ಇಂಗು ತಿಂದರೆ ಈ ಸಮಸ್ಯೆ ಪಕ್ಕ ಯಾಕೆಂದರೆ
ಇಂಗು ತಿಂದರೆ ಈ ಸಮಸ್ಯೆ ಪಕ್ಕ ಯಾಕೆಂದರೆ
ನಮ್ಮ ಆಹಾರ ಪದ್ಧತಿಯಲ್ಲಿ ಇಂಗು ಮಹತ್ವದ ಸ್ಥಾನ ಪಡೆದಿದೆ ಹಿಂದಿನ ಕಾಲದಿಂದಲೂ ಆಯುರ್ವೇದ ಗಿಡಮೂಲಿಕೆಯಾಗಿ ಹಿಂಗು ಉಪಯೋಗಕ್ಕೆ ಬಂದಿದೆ ಇದರ ಗಾಢವಾದ ವಾಸನೆಯಿಂದ ಜನರಿಗೆ ಚಿರಪರಿತವಾಗಿದೆ ಇಂಗು ನಮ್ಮ ದೇಹದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ ನಮಗೆ ಯಾವಾಗ ಹೊಟ್ಟೆ ಉಬ್ಬರ ಬರುತ್ತದೆ ಎಂದರೆ ನಾವು ಅತಿಯಾದ ಆಹಾರ ತಿಂದಾಗ ಅಥವಾ ಮಸಾಲೆ ಪದಾರ್ಥಗಳು ಹೆಚ್ಚಾಗಿರುವ ಆಹಾರಗಳನ್ನು ಸೇವಿಸಿದಾಗ ಈ ಸಂದರ್ಭದಲ್ಲಿ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ
ಹಾಗಾಗಿ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬರ ಬರುತ್ತದೆ ಇಂತಹ ಸಂದರ್ಭದಲ್ಲಿ ಇಂಗು ಪುಡಿಯನ್ನು ಬಾಯಲ್ಲಿ ಹಾಕಿಕೊಳ್ಳಬಹುದು ಅಥವಾ ನೀರಿನಲ್ಲಿ ಬೆರೆಸಿ ಕುಡಿಯಬಹುದು ಇನ್ನು ಇಂಗು ಸ್ವಾಶಕೋಶವನ್ನು ಸ್ವಚ್ಛ ಮಾಡುವ ಶಕ್ತಿಯನ್ನು ಹೊಂದಿದೆ ಏಕೆಂದರೆ ಇದು ಆಂಟಿ ಬ್ಯಾಕ್ಟೀರಿಯಲ್, ಆಂಟಿ ಮೈಕ್ರೋಬಿಯಲ್ ಮತ್ತು ಆಂಟಿ ಫಂಗಲ್ ಆಗಿದೆ ಇದು ನಮ್ಮ ಶ್ವಾಸಕೋಶದಲ್ಲಿ ಇರುವಂತಹ ಸೋಂಕುಕಾರಕ ಕ್ರಿಮಿಗಳನ್ನು ನಾಶಪಡಿಸಿ ನಮ್ಮನ್ನು ಶ್ವಾಸಕೋಶ ಕಾಯಿಲೆಗಳಿಂದ ರಕ್ಷಣೆ ಮಾಡುತ್ತದೆ
ಅಷ್ಟೇ ಅಲ್ಲದೆ ನಮ್ಮ ಮಾನಸಿಕ ಒತ್ತಡವನ್ನು ಅತ್ಯಂತ ಸುಲಭವಾಗಿ ನಿರ್ವಹಣೆ ಮಾಡುತ್ತದೆ ಮಾನಸಿಕ ಒತ್ತಡ ಹೆಚ್ಚಾದರೆ ಅದರಿಂದ ವಿವಿಧ ಬಗೆಯ ಒತ್ತಡಗಳು ಹೆಚ್ಚಾಗುತ್ತದೆ ಇದರಿಂದ ಮುಂಬರುವ ದಿನಗಳಲ್ಲಿ ಹಲವು ಕಾಯಿಲೆಗಳು ಹೃದಯ ಸಂಬಂಧಿ ಸಮಸ್ಯೆ ಕಾಡುತ್ತದೆ ಇನ್ನೂ ಇಂಗು ಅಂಟಿ ಬ್ಯಾಕ್ಟೀರಿಯಲ್ ಗುಣವನ್ನು ಹೊಂದಿದೆ ಹಾಗಾಗಿ ಇದು ಚಳಿಗಾಲದ ಶೀತ ಸಂಬಂಧಿ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ
ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಇನ್ನು ಆರೋಗ್ಯಕರವಾದ ತಲೆ ಕೂದಲು ಪ್ರತಿಯೊಬ್ಬರಿಗೂ ಮುಖ್ಯ ಯಾರಿಗೆ ನೆತ್ತಿಯ ಭಾಗದಲ್ಲಿ ತಲೆ ಹೊಟ್ಟು ಹೆಚ್ಚಾಗಿರುತ್ತದೆ ಅಂತಹವರಿಗೆ ಕೂದಲು ಉದುರುವ ಸಮಸ್ಯೆ ಕಾಡುತ್ತದೆ ಅಂತಹವರು ಒಂದು ಕಪ್ ಮೊಸರಿನ ಜೊತೆಗೆ ಸ್ವಲ್ಪ ಜೇನುತುಪ್ಪ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ಇಂಗು ಹಾಕಿ ಅದನ್ನು ನಿಮ್ಮ ತಲೆಯ ಭಾಗಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ತಲೆ ಸ್ನಾನ ಮಾಡಿ ಇದರಿಂದ ತಲೆ ಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