ಗ್ಯಾಸ್ಟ್ರಿಕ್ ಟ್ರಬಲ್ ನೀವಾರಿಸುವ ಉತ್ತಮ ಪರಿಹಾರ!

0 60

ಗ್ಯಾಸ್ಟ್ರಿಕ್ ಸಮಸ್ಸೆ ಪ್ರತಿಯೊಬ್ಬರನ್ನು ಬೆನ್ನು ಬಿಡದೆ ಕಾಡುತ್ತಿದೆ. ನಾವು ಇಷ್ಟ ಪಟ್ಟ ತಿನ್ನುವ ಯಾವುದೇ ಆಹಾರ ಗ್ಯಾಸ್ಟ್ರಿಕ್ ಸಮಸ್ಸೆಯನ್ನು ಉಂಟು ಮಾಡುವ ಅಂತಕ್ಕೆ ತಲುಪಿದೆ. ಹಾಗಾಗಿ ಯಾವುದನ್ನೂ ತಿನ್ನಬೇಕು ಬಿಡಬೇಕು ಎನ್ನುವುದು ಅರ್ಥ ಆಗುವುದಿಲ್ಲ.ನಮ್ಮ ಜೀವನದಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ಮತ್ತೆ ಜನುಮದಲ್ಲಿ ಈ ಸಮಸ್ಸೆ ಮತ್ತೆ ನಮ್ಮನ್ನು ಕಾಡುವುದಿಲ್ಲ.

ನಾವು ಸೇವಿಸುವ ಆಹಾರ ಎಷ್ಟು ಚೆನ್ನಾಗಿ ಜೀರ್ಣ ಆಗುತ್ತದೆ ಎನ್ನುವುದು ಮುಖ್ಯ. ಆಹಾರ ಚೆನ್ನಾಗಿ ಜೀರ್ಣ ಆಗದೆ ಇದ್ದರೆ ಗ್ಯಾಸ್, ಹೊಟ್ಟೆ ಉಬ್ಬರ, ಮಲಬದ್ಧತೆ ಸಮಸ್ಸೆ ಕಾಡುತ್ತದೆ. ಜೀರ್ಣ ಕ್ರಿಯೆ ಸರಿಯಾಗಿ ಆಗಬೇಕು ಎಂದರೆ ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ನಿಮಗೆ ಎಷ್ಟು ಬೇಕೋ ಅಷ್ಟು ತಿನ್ನಿ ವಿಪರೀತವಾಗಿ ಆಹಾರವನ್ನು ಸೇವನೆ ಮಾಡುವುದು ಅಥವಾ ಕಡಿಮೆ ಆಹಾರವನ್ನು ಸೇವಿಸುವುದು ಇವೆರಡು ಒಳ್ಳೆಯದಲ್ಲ. ನಿಮ್ಮ ದೇಹದ ನಿಮಗೆ ಸೂಚನೆಯನ್ನು ನೀಡುತ್ತದೆ. ಅಷ್ಟೇ ಆಹಾರ ಸೇವನೆ ಮಾಡಿದರೆ ಒಳ್ಳೆಯದು. ವಿಪರೀತ ಆಹಾರ ಸೇವನೆ ಮಾಡಿದರೆ ಆಹಾರ ಜೀರ್ಣವಾಗದೆ ಹೊಟ್ಟೆಯಲ್ಲಿ ಉಳಿದು ಗ್ಯಾಸ್ ಸಮಸ್ಸೆಗೆ ಕಾರಣವಾಗುತ್ತದೆ. ಆದ್ದರಿಂದ ಸರಿಯಾದ ಪ್ರಮಾಣದಲ್ಲಿ ಆಹಾರವನ್ನು ಸೇವಿಸುವುದು ತುಂಬಾನೇ ಮುಖ್ಯ.

