ಸಕ್ಕರೆ ಕಾಯಿಲೆಗೆ ಈ ಒಂದು ಸೊಪ್ಪು ಹೀಗೆ ಬಳಸಿ ನೋಡಿ ಸಾಕು
ಸಕ್ಕರೆ ಕಾಯಿಲೆಗೆ ಈ ಒಂದು ಸೊಪ್ಪು ಹೀಗೆ ಬಳಸಿ ನೋಡಿ ಸಾಕು
ನುಗ್ಗೆ ಮರದ ಎಲೆಗಳು ಕೂದಲು ಉದುರುವಿಕೆ, ರಕ್ತ ಹೀನತೆ, ಸಂಧಿವಾಥ, ಥೈರಾಯ್ಡ್, ಅಸ್ತಮಾ, ಮಧುಮೇಹ ಹಾಗೂ ತೂಕ ಇಳಿಸಲು ಸಹಾಯಕವಾಗಿದೆ ಆಯುರ್