ಬೇಸಿಗೆಯಲ್ಲಿ ಕಾಲದಲ್ಲಿ ರಾತ್ರಿ ವೇಳೆ ಅಂಡರ್ ವೆರ್ ಹಾಕಿಕೊಳ್ಳದೆ ಮಲಗುವುದರಿಂದ ಆಗುವ ಲಾಭಗಳು!

0 162

ಬೇಸಿಗೆಯಲ್ಲಿ ಅತಿಯಾಗಿ ಪ್ರತಿಯೊಬ್ಬರ ಬಾಯಿಯಿಂದ ಕೇಳಿಬರುವಂತಹ ಮಾತೆಂದರೆ ಅದು ಸೆಕೆ…ಸೆಕೆ…ಸೆಕೆ ಎನ್ನುವುದು. ಯಾಕಪ್ಪಾ ದೇವರು ಇಷ್ಟು ಬಿಸಿಲು ಹಾಕಿದ್ದಾನೆ ಎಂದು ಪ್ರಶ್ನಿಸುವವರು ಇದ್ದಾರೆ.

ತಡೆದುಕೊಳ್ಳಲು ಆಗದೆ ಇರುವಷ್ಟು ಸೆಕೆ ಇಂದಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಇದಕ್ಕೆ ಹವಾಮಾನ ವೈಪರಿತ್ಯವೂ ಕಾರಣವಾಗಿರ ಬಹುದು. ತೀವ್ರವಾದ ಬಿಸಿಲು, ಅತಿಯಾದ ಮಳೆ, ಕಂಗೆಡಿಸುವ ಚಳಿ ಇದು ಹವಾಮಾನ ವೈಪರಿತ್ಯದ ಕೆಲವು ಲಕ್ಷಣಗಳು.

ಇದು ಮನುಷ್ಯನು ತಾನಾಗಿಯೇ ಮಾಡಿಕೊಂಡಿರುವಂತಹ ಸಮಸ್ಯೆಗಳು.

ಬೇಸಗೆಯಲ್ಲಿ ಒಳ ಉಡುಪು ಧರಿಸಬಾರದಂತೆ!

ಬೇಸಗೆಯಲ್ಲಿ ನಾವು ಧರಿಸುವಂತಹ ಬಟ್ಟೆಯು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ತುಂಬಾ ಬಿಗಿಯಾಗಿರುವ, ದಪ್ಪದ ಬಟ್ಟೆ ಧರಿಸಿದರೆ ಅದರಿಂದ ಹೃದಯದ ಮೇಲೆ ಪರಿಣಾಮವಾಗುವುದು ಎಂದು ಹೇಳಲಾಗುತ್ತದೆ.

ಇಂತಹ ಸಂದರ್ಭದಲ್ಲಿ ಒಳಉಡುಪು ಯಾವ ರೀತಿಯದ್ದು ಧರಿಸಬೇಕು ಎನ್ನುವದನ್ನು ಹೇಳಿಕೊಡಲಿದ್ದೇವೆ. ಪುರುಷರು ಹಾಗೂ ಮಹಿಳೆಯರು ಇಂದಿನ ದಿನಗಳಲ್ಲಿ ಹೆಚ್ಚಾಗಿ ಹತ್ತಿ ಬಟ್ಟೆಯ ಬದಲಿಗೆ ಸಿಲ್ಕ್ ನ್ನು ಆಯ್ಕೆ ಮಾಡಿಕೊಳ್ಳುವರು.

