1 ಲೋಟ ಹಾಲಿಗೆ ಸ್ವಲ್ಪ ಬೆಲ್ಲ ಬೆರೆಸಿ ಕುಡಿಯೋದ್ರಿಂದ ಏನಾಗತ್ತೆ ಗೊತ್ತಾ?
ಹಾಲನ್ನು ಸಂಪೂರ್ಣ ಆಹಾರ ಎಂದು ಹೇಳಲಾಗುತ್ತದೆ. ಇದಲ್ಲದೆ, ಬೆಲ್ಲವನ್ನು ಹಲವು ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಮನೆಮದ್ದು ಎಂದು ಹೇಳಲಾಗುತ್ತದೆ. ಇವೆರಡನ್ನೂ ಒಟ್ಟಿಗೆ ಬೆರೆಸಿ ಕುಡಿದರೆ ಆರೋಗ್ಯಕ್ಕೆ ಹಲವು ಅದ್ಭುತ ಪ್ರಯೋಜನಗಳು ಲಭ್ಯವಾಗಲಿದೆ. ಹಾಗಿದ್ದರೆ, ಉತ್ತಮ ಆರೋಗ್ಯ ಪ್ರಯೋಜನಗಳಿಗಾಗಿ ಹಾಲು-ಬೆಲ್ಲವನ್ನು ಹೇಗೆ ಮತ್ತು ಯಾವಾಗ ಸೇವಿಸಬೇಕು ಎಂದು ತಿಳಿಯಿರಿ.
ಹಾಲು ಸಂಪೂರ್ಣ ಆಹಾರವಾಗಿದ್ದು, ಇದನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದ.ಎ ಸಾಮಾನ್ಯವಾಗಿ, ಕೆಲವರು ಬರೀ ಹಾಲನ್ನು ಕುಡಿಯಲು ಇಷ್ಟ ಪಡುತ್ತಾರೆ. ಆದರೆ, ಬರೀ ಹಾಲಿನ ಸೇವನೆಯಿಂದ ಮಲಬದ್ಧತೆ, ಸಂಧಿವಾತ, ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತೆಯೇ, ಹಾಲಿಗೆ ಸಕ್ಕರೆ ಬೆರೆಸಿ ಕುಡಿಯುವುದರಿಂದ ಅದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಇದರ ಬದಲಾಗಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸುವುದರಿಂದ ಇದರ ಅದ್ಭುತ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಹಾಲು ಮತ್ತು ಬೆಲ್ಲ ಎರಡೂ ಕೂಡ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಹಾಲು-ಬೆಲ್ಲ ಇವೆರಡನ್ನೂ ಒಟ್ಟಿಗೆ ಸಂಯೋಜಿಸಿದಾಗ ಅದರ ಪ್ರಯೋಜನಗಳು ಇಮ್ಮಡಿಗೊಳ್ಳುತ್ತವೆ.
ಆಹಾರ ತಜ್ಞರ ಪ್ರಕಾರ, ಪ್ರತಿ ದಿನ ರಾತ್ರಿ ಮಲಗುವ ಮುನ್ನ ಹಾಲಿಗೆ ಬೆಲ್ಲ ಬೆರಸಿ ಸೇವಿಸುವುದರಿಂದ ಆರೋಗ್ಯಕ್ಕೆ ಅದ್ಭುತ ಪ್ರಯೋಜಗಳು ಲಭ್ಯವಾಗಲಿವೆ. ಇದರಲ್ಲಿರುವ ವಿಟಮಿನ್ ಎ, ಡಿ, ಸತು, ಕಬ್ಬಿಣ ಮತ್ತು ಸೆಲೆನಿಯಮ್ ಸೇರಿದಂತೆ ಅನೇಕ ಪೋಷಕಾಂಶಗಳು ಹಿಮೊಗ್ಲೋಬಿನ್ ಹೆಚ್ಚುವುದರ ಜೊತೆಗೆ ಸ್ತ್ರೀಯರ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ ಎನ್ನಲಾಗುವುದು.
ಉತ್ತಮ ಆರೋಗ್ಯ ಪ್ರಯೋಜನಗಳಿಗಾಗಿ ಹಾಲು-ಬೆಲ್ಲವನ್ನು ಹೇಗೆ ಮತ್ತು ಯಾವಾಗ ಸೇವಿಸಬೇಕು?
