ಕ್ಯಾನ್ಸರ್ ತಡೆಗಟ್ಟಲು ಈ ಹಣ್ಣು ಯಾವುದು ಗೊತ್ತಾ!  

0 268

ಹಣ್ಣು, ತರಕಾಗಿಳು ಪ್ರಕೃತಿದತ್ತವಾಗಿ ಸಿಗುವಂತಹ ಆಹಾರ, ಇವುಗಳನ್ನು ಬಳಸಿಕೊಂಡರೆ ಆಗ ಖಂಡಿತವಾಗಿಯೂ ನಾವು ಆರೋಗ್ಯವನ್ನು ಕಾಪಾಡಿಕೊಂಡು ಸುಖವಾಗಿ ಜೀವನ ಸಾಗಿಸಬಹುದು. ಆದರೆ ಕೃತಕ ಆಹಾರದೆಡೆಗೆ ಮೋಹ ಬೆಳೆಸಿಕೊಂಡು ಅದರಿಂದ ನಾನಾ ರೀತಿಯ ರೋಗಗಳನ್ನು ಆಹ್ವಾನಿಸಿಕೊಂಡು ನಮ್ಮ ಜೀವನವನ್ನು ನಮ್ಮ ಕೈಯಾರ ನಾಶ ಮಾಡುತ್
ಆಧುನಿಕ ಜೀವನ ಶೈಲಿ ಹಾಗೂ ಇತರ ಕೆಲವೊಂದು ಕಾರಣಗಳಿಂದ ಕಾಡುವಂತಹ ಮಾರಕ ಕಾಯಿಲೆ ಎಂದರೆ ಅದು ಕ್ಯಾನ್ಸರ್. ಇದನ್ನು ಆರಂಭದಲ್ಲೇ ಪತ್ತೆ ಮಾಡಿದರೆ, ಆಗ ಸಂಪೂರ್ಣವಾಗಿ ಇದರಿಂದ ಪತ್ತೆ ಮಾಡಬಹುದು. ಆದರೆ ಕ್ಯಾನ್ಸರ್ ಬಂದ ಬಳಿಕ ಜೀವನಶೈಲಿ ಹಾಗೂ ಆಹಾರ ಕ್ರಮದಲ್ಲಿ ಸಂಪೂರ್ಣ ಬದಲಾವಣೆ ಮಾಡಬೇಕಾಗುತ್ತದೆ.

ಆಹಾರ ಕ್ರಮದಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ಸೇರಿಸಲೇಬೇಕು. ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಲಿದ್ದರೆ, ಆಗ ಕೆಲವೊಂದು ಹಣ್ಣುಗಳನ್ನು ತಪ್ಪದೆ ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಬೇಕು.

ಹಣ್ಣು ಹಾಗೂ ಕ್ಯಾನ್ಸರ್ ಬಗ್ಗೆ ನಡೆಸಿರುವ ಅಧ್ಯಯನಗಳು ಪರಿಪೂರ್ಣವಲ್ಲ. ಆದರೆ ಕೆಲವೊಂದು ಹಣ್ಣುಗಳಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಇದೆ. ಇನ್ನು ಕೆಲವು ಹಣ್ಣುಗಳಲ್ಲಿ ಚಿಕಿತ್ಸೆಯ ಅಡ್ಡಪರಿಣಾಮಗಳನ್ನು ದೂರ ಮಾಡುವ ಅಂಶಗಳು ಇವೆ.
ಕ್ಯಾನ್ಸರ್ ಚಿಕಿತ್ಸೆ ವೇಳೆ ಬೇಕಾಗುವಂತಹ ಪೋಷಕಾಂಶಗಳನ್ನು ಹಣ್ಣು ನೀಡುವುದು. ಹಣ್ಣುಗಳ ಸೇವನೆಯು ಚಿಕಿತ್ಸೆಯಿಂದ ಆಗುವ ಅಹಿತಕರವನ್ನು ದೂರ ಮಾಡುವುದು.

ಸಿಟ್ರಸ್ ಹಣ್ಣುಗಳಾಗಿರುವಂತಹ ಮೂಸಂಬಿ, ಕಿತ್ತಳೆ ಇತ್ಯಾದಿಗಳು ಕೆಲವು ಬಗೆಯ ಕ್ಯಾನ್ಸರ್ ತಡೆಬಲ್ಲದು. ವಾರದಲ್ಲಿ 3-4 ದಿನಗಳ ಕಾಲ ಸಿಟ್ರಸ್ ಹಣ್ಣು ತಿನ್ನುವ ಅಥವಾ ಜ್ಯೂಸ್ ಕುಡಿಯುವ ಜನರಲ್ಲಿ ಕ್ಯಾನ್ಸರ್ ಅಪಾಯವು ತುಂಬಾ ಕಡಿಮೆ ಎಂದು

ಸಿಟ್ರಸ್ ಹಣ್ಣುಗಳು ಕೆಲವು ಬಗೆಯ ಕ್ಯಾನ್ಸರ್ ನ್ನು ತಡೆಯುವ ಅಂಶ ಹೊಂದಿವೆ ಎಂದು ಅಧ್ಯಯನಗಳು ತಿಳಿಸಿವೆ.
ಸೇಬು ಕ್ಯಾನ್ಸರ್ ಅಪಾಯವನ್ನು ತಗ್ಗಿಸುವುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಶ್ವಾಸಕೋಶದ ಕ್ಯಾನ್ಸರ್ ನ್ನು ತಡೆಯುವಲ್ಲಿ ಇದು ಪ್ರಮುಖ ಪಾತ್ರ ವಹಿಸುವುದು.

