ಬಾಳೆ ದಿಂಡು ವರ್ಷದಲ್ಲಿ 2-3 ಬಾರಿಯಾದರೂ ತಿನ್ನಲೇಬೇಕು ಯಾಕೆ ಗೊತ್ತಾ
ಬಾಳೆ ದಿಂಡು ವರ್ಷದಲ್ಲಿ 2-3 ಬಾರಿಯಾದರೂ ತಿನ್ನಲೇಬೇಕು ಯಾಕೆ ಗೊತ್ತಾ
ಬಾಳೆ ಮರದ ಖಾಂಡದ ಭಾಗವನ್ನು ನಾವು ಬಾಳೆದಿಂಡು ಎಂದು ಕರೆಯುತ್ತೇವೆ ಅದರ ಹೊರಗಡೆ ಇರುವುದನ್ನು ತೆಗೆದು ಒಳಗಡೆ ಮಧ್ಯದಲ್ಲಿ ಎಳೆಯದಾಗಿ ಇರುತ್ತದೆ ಅದನ್ನು ನಾವು ಬಳಸಬಹುದು ಇದರಲ್ಲಿ ತುಂಬಾ ಔಷಧೀಯ ಗುಣಗಳು ಇರುತ್ತದೆ ಮೊದಲನೆಯದಾಗಿ ಇದು ಜೀರ್ಣದ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು ವಾರದಲ್ಲಿ ಒಂದು ಬಾರಿ ಅಥವಾ ತಿಂಗಳಲ್ಲಿ ಒಂದೆರಡು ಬಾರಿ ಇದನ್ನು ಬಳಸುವುದರಿಂದ ನಾವು ಜೀರ್ಣಕ್ರಿಯ ಸರಾಗವಾಗಿ ಆಗುತ್ತದೆ ಹಾಗೂ ಜೀರ್ಣಶಕ್ತಿ ಜಾಸ್ತಿಯಾಗಲು ಇದು ತುಂಬಾ ಸಹಾಯ ಮಾಡುತ್ತದೆ
ಇದರಲ್ಲಿ ನಿಮಗೆ ನಾರಿನಂಶ ಹೇರಳವಾಗಿ ಸಿಗುವುದರಿಂದ ಮಲಬದ್ಧತೆ ಸಮಸ್ಯೆಯನ್ನು ದೂರ ಇಡಲು ಸಹಾಯಕವಾಗಿದೆ ಇನ್ನು ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ತುಂಬಾನೇ ಒಳ್ಳೆಯದು ಎಂದು ಹೇಳಬಹುದು ಬಾಳೆದಿಂಡಿನ ಜ್ಯೂಸ್ ಕಿಡ್ನಿ ಸ್ಟೋನ್ ಕರಗಿಸಲು ತುಂಬಾ ಒಳ್ಳೆಯದು ಯಾರಿಗೆ ಮೂತ್ರನಾಳದ ಸೋಂಕು ಸಮಸ್ಯೆ ಇರುತ್ತದೆಯೋ ಅವರಿಗೆ ಬಾಳೆದಿಂಡು ತುಂಬಾ ಒಳ್ಳೆಯದು ಇದನ್ನು ಯಾವುದಾದರೂ ಅಡುಗೆಯಲ್ಲಿ ಬಳಸಬಹುದು ಇಲ್ಲವಾದರೆ ಜ್ಯೂಸ್ ರೂಪದಲ್ಲಿ ಮಾಡಿ ಕುಡಿಯಬಹುದು
ಇದರಲ್ಲಿ ಕಬ್ಬಿಣದ ಅಂಶ ಹೇರಳವಾಗಿ ಸಿಗುವುದರಿಂದ ದೇಹದಲ್ಲಿ ಕಬ್ಬಿಣದ ಅಂಶ ಕೊರತೆ ಇರುವವರಿಗೆ ತುಂಬಾ ಒಳ್ಳೆಯದು ಇದು ದೇಹದಲ್ಲಿ ರಕ್ತ ಉತ್ಪಾದನೆಗೆ ಸಹಾಯ ಮಾಡುತ್ತದೆ ಹಾಗೂ ರಕ್ತ ಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ ಯಾರಿಗೆ ಗ್ಯಾಸ್ಟ್ರಿಕ್,ಅಸಿಡಿಟಿ, ಎದೆ ಉರಿ ಸಮಸ್ಯೆಗಳು ಇರುವವರಿಗೆ ತುಂಬಾ ಒಳ್ಳೆಯದು ಗ್ಯಾಸ್ಟ್ರಿಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಇದ್ದರೂ ಬಾಳೆದಿಂಡನ್ನು ಉಪಯೋಗಿಸಬಹುದು
ಕೆಲವರಿಗೆ ಉಗುರು ಕಚ್ಚುವ ಅಭ್ಯಾಸ ಇರುತ್ತದೆ ಇನ್ನು ಕೆಲವರಿಗೆ ಅರಿಯದೆ ಉಗುರು ಅಥವಾ ಕೂದಲು ಹೊಟ್ಟೆಯ ಒಳಗೆ ಸೇರುವ ಅವಕಾಶಗಳು ಇರುತ್ತದೆ ಕನಿಷ್ಠವಾಗಿ ವರ್ಷದಲ್ಲಿ ಎರಡು ಮೂರು ಬಾರಿಯಾದರೂ ಬಾಳೆದಿಂಡನ್ನು ಬಳಸುವುದರಿಂದ ನಮ್ಮ ಹೊಟ್ಟೆಯಲ್ಲಿ ಸೇರಿರುವ ಎಂತಹ ಕೂದಲು ಹಾಗೂ ಉಗುರುಗಳು ಕಲ್ಮಶಗಳೆಲ್ಲವೂ ಹೊರಗೆ ಹೋಗುತ್ತವೆ