ಸಕ್ಕರೆ ಕಾಯಿಲೆ ಇದ್ದವರಿಗೆ ಪಿಸ್ತಾ ಸೇವನೆ ಎಷ್ಟೊಂದು ಆರೋಗ್ಯಕರ ಗೊತ್ತೇ.?

0 93

ನಮ್ಮ ಆರೋಗ್ಯಕ್ಕೆ ಯಾವ ಸಮಯದಲ್ಲಿ ಯಾವ ಆಹಾರ ಪದಾರ್ಥದಿಂದ ಲಾಭವಾಗುತ್ತದೆ ಎಂಬುದನ್ನು ಹೇಳಲು ಬರುವುದಿಲ್ಲ. ಅದಕ್ಕೆ ನಾವು ಸಮತೋಲ ನವಾದ ಆಹಾರ ಪದ್ಧತಿಯನ್ನು ಅನುಸರಿಸಬೇಕು. ನಮ್ಮ ಆರೋಗ್ಯಕ್ಕೆ ಎಲ್ಲವೂ ಬೇಕು. ಎಲ್ಲಾ ಪೌಷ್ಟಿಕಾಂಶಗಳು ಬೇಕು. ನಾವು ಸೇವಿಸುವ ಸಾಮಾನ್ಯ ಆಹಾರ ಪದಾರ್ಥಗಳು ನಮ್ಮ ಪ್ರತಿದಿನದ ಕಾರ್ಯ ಚಟುವಟಿಕೆಗೆ ಅನುಕೂಲವಾಗುವ ಹಾಗೆ ಬೇಕಾದ ಪೌಷ್ಟಿಕ ಸತ್ವಗಳನ್ನು ಒದಗಿಸುತ್ತ ಹೋಗುತ್ತವೆ.

ಆದರೆ ಇದಕ್ಕೂ ಮೀರಿದ ಆರೋಗ್ಯ ಸಮಸ್ಯೆಗಳಿಗೆ ನಾವು ಇನ್ನಿತರ ಆರೋಗ್ಯಕರ ಆಹಾರಗಳನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಅದು ಡ್ರೈ ಫ್ರೂಟ್ಸ್ ಎಂದರೆ ತಪ್ಪಾಗುವುದಿಲ್ಲ. ಡ್ರೈ ಫ್ರೂಟ್ಸ್ ಗಳ ಆರೋಗ್ಯಕರ ಮಹತ್ವ ನಿಮಗೆ ತಿಳಿದೇ ಇದೆ. ಅದರಲ್ಲೂ ಪಿಸ್ತಾ ಬೀಜಗಳು ಈ ಕೆಳಗಿನ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ.

ಹೃದಯಕ್ಕಂತೂ ತುಂಬಾ ಒಳ್ಳೆಯದು

ಇಂದು ಜನರು ಕೇವಲ ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಯಾರೂ ಬೇಕಾದರೂ ಹೇಳಬಹುದು. ಏಕೆಂದರೆ ಜಗತ್ತು ಆ ರೀತಿ ಆಗಿದೆ. ಕೇವಲ ದುಡಿಮೆಯ ಮೇಲೆ ಮಾತ್ರ ಜನರ ಮನಸ್ಸಿದೆ. ಹೀಗಾಗಿ ಜನರು ತಮ್ಮ ಸಂಪೂರ್ಣ ಗಮನವನ್ನು ಕೆಲಸದ ಮೇಲೆ ಇರಿಸಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ.

ಇದು ಹೃದಯಕ್ಕೆ ಎಂದಿಗೂ ಡೇಂಜರ್. ಹೀಗಾಗಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಪಿಸ್ತಾ ಸೇವನೆ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ವನ್ನು ಕಡಿಮೆ ಮಾಡಿದಂತೆ ಆಗುತ್ತದೆ.

