಲ್ಲಿ ಬೀಳುವ ವಿಶೇಷ ಕನಸುಗಳು ಒಳ್ಳೆಯದರ ಸೂಚನೆಯಂತೆ.

ನಿಮಗೆ ಬೆಳಗಿನ ಜಾವದ ಕನಸಿನಲ್ಲಿ ಮಗುವೊಂದು ನಗುತ್ತಿರುವಂತೆ ಕಂಡರೆ ಹಣದ ಹರಿವು ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಈ ಸಮಯದಲ್ಲಿ ನಿಮಗೆ ಆರ್ಥಿಕವಾಗಿ ಲಾಭವಾಗುತ್ತದೆ. ಹಾಗೆಯೇ, ಒಂದು ಹುಡುಗಿ ಡ್ಯಾನ್ಸ್ ಮಾಡುವಂತೆ ಕಂಡರೆ ಒಳ್ಳೆಯ ದಿನಗಳು ಆರಂಭವಾಗುತ್ತದೆ ಎನ್ನಲಾಗುತ್ತದೆ.

ನಿಮಗೆ ಕನಸಿನಲ್ಲಿ ಚಿತೆಯ ಭಸ್ಮವನ್ನ ಕಂಡರೆ ದುಡ್ಡಿನ ಮಳೆ ಆಗುತ್ತದೆ ಎಂದರ್ಥ. ಅಂದರೆ ಬೇಗ ನೀವು ಶ್ರೀಮಂತರಾಗುತ್ತೀರಿ ಎನ್ನಲಾಗುತ್ತದೆ. ಹಾಗೆಯೇ, ನೀವು ಮಣ್ಣಿನ ಮಡಿಕೆ ನೋಡಿದರೆ ಸಂಪತ್ತು ಹಾಗೂ ಆಸ್ತಿ ನಿಮ್ಮನ್ನ ಹುಡುಕಿ ಬರುತ್ತದೆ.

ನಿಮಗೆ ಕನಸಿನಲ್ಲಿ ಧಾನ್ಯಗಳ ರಾಶಿಯನ್ನು ಹತ್ತಿದ ರೀತಿ ಕಂಡರೆ ಬಹಳ ಒಳ್ಳೆಯದಂತೆ. ಅಂದರೆ ಶ್ರೀಘ್ರದಲ್ಲಿ ಉನ್ನತ ಹುದ್ದೆಗೆ ಏರಲು ಅವಕಾಶ ಸಿಗುತ್ತದೆ. ಅಲ್ಲದೇ, ಇದರಿಂದ ನಿಮಗೆ ಆರ್ಥಿಕವಾಗಿ ಸಹ ಬಹಳ ಲಾಭವಾಗುತ್ತದೆ.

ಕನಸಿನಲ್ಲಿ ನೀವು ಅಥವಾ ಬೇರೆಯವರು ಸ್ನಾನ ಮಾಡಿದ ರೀತಿ ಕಂಡರೆ ಒಂದು ವಿಶೇಷ ಪ್ರಯಾಣ ನಿಮಗಾಗಿ ಕಾದಿದೆ ಎಂದು ಹೇಳಲಾಗುತ್ತದೆ. ನೀವು ವಿದೇಶಕ್ಕೆ ಹೋಗುವ ಅವಕಾಶ ಪಡೆಯಬಹುದು ಅಥವಾ ವಿಭಿನ್ನ ರೀತಿಯಾಗಿ ಪ್ರಯೋಜನ ಪಡೆಯಬಹುದು.

ಕನಸಿನಲ್ಲಿ ಹಲ್ಲು ಮುರಿದಂತೆ ಕಂಡರೆ ಹಣದ ಲಾಭವಾಗುತ್ತದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ನಿಮಗೆ ಅದೃಷ್ಟ ಕೈ ಹಿಡಿಯುತ್ತದೆ. ಇದರ ಜೊತೆಗೆ ಕನಸಿನಲ್ಲಿ ಹೇರ್ ಕಟ್ ಮಾಡಿಸಿಕೊಂಡಂತೆ ಕಂಡರೆ ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಕನಸಿನಲ್ಲಿ ದೇವಸ್ಥಾನ, ಶಂಖ, ಹಾಲು, ಅಕ್ಕಿ, ಶಿವಲಿಂಗ, ದೀಪ, ಗಂಟೆ ಕಾಣಿಸಿಕೊಂಡರೆ ನೀವು ಬಹಳ ಅದೃಷ್ಟವಂತರು ಎಂದರ್ಥ. ಅದರಲ್ಲೂ ಹುಣ್ಣಿಮೆಯ ಬಗ್ಗೆ ಕನಸು ಬಿದ್ದರಂತೂ ಬದುಕು ಬದಲಾಗುತ್ತದೆ ಎನ್ನಲಾಗುತ್ತದೆ. ಯಶಸ್ಸು ಹಾಗೂ ಸಂಪತ್ತು ಹುಡುಕಿ ಬರುತ್ತದೆ.

Leave A Reply

Your email address will not be published.