ಎಲೆಕೋಸು ಮಧುಮೆಹಕ್ಕೆ ಉತ್ತಮ!
ಇತ್ತೀಚಿಗೆ ಸಕ್ಕರೆ ಕಾಯಿಲೆ ಪ್ರತಿಯೊಬ್ಬರಲ್ಲು ಕಾಡುತ್ತಿದೆ. ಸಕ್ಕರೆ ಕಾಯಿಲೆ ಇರುವ ಪ್ರತಿಯೊಬ್ಬರು ಕೂಡ ಈ ವಿಚಾರವನ್ನು ತಿಳಿದುಕೊಳ್ಳಬೇಕು. ಸಕ್ಕರೆ ಕಾಯಿಲೆ ಬಂದ ಮೇಲೆ ಮನುಷ್ಯ ಆರೋಗ್ಯ ಬದಲಾಗಿಬಿಡುತ್ತದೆ. ಮೊದಲಿನ ರೀತಿ ಇರುವುದಕ್ಕೆ ಸಾಧ್ಯವಾಗುವುದಿಲ್ಲ. ಮಧುಮೇಹ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ಪ್ರತಿಯೊಬ್ಬರು ಈ ಪರಿಹಾರವನ್ನು ಮಾಡಿಕೊಳ್ಳಬೇಕು. ಮಧುಮೇಹ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಲು ಆಹಾರ ಪದ್ಧತಿ ಅತ್ಯುತ್ತಮ ವಾಗಿರಬೇಕು.ಹಣ್ಣು ಮತ್ತು ತರಕಾರಿಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಬೇಕು.
ಅದರಲ್ಲೂ ಎಲೆಕೋಸನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಇದನ್ನು ಸೇವನೆ ಮಾಡುವುದರಿಂದ ಮಧುಮೇಹ ಕಡಿಮೆಯಾಗುತ್ತದೆ. ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಮೆಟಬಾಲಿಸಂ ಪ್ರಕ್ರಿಯೆ ಅತ್ಯುತ್ತಮವಾಗಿ ನಡೆಯುತ್ತದೆ ಮತ್ತು ನೈಸರ್ಗಿಕವಾದ ಔಷಧಿಯಾಗಿ ಎಲೆಕೋಸು ಕೆಲಸ ಮಾಡುತ್ತದೆ.
ಎಲೆಕೋಸಿನಲ್ಲಿರುವ ಅಪಾರ ಪ್ರಮಾಣದ ಆಂಟಿಆಕ್ಸಿಡೆಂಟ್ ಅಂಶಗಳ ಜೊತೆಗೆ ನಿಮ್ಮ ರಕ್ತದಲ್ಲಿನ ಗ್ಲುಕೋಸ್ ಅಂಶವನ್ನು ಕಡಿಮೆ ಮಾಡುವ ಗುಣಗಳು ಕೂಡ ಇದರಲ್ಲಿ ಇದೆ. ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿವಾರಣೆಯ ಮಾಡುವುದರಲ್ಲಿ ಇದರ ಪಾತ್ರ ತುಂಬಾ ದೊಡ್ಡದು. ನೀವು ಆಹಾರ ಸೇವನೆ ಮಾಡಿದ ನಂತರ ಇದ್ದಕ್ಕಿದ್ದಂತೆ ಸಕ್ಕರೆ ಅಂಶ ಏರಿಕೆ ಆಗುವ ಸಾಧ್ಯತೆ ಇರುವುದಿಲ್ಲ.
ಎಲೆಕೋಸಿನಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ನಾರಿನಾಂಶ ಸಿಗುತ್ತದೆ. ಹೀಗಾಗಿ ಮಧುಮೇಹ ಸಮಸ್ಯೆ ಹೊಂದಿದವರಿಗೆ ಇದು ಒಂದು ಅದ್ಭುತವಾದ ನೈಸರ್ಗಿಕ ಆಹಾರ. ಇದನ್ನು ಸೇವನೆ ಮಾಡಿದ ನಂತರ ರಕ್ತದಲ್ಲಿ ಯಾವುದೇ ಸಕ್ಕರೆ ಅಂಶ ಏರಿಕೆ ಆಗುವುದಿಲ್ಲ. ಅಷ್ಟೇ ಅಲ್ಲದೆ ದೇಹದಲ್ಲಿ ಕಿಡ್ನಿಯ ಕಾರ್ಯಕ್ಷಮತೆಯನ್ನು ಕೂಡ ನಿರ್ವಹಣೆ ಮಾಡುತ್ತದೆ. ಇನ್ನು ವಾರಕ್ಕೆ ಮೂರು ಬಾರಿ ಎಲೆಕೋಸನ್ನು ಆಹಾರದಲ್ಲಿ ಬಳಸಿ ಸೇವನೆ ಮಾಡಬೇಕು ಹಾಗೂ ಹಸಿ ಎಲೆಕೋಸು ಜ್ಯೂಸ್ ತಯಾರು ಮಾಡಿ ಸೇವನೆ ಮಾಡಬಹುದು.