ಆದರೆ ಇದು ಹಲವಾರು ಸಮಸ್ಯೆಗಳನ್ನು ಉಂಟು ಮಾಡುವುದು. ಇದರ ಬದಲಿಗೆ ನೀವು ಬೇಸಗೆಯಲ್ಲಿ ಒಳ ಉಡುಪು ಧರಿಸದೆ ಇದ್ದರೆ ಅದು ತುಂಬಾ ಒಳ್ಳೆಯದು.ಒಳ ಉಡುಪು ಧರಿಸದೆ ಇರುವುದು ನಿಮಗೆ ತುಂಬಾ ಹಿತಕಾರಿ ಅನುಭವ ನೀಡಬಹುದು. ಆದರೆ ಕೆಲವರು ಇದು ಲೈಂಗಿಕ ಜೀವನಕ್ಕೆ ಒಳ್ಳೆಯದಲ್ಲ ಎಂದು ಹೇಳಿದರೆ, ಇನ್ನು ಕೆಲವರು ಇದು ತುಂಬಾ ಒಳ್ಳೆಯದು ಎಂದು ಪರಿಗಣಿಸುವರು.ಇಂತಹ ಸಮಯದಲ್ಲಿ ನೀವು ಬೇಸಗೆಯಲ್ಲಿ ಒಳ ಉಡುಪು ಧರಿಸದೆ ಇದ್ದರೆ ಅದರಿಂದ ಯಾವ ಲಾಭಗಳನ್ನು ಪಡೆಯಬಹುದು ಎಂದು ತಿಳಿಯಿರಿ.

ತುಂಬಾ ಹಿತಕಾರಿ

ಒಳ ಉಡುಪು ಧರಿಸದೆ ಇದ್ದರೆ ಅದು ನಿಮಗೆ ತುಂಬಾ ಹಿತಕಾರಿ ಆಗಿರುವುದು. ಒಳ ಉಡುಪು ದರಿಸದೆ ಇದ್ದರೆ ಆಗ ಜನನೇಂದ್ರೀಯಗಳು ಒಂದು ತುಂಡು ಬಟ್ಟೆಯ ಒಳಗಡೆ ತುಂಬಿಕೊಂಡಿರುವುದು ತಪ್ಪುವುದು.ಒಳ ಉಡುಪು ಧರಿಸದೆ ನಿಮಗೆ ಎಷ್ಟುಹಿತಕರ ಭಾವನೆ ಆಗುತ್ತಿದೆ ಎಂದು ತಿಳಿಯಬಹುದು.

ಸೋಂಕು ತಡೆಯುವುದು

ಒಳ ಉಡುಪು ಧರಿಸದೆ ಇರುವ ಅದ್ಭುತವಾದ ಲಾಭವೆಂದರೆ ಅದು ಸೋಂಕನ್ನು ದೂರವಿಡುವುದು.ಒಳ ಉಡುಪು ಧರಿಸಿದರೆ ಅದರಿಂದ ಅಹಿತಕರವೆನಿಸುವುದು ಮತ್ತು ಬೆವರು ನಿಂತು ಅಲ್ಲಿ ತುಂಬಾ ಗಂಭೀರ ದದ್ದು ಮತ್ತು ಸೋಂಕು ಕಾಣಿಸಿಕೊಳ್ಳಬಹುದು.ಮಹಿಳೆಯರು ಒಳ ಉಡುಪು ಧರಿಸದೆ ಇದ್ದರೆ ಅವರಿಗೆ ಶಿಲೀಂಧ್ರ ಸೋಂಕಿನಿಂದ ದೂರವಿರಲು ಇದು ಸಹಕಾರಿ ಆಗುವುದು.

ಪುರುಷರಿಗೆ ಫಲವತ್ತತೆಗೆ ನೆರವು

ಒಳ ಉಡುಪು ಧರಿಸುವಂತಹ ಪುರುಷರಲ್ಲಿ ವೃಷಣದ ಭಾಗದಲ್ಲಿ ಉಷ್ಣತೆಯು ಹೆಚ್ಚಾಗಿರುವುದು. ಇದರ ಪರಿಣಾಮವಾಗಿ ವೀರ್ಯದ ಗುಣಮಟ್ಟವು ಕೆಟ್ಟದಾಗಿರುವುದು.ಅದೇ ವೃಷಣವು ತಂಪಾಗಿದ್ದರೆ ವೀರ್ಯದ ಗುಣಮಟ್ಟವು ಚೆನ್ನಾಗಿರುವುದು. ಬೆಳಗ್ಗೆ ಬಾಕ್ಸರ್ ಶಾರ್ಟ್ ಧರಿಸಿ ಮತ್ತು ರಾತ್ರಿ ವೇಳೆ ಒಳ ಉಡುಪು ಧರಿಸಬೇಡಿ.ಆರೋಗ್ಯಕಾರಿ ಮಗುವಿನ ಬಗ್ಗೆ ನೀವು ಆಲೋಚನೆ ಮಾಡುತ್ತಲಿದ್ದರೆ ಆಗ ನೀವು ಜನನೇಂದ್ರೀಯದ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು.