ವಿರುದ್ದು ಗುಣ ಇರುವ ಆಹಾರವನ್ನು ಸೇವನೆ ಮಾಡಬಾರದು. ಇದರಿಂದ ತೊಂದರೆ ಅನುಭವಿಸಬೇಕಾಗುತ್ತದೆ.ಉದಾರಣೆಗೆ ಹಾಲಿನ ಜೊತೆ ಹಣ್ಣಿನ ಸೇವನೆ, ಟೀ ಮತ್ತು ಹಾಲು ಉಪ್ಪು ಇರುವ ಆಹಾರ ಅಂದರೆ ಚಿಪ್ಸ್ ಮಿಕ್ಸ್ಚಾರ್ ಸೇವಿಸುವುದು, ವಿಪರೀತ ಖಾರ ಸೇವನೆ ಮತ್ತು ಊಟ ಬಳಿಕ ಚಹಾ ಸೇವನೆ ಮತ್ತು ಖಾಲಿ ಹೊಟ್ಟೆಗೆ ಚಹಾದ ಸೇವನೆ ಇವೆಲ್ಲವೂ ತಪ್ಪು. ಸರಿಯಾದ ರೀತಿಯಲ್ಲಿ ಸೇವನೆ ಮಾಡಿದರೆ ಜೀರ್ಣ ಕ್ರಿಯೆ ಚೆನ್ನಾಗಿ ಇರುತ್ತದೆ.

ಇನ್ನು ಫ್ರಿಜ್ ನಲ್ಲಿ ಇಟ್ಟಿರುವ ಆಹಾರವನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬೇಡಿ. ಆದಷ್ಟು ಬಿಸಿ ಇರುವ ಆಹಾರವನ್ನು ಸೇವನೆ ಮಾಡಿದರೆ ಯಾವುದೇ ತೊಂದರೆ ಆಗುವುದಿಲ್ಲ ಹಾಗು ಊಟವನ್ನು ಸರಿಯಾಗಿ ಜಗಿದು ಸೇವನೆ ಮಾಡಬೇಕು. ಇನ್ನು ಊಟ ಮಾಡಿದ ತಕ್ಷಣ ನೀರನ್ನು ಕುಡಿಯಬಾರದು. ಊಟ ಮಾಡಿ ಮೂವತ್ತು ನಿಮಿಷ ಬಳಿಕ ನೀರು ಕುಡಿದರೆ ಉತ್ತಮ.ಈ ಕೆಲವು ತಪ್ಪು ಸರಿಪಡಿಸಿದರೆ ಯಾವುದೇ ಕಾರಣಕ್ಕೂ ಗ್ಯಾಸ್ ತೊಂದರೆ ಈ ಜನ್ಮದಲ್ಲಿ ಕಾಡುವುದಿಲ್ಲ.

ಗ್ಯಾಸ್ ಸಮಸ್ಸೆಗೆ ಉತ್ತಮ ಮನೆಮದ್ದು ಎಂದರೆ ಸೋಂಪು ನೀರು. ವಿಪರೀತ ಗ್ಯಾಸ್ ಸಮಸ್ಸೆ ಕಾಡಿದರೇ ಒಂದು ಲೋಟ ನೀರಿಗೆ ಒಂದು ಚಮಚ ಸೋಂಪು ಕಾಳನ್ನು ಹಾಕಿ ಚೆನ್ನಾಗಿ ಕುದಿಸಿ ನೀರನ್ನು ಕುಡಿಯಿರಿ. ಇದನ್ನು 5 ವರ್ಷ ಮೇಲ್ಪಟ್ಟ ಮಕ್ಕಳಿಂದ ಹಿಡಿದು ಯಾರು ಬೇಕಾದರೂ ಕುಡಿಯಬಹುದು. ತುಂಬಾ ಗ್ಯಾಸ್ ಸಮಸ್ಸೆ ಇದ್ದರೆ ಊಟದ ಬಳಿಕ 30ನಿಮಿಷ ಬಳಿಕ ಸೇವನೆ ಮಾಡಿ. ಇದನ್ನು ಸಂಪೂರ್ಣವಾಗಿ ಗುಣ ಆಗುವ ತನಕ ಸೇವನೆ ಮಾಡಿ.

Leave A Reply

Your email address will not be published.