ಅತಿಯಾದ ನಿದ್ರೆ ಅಪಾಯ!

0 45

ನೀವು ದಿನದಲ್ಲಿ ಎಷ್ಟು ಗಂಟೆ ನಿದ್ದೆ ಮಾಡುತ್ತೀರಾ? ದಿನಕ್ಕೆ ಕಮ್ಮಿಯೆಂದರೂ 7-8 ಗಂಟೆ ನಿದ್ದೆ ನಮ್ಮ ದೇಹಕ್ಕೆ ಅವಶ್ಯಕ. ಅದಕ್ಕಿಂತ ಕಮ್ಮಿಅಥವಾ ಜಾಸ್ತಿ ನಿದ್ದೆ ಮಾಡುವ ಅಭ್ಯಾಸದಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುವುದು. ಸವಿ ನಿದ್ದೆಗಾಗಿ ಮಲಗುವ ಮುನ್ನ ನಿಮ್ಮ ಮೊಬೈಲ್‌ ದೂರವಿಡಿ.

ಆರೋಗ್ಯವಾಗಿರಲು ಆಹಾರಶೈಲಿಯಷ್ಟೇ ಮುಖ್ಯ ಕಣ್ಣಿಗೆ ಸುಖ ನಿದ್ದೆ. ನಿದ್ದೆ ಕಮ್ಮಿಯಾದರೆ ಹಲವಾರು ಆರೋಗ್ಯಕರ ಸಮಸ್ಯೆ ಕಾಡುವುದು ಎನ್ನುತ್ತಾರೆ ವೈದ್ಯರು. ಪ್ರತಿದಿನ ದೇಹಕ್ಕೆ ವಿಶ್ರಾಂತಿ ಪಡೆದುಕೊಳ್ಳಬೇಕೆಂದರೆ ನಿತ್ಯ ನಿದ್ರೆ ಮಾಡಲೇಬೇಕು. ನಿದ್ರೆ ಕಡಿಮೆಯಾದರೂ ಆರೋಗ್ಯ ಹಾಳಾಗುತ್ತದೆ.

ನಿದ್ದೆ ಕಡಿಮೆಯಾಗುತ್ತಿದ್ದಂತೆ ದೇಹದಲ್ಲಿ ಸುಸ್ತು ಕಾಣಿಸಿಕೊಳ್ಳುವುದು, ಇದರಿಂದಾಗಿ ಮೈ ತೂಕ ಹೆಚ್ಚುವುದು, ಹಾರ್ಮೋನ್‌ ತೊಂದರೆ ಕಾಣಿಸಿಕೊಳ್ಳುವುದು, ಪುರುಷರಲ್ಲಿ ಟೆಸ್ಟೋಸ್ಟಿರೋನೆ ಕಡಿಮೆಯಾಗುವುದು.

ಹಾಗೆಂದು 7 ಗಂಟೆಗಿಂತಲೂ ಅಧಿಕ ಹೊತ್ತು ನಿದ್ರೆ ಮಾಡಿದರೂ ಕೂಡ ಆರೋಗ್ಯ ಸಮಸ್ಯೆ ಎದುರಾಗಬಹುದು. ಬೆನ್ನು ನೋವು ಬರಬಹುದು. ಡಿಪ್ರೆಷನ್‌ ಕಾಡಬಹುದು. ಹೃದಯ ಸಂಬಂಧಿ ರೋಗ, ಸ್ಟ್ರೋಕ್‌ ಹಾಗೂ ಡಯಬೀಟಿಸ್‌ಗೆ ತುತ್ತಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ನಿದ್ರೆ ಅವಶ್ಯಕತೆ
ಸಂಶೋಧನೆಯ ಪ್ರಕಾರ, 7 ಗಂಟೆಯ ಆಸು ಪಾಸು ನಿದ್ರೆ ಮಾಡುವವರಲ್ಲಿ ಆರೋಗ್ಯ ಸಮಸ್ಯೆ ಕಡಿಮೆಯಂತೆ. ಹಾಗಾಗಿ ನಿದ್ರೆಗೆ ಜಾರುವ ಮುನ್ನ ಮೊಬೈಲ್‌, ಟ್ಯಾಬ್ಲೆಟ್‌, ಟಿವಿಯನ್ನು ಉಪಯೋಗಿಸದಿದ್ದರೆ ಉತ್ತಮ ಎನ್ನುತ್ತಾರೆ ವೈದ್ಯರು.

Leave A Reply

Your email address will not be published.