ತುಂಬಾ ಶುಚಿ

ಒಳ ಉಡುಪಿನಲ್ಲಿ ವಿವಿಧ ರೀತಿಯ ಬ್ಯಾಕ್ಟೀರಿಯಾಗಳು ಇರುವುದು. ಅಂಗಾಂಗದಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳು ಒಳ ಉಡುಪಿನಲ್ಲಿ ಕುಳಿತುಕೊಳ್ಳುವುದು. ಇದನ್ನು ನೀವು ಧರಿಸುವ ಪರಿಣಾಮವಾಗಿ ಅದು ಬ್ಯಾಕ್ಟೀರಿಯಾಗೆ ನಿಮ್ಮನ್ನು ಒಗ್ಗಿಸಿಕೊಂಡಂತೆ ಆಗುವುದು ಮತ್ತು ಇದು ಅಶುದ್ಧವಾಗಿರುವುದು. ಒಳ ಉಡುಪು ಧರಿಸದೆ ಇರುವುದು ಒಳ್ಳೆಯ ವಿಧಾನ

ಸೆಕ್ಸಿ ಭಾವನೆ!

ಸುಂದರವಾಗಿರುವಂತಹ ಬಟ್ಟೆಗಳನ್ನು ಧರಿಸುವಂತಹ ಮಹಿಳೆಯರು ಒಳಗಡೆ ಒಳ ಉಡುಪು ಧರಿಸದೆ ಇದ್ದರೆ ಆಗ ಅವರಿಗೆ ತುಂಬಾ ಸೆಕ್ಸಿ ಭಾವನೆ ಬರುವುದು.ನಮ್ಮ ದೇಹದ ಭಾಗವನ್ನು ಮುಚ್ಚಿಡುವುದು ಹೇಗೆ ಎನ್ನುವಂತಹ ಭಾವನೆಯು ಹೆಚ್ಚಿನ ಮಹಿಳೆಯರಲ್ಲಿ ಇರುವುದು.ಆದರೆ ಇದು ನಿಮಗೆ ಹಿತಕಾರಿ ಭಾವನೆ ನೀಡಬಹುದು. ಅದೇ ರೀತಿ ಪುರುಷರು ಕೂಡ ಮಹಿಳೆಯರು ಕಮಾಂಡೊ ಧರಿಸಿದರೆ ಅದನ್ನು ಇಷ್ಟಪಡುವರು.

ಚರ್ಮದ ಮೇಲೆ ಹುಣ್ಣುಗಳು ಮತ್ತು ದದ್ದುಗಳು

ಬೇಸಿಗೆ ಕಾಲದಲ್ಲಿ ಬೆವರುವುದು ಸಾಮಾನ್ಯ. ಇಂತಹ ಸಮಯದಲ್ಲಿ ಕೊಳಕಾದ ಒಳ ಉಡುಪಿನಿಂದ ಕೇವಲ ಸೋಂಕುಗಳನ್ನು ಬಿಟ್ಟರೆ ಬೇರೆ ಏನನ್ನು ನಿರೀಕ್ಷಿಸಲಾಗದು.ಈ ಸೋಂಕುಗಳು ಚರ್ಮದ ಮೇಲೆ ಹಲವಾರು ರೀತಿಯ ಹುಣ್ಣುಗಳು ಗಾಯಗಳು ಮತ್ತು ದದ್ದುಗಳಿಗೆ ಶಂಕುಸ್ಥಾಪನೆ ಮಾಡುತ್ತವೆ.ಇವು ಮುಂದಿನ ದಿನಗಳಲ್ಲಿ ಮನುಷ್ಯನ ದೇಹದ ಚರ್ಮ ಮತ್ತು ಒಳಗಿನ ರಕ್ತ ಕೊಳೆಯುವಂತೆ ಮಾಡುತ್ತವೆ.

Leave A Reply

Your email address will not be published.