ಬಿಸಿ ಹಾಲಿಗೆ ನಿಮಗೆ ಬೇಕಾದಷ್ಟು ಬೆಲ್ಲವನ್ನು ಸೇರಿಸಿ ಯಾವಾಗ ಬೇಕಾದರೂ ಕುಡಿಯಬಹುದು. ಆದರೆ, ಇದರ ಪೂರ್ಣ ಪ್ರಯೋಜನವನ್ನು ಪಡೆಯಲು ನಿತ್ಯ ರಾತ್ರಿ ಮಲಗುವ ಮೊದಲು ಒಂದು ಲೋಟ ಹಾಲಿಗೆ ಒಂದು ಚಮಚದಷ್ಟು ಬೆಲ್ಲ ಬೆರೆಸಿ ಸೇವಿಸುವುದು ಉತ್ತಮ.
ಹಾಲಿನೊಂದಿಗೆ ಬೆಲ್ಲ ಸವಿಯುವುದರ ಪ್ರಯೋಜನಗಳು:
- ಉದರ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ:ತಜ್ಞರ ಪ್ರಕಾರ, ಹಾಲಿನೊಂದಿಗೆ ಬೆಲ್ಲ ಬೆರೆಸಿ ಸವಿಯುವುದರಿಂದ ಅಜೀರ್ಣ, ಹೊಟ್ಟೆ ಉರಿ, ಮಲಬದ್ಧತೆ ಸೇರಿದಂತೆ ಉದರ ಸಂಬಂಧಿತ ಹಲವು ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ.
- ರೋಗ ನಿರೋಧಕ ಶಕ್ತಿ ಹೆಚ್ಚಳ:ಪ್ರತಿದಿನ ಹಾಲು-ಬೆಲ್ಲ ಕುಡಿಯುವುದರಿಂದ ಅದರಲ್ಲೂ ಮುಖ್ಯವಾಗಿ ಚಳಿಗಾಲದಲ್ಲಿ ಈ ಅಭ್ಯಾಸ ರೂಢಿಸಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
- ನಿದ್ರಾ ಹೀನತೆ ಸಮಸ್ಯೆಯಿಂದ ಪರಿಹಾರ:ನಿತ್ಯ ಮಲಗುವ ಮೊದಲು ಹಾಲಿನೊಂದಿಗೆ ಬೆಲ್ಲ ಮಿಕ್ಸ್ ಮಾಡಿ ಕುಡಿಯುವುದರಿಂದ ಉತ್ತಮ ನಿದ್ರೆ ಪಡೆಯಬಹುದು. ಇದರಿಂದಾಗಿ ನಿದ್ರಾಹೀನತೆ ಸಮಸ್ಯೆಯೂ ದೂರವಾಗುತ್ತದೆ.
- ಋತುಚಕ್ರದ ಸಮಸ್ಯೆಯಿಂದ ಪರಿಹಾರ:ಮಹಿಳೆಯರ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗೂ ಕೂಡ ಹಾಲು-ಬೆಲ್ಲ ಒಳ್ಳೆಯ ಮನೆಮದ್ದು. ನಿತ್ಯ ಹಾಲಿನೊಂದಿಗೆ ಬೆಲ್ಲ ಬೆರೆಸಿ ಸೇವಿಸುವುದರಿಂದ ಋತುಚಕ್ರ ಸರಿಯಾಗಿ ಆಗುತ್ತದೆ. ಮಾತ್ರವಲ್ಲ, ಈ ಸಮಯದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಮುಟ್ಟಿನ ನೋವಿನ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ.
- ಮಂಡಿ ನೋವಿನ ಸಮಸ್ಯೆಯಿಂದ ಪರಿಹಾರ:ಮಂಡಿ ನೋವು, ಕೀಲುಗಳಲ್ಲಿ ನೋವು ಹೊಂದಿರುವವರು ನಿತ್ಯ ಬೆಲ್ಲ ಬೆರೆಸಿದ ಹಾಲನ್ನು ಕುಡಿಯುವುದರಿಂದ ಶೀಘ್ರದಲ್ಲೇ ಈ ಸಮಸ್ಯೆಯಿಂದ ಪರಿಹಾರ ಗೋಚರಿಸುತ್ತದೆ.