ಏಕೆಂದರೆ ಇದರಲ್ಲಿ ಹೃದಯಕ್ಕೆ ಉಪಯುಕ್ತವಾದ ಅಮೈನೋ ಆಮ್ಲಗಳು, ಆಂಟಿ ಆಕ್ಸಿಡೆಂಟ್ ಗಳು, ಸ್ಟೆರಾಲ್ ಗಳು ಹೇರಳ ವಾಗಿವೆ. ಹೀಗಾಗಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಯನ್ನು ಇದು ತಡೆಯುತ್ತದೆ ಮತ್ತು ಹೃದಯವನ್ನು ಚೆನ್ನಾಗಿ ಕಾರ್ಯ ನಿರ್ವಹಿಸು ವಂತೆ ನೋಡಿಕೊಳ್ಳುತ್ತದೆ.

ಕಣ್ಣುಗಳ ದೃಷ್ಟಿ ಕಾಪಾಡುತ್ತದೆ

ಈಗಿನ ಡಿಜಿಟಲ್ ವಿದ್ಯಮಾನದಲ್ಲಿ ಎಲ್ಲಾ ಕೆಲಸಗಳು ಸಹ ಕಂಪ್ಯೂ ಟರ್ ಮತ್ತು ಮೊಬೈಲ್ ನಿಂದಲೇ ನಡೆಯುತ್ತವೆ. ಹೀಗಾಗಿ ಬಿಟ್ಟ ಕಣ್ಣು ಬಿಟ್ಟ ಹಾಗೆ ಈ ಸಾಧನಗಳನ್ನು ನೋಡಿ ಕೊಂಡು ದಿನಪೂರ್ತಿ ಕುಳಿತುಕೊಳ್ಳಬೇಕಾಗುತ್ತದೆ.

ಇದು ಕಣ್ಣುಗಳ ಆರೋಗ್ಯದ ಮೇಲೆ ತೀವ್ರತರದ ಪ್ರಭಾವ ಬೀರುತ್ತದೆ. ಹೀಗಾಗಿ ನಿಮ್ಮ ಕಣ್ಣುಗಳ ಆರೋಗ್ಯವನ್ನು ಕಾಪಾಡಿ ಕೊಳ್ಳಬೇಕಾದ ಅನಿವಾರ್ಯತೆ ಇದೆ.

ನಿಮ್ಮ ಆಹಾರ ಪದ್ಧತಿಯಲ್ಲಿ ಪಿಸ್ತಾಗಳನ್ನು ಸೇರಿಸಿಕೊಳ್ಳುವು ದರಿಂದ ಕಣ್ಣುಗಳ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ lutein ಮತ್ತು zeaxanthin ಸಿಕ್ಕಂತೆ ಆಗುತ್ತದೆ.

ಅಷ್ಟೇ ಅಲ್ಲದೆ ಪಿಸ್ತಾ ಬೀಜಗಳಲ್ಲಿ ವಿಟಮಿನ್ ಎ, ವಿಟಮಿನ್ ಇ, ಜಿಂಕ್, ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಪ್ರಮಾಣ ಕೂಡ ಹೇರಳವಾಗಿ ಕಂಡುಬರುವುದರಿಂದ ಉರಿಯುತ ನಿಯಂತ್ರಣ ವಾಗುತ್ತದೆ ಮತ್ತು ಮೂಳೆಗಳ ಹಾಗೂ ಕೀಲುಗಳ ಆರೋಗ್ಯ ರಕ್ಷಣೆಯಾಗುತ್ತದೆ.​

ತೂಕ ನಿಯಂತ್ರಣ ಸಾಧ್ಯ

ಪಿಸ್ತಾ ಬೀಜಗಳಿಂದ ಬೊಜ್ಜು ತುಂಬಿಕೊಂಡು ದಪ್ಪ ಇರುವವರು ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡು ಸಣ್ಣ ಆಗಬಹುದು ಎಂದು ಹೇಳುತ್ತಾರೆ. ಸಂಜೆಯ ಸಮಯದಲ್ಲಿ ಸ್ನಾಕ್ಸ್ ತರಹ ಪಿಸ್ತಾ ಬೀಜಗಳನ್ನು ಸೇವಿಸುವುದರಿಂದ ತೂಕ ನಿಯಂತ್ರಣವಾಗುತ್ತದೆ ಮತ್ತು ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ.

