ಅಮೃತ ಈ ತುಳಸಿ ಗಿಡ!

0 153

ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ಬಹುಮುಖ್ಯ ಸ್ಥಾನವಿದೆ. ಅದರಲ್ಲೂ ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಇನ್ನು ಪುರಾಣಗಳಲ್ಲೂ ತುಳಸಿ ಬಗ್ಗೆ ಪ್ರಸ್ತಾಪಗಳಿದ್ದು, ಹಾಗೆಯೇ ಆಯುರ್ವೇದದಲ್ಲೂ ಈ ಗಿಡವನ್ನು ಔಷಧಿಯಾಗಿ ಬಳಸಲಾಗುತ್ತದೆ.

ತುಳಸಿ ಗಿಡದಲ್ಲಿ ಅನೇಕ ಔಷಧೀಯ ಗುಣಗಳಿದ್ದು, ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಇಂತಹ ಕೆಲ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಪ್ರತಿನಿತ್ಯ ತುಳಸಿ ಎಲೆಯನ್ನು ಸೇವಿಸಿದ್ರೆ ಅಥವಾ ನೀರಿನಲ್ಲಿ ಹಾಕಿ ಕುಡಿದ್ರೆ ಹಲವು ಆರೋಗ್ಯಕರ ಲಾಭಗಳನ್ನು ಪಡೆಯಬಹುದು. ಇದು ಮುಖ್ಯವಾಗಿ ನಮ್ಮ ದೇಹದ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ತುಳಸಿಯಲ್ಲಿ ಅಂಟಿ ಆಕ್ಸಿಡೆಂಟ್ಸ್​ ಅಂಶಗಳು ಸಮೃದ್ದವಾಗಿರುವುದರಿಂದ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಎಲ್ಲಾ ರೋಗಗಳ ವಿರುದ್ದ ಹೋರಾಡುತ್ತದೆ.

ಪ್ರತಿದಿನ ಖಾಲಿ ಹುಟ್ಟೆಯಲ್ಲಿ ತುಳಸಿ ಎಲೆಯನ್ನು ಸೇವಿಸಿದ್ರೆ ಜೀರ್ಣಕ್ರಿಯೆ ಕೂಡ ಸುಗಮಗೊಳ್ಳುತ್ತದೆ.

ಶೀತದ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ರೆ ಪ್ರತಿ ದಿನ ಮೂರರಿಂದ ಐದು ತುಳಸಿ ಎಲೆಗಳನ್ನು ಸೇವಿಸಿ. ಇದರಿಂದ ಶೀತದ ಸಮಸ್ಯೆ ದೂರವಾಗುತ್ತದೆ.

ಬಾಯಿ ದುರ್ವಾಸನೆಯಿಂದ ಕೂಡಿದ್ರೆ ತುಳಸಿ ಎಲೆ ಅತ್ಯುತ್ತಮ ಮನೆಮದ್ದು. ಏಕೆಂದರೆ ಇದರ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು, ಈ ಎಲೆಗಳನ್ನು ಸೇವಿಸುವುದರಿಂದ ಬಾಯಿಯ ಕೆಟ್ಟ ವಾಸನೆಯನ್ನು ದೂರ ಮಾಡಬಹುದು.

Leave A Reply

Your email address will not be published.