ಇಷ್ಟು ಮಾತ್ರವಲ್ಲದೆ, ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಮತ್ತು ಜೀರ್ಣಕ್ರಿಯೆ ವ್ಯವಸ್ಥೆ ಸಂಬಂಧಿಸಿದ ಇತರ ಕೆಲವು ಕ್ಯಾನ್ಸರ್ ನ್ನು ಇದು ತಡೆಯುವುದು.

ಬಿಳಿ ತರಕಾರಿಗಳು ಹಾಗೂ ಹಣ್ಣುಗಳಾಗಿರುವಂತಹ ಸೇಬು, ಪೀಯರ್ಸ್, ಮಶ್ರೂಮ್ ಮತ್ತು ಈರುಳ್ಳಿಯು ಕರುಳಿನ ಕ್ಯಾನ್ಸರ್ ತಡೆಯುವಲ್ಲಿ ತುಂಬಾ ಪರಿಣಾಮಕಾರಿ. ಸೇಬಿನಲ್ಲಿ ಇರುವ ಪಾಲಿಸ್ಯಾಕರೈಡ್ ಗಳು ಮತ್ತು ಕ್ವೆರ್ಸೆಟಿನ್ ಅಂಶವು ಕ್ಯಾನ್ಸರ್ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ಅಧ್ಯಯನಗಳು ಹೇಳಿವೆ.
ಹಸಿರು ಹಣ್ಣುಗಳು ಕೂಡ ಕರುಳಿನ ಕ್ಯಾನ್ಸರ್ ಅಪಾಯವನ್ನು ತಗ್ಗಿಸುವುದು ಎಂದು ಅಧ್ಯಯನಗಳು ಹೇಳಿವೆ.ಪ್ರಮುಖವಾಗಿ ಕಿವಿ ಹಣ್ಣು, ಹಸಿರು ದ್ರಾಕ್ಷಿ ಇತ್ಯಾದಿಗಳು. ಕಿವಿ ಹಣ್ಣಿನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ನಿಂದಾಗಿ ಇದು ಕ್ಯಾನ್ಸರ್ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಕಿವಿ ಹಣ್ಣು ಹೊಟ್ಟೆಯ ಆರೋಗ್ಯಕ್ಕೂ ಒಳ್ಳೆಯದು.

ಒಣ ಹಣ್ಣುಗಳಾಗಿರುವಂತಹ ಒಣ ದ್ರಾಕ್ಷಿಯು ಒಳ್ಳೆಯ ಆಯ್ಕೆಯಾಗಿದೆ. ನಿಯಮಿತವಾಗಿ ಒಣ ಹಣ್ಣುಗಳ ಸೇವನೆ ಮಾಡುತ್ತಲಿದ್ದರೆ ಇದು ಕ್ಯಾನ್ಸರ್‌ನ್ನು ತಡೆಯುವುದು.

ಇದು ಕ್ಯಾನ್ಸರ್ ತೀವ್ರ ರೂಪಕ್ಕೆ ತಿರುಗದಂತೆ ತಡೆಯುವುದು ಎಂದು ಹೇಳಲಾಗಿದೆ. ವಾರದಲ್ಲಿ ಮೂರರಿಂದ ಐದು ಬಗೆಯ ಹಣ್ಣುಗಳ ಸೇವನೆ ಮಾಡಿದರೆ ಅದರಿಂದ ಕರುಳಿನ ಕ್ಯಾನ್ಸರ್, ಪ್ರಮುಖವಾಗಿ ದೊಡ್ಡ ಕರುಳಿನಲ್ಲಿ ಬೆಳೆಯುವ ಕ್ಯಾನ್ಸರ್ ನ್ನು ಇದು ತಡೆಯುವುದು.

ಸಸ್ಯಜನ್ಯ ರಾಸಾಯನಿಕಗಳು ಕ್ಯಾನ್ಸರ್ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ಅಧ್ಯಯನಗಳು ಹೇಳಿವೆ.ಅನಾನಸಿನಲ್ಲಿ ಇರುವ ಬ್ರೊಮೆಲೈನ್, ಕಿತ್ತಳೆ ಬಣ್ಣದ ಹಣ್ಣುಗಳಲ್ಲಿ ಇರುವ ಕ್ಯಾರೊಟೆನಾಯ್ಡ್, ದಾಳಿಂಬೆಯಲ್ಲಿ ಕಂಡುಬರುವ ಆಂಟಿಆಕ್ಸಿಡೆಂಟ್ ಗಳು.

ಅಧ್ಯಯನಗಳು ಈಗ ಆರಂಭಿಕ ಹಂತದಲ್ಲಿದೆ ಮತ್ತು ಸಸ್ಯಜನ್ಯ ರಾಸಾಯನಿಕಗಳು ಕ್ಯಾನ್ಸರ್ ತಡೆಯುವುದೇ ಎನ್ನುವುದು ಸಂಪೂರ್ಣವಾಗಿ ದೃಢಪಟ್ಟಿಲ್ಲ.

ಆದರೆ ಈ ಹಣ್ಣುಗಳಲ್ಲಿ ಅಧಿಕ ಪ್ರಮಾಣದ ನಾರಿನಾಂಶವಿದೆ. ನಾರಿನಾಂಶವು ಕೆಲವೊಂದು ರೀತಿಯ ಕ್ಯಾನ್ಸರ್ ಗಳನ್ನು ತಡೆಯುವುದು ಮತ್ತು ಆರೋಗ್ಯಕಾರಿ ತೂಕ ಕಾಪಾಡಲು ಇದು ಸಹಕಾರಿ.

Leave A Reply

Your email address will not be published.