ಇದರಿಂದ ಹೊಟ್ಟೆ ಹಸಿವು ನಿಯಂತ್ರಣವಾಗುವುದು ಮಾತ್ರ ವಲ್ಲದೆ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ಸಿಕ್ಕಂತೆ ಆಗುತ್ತದೆ. ಆರೋಗ್ಯಕರವಾದ ರೀತಿಯಲ್ಲಿ ನಿಮ್ಮ ತೂಕ ಪಿಸ್ತಾ ಬೀಜಗ ಳಿಂದ ನಿರ್ವಹಣೆಯಾಗುತ್ತದೆ.

ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡುತ್ತದೆ

ಪಿಸ್ತಾ ಬೀಜಗಳು ಸಕ್ಕರೆ ಕಾಯಿಲೆ ಇರುವ ಜನರಿಗೆ ತುಂಬಾ ಒಳ್ಳೆಯದು. ಒಂದು ವೇಳೆ ಸಕ್ಕರೆ ಕಾಯಿಲೆ ಬರುತ್ತದೆ ಎನ್ನುವ ಭಯ ಇದ್ದವರು ಕೂಡ ಪಿಸ್ತಾ ಬೀಜಗಳನ್ನು ಸೇವಿಸಿ ತಮ್ಮ ಬ್ಲಡ್ ಶುಗರ್ ಲೆವೆಲ್ ನಿಯಂತ್ರಣ ಮಾಡಿಕೊಳ್ಳಬಹುದು. ಇದು ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡು ವುದು ಮಾತ್ರವಲ್ಲದೆ ಇನ್ಸುಲಿನ್ ಹಾಗೂ ಗ್ಲುಕೋಸ್ ಪ್ರಮಾಣವನ್ನು ನಿರ್ವಹಣೆ ಮಾಡುತ್ತದೆ.

ಕರುಳಿನ ಆರೋಗ್ಯಕ್ಕೆ ಒಳ್ಳೆಯದು

ಪಿಸ್ತಾ ಬೀಜಗಳಲ್ಲಿ ನಾರಿನ ಪ್ರಮಾಣ ಹೆಚ್ಚಾಗಿ ಸಿಗುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.

ದೇಹದಲ್ಲಿ ಪ್ರೋಟೀನ್, ಕೊಬ್ಬಿನ ಅಂಶ ಮತ್ತು ಕಾರ್ಬೋ ಹೈಡ್ರೇಟ್ ಪ್ರಮಾಣಗಳನ್ನು ನಿರ್ವಹಣೆ ಮಾಡಿ ಸೇವಿಸುವ ಆಹಾರದಲ್ಲಿ ಕಂಡು ಬರುವ ಪೌಷ್ಟಿಕಾಂಶಗಳನ್ನು ದೇಹ ಚೆನ್ನಾಗಿ ಹೀರಿಕೊಳ್ಳುವಂತೆ ಮಾಡುತ್ತದೆ.

ಆರೋಗ್ಯಕರವಾದ ಕೊಬ್ಬಿನ ಅಂಶಗಳು ಸಹ ಇದರಲ್ಲಿ ಇರುತ್ತವೆ ಜೊತೆಗೆ ಕರಗುವ ವಿಟಮಿನ್ ಅಂಶ ಹಾಗೂ ಇತರ ಪೌಷ್ಟಿಕಾಂಶಗಳು ಇದರಲ್ಲಿ ಅಪಾರ ಪ್ರಮಾಣದಲ್ಲಿ ಇರುತ್ತದೆ. ಇದರಿಂದ ಉತ್ತಮ ಆರೋಗ್ಯ ಪ್ರಯೋಜನಗಳನ್ನು ನಿರೀಕ್ಷೆ ಮಾಡಬಹುದು.

Leave A Reply

Your email address will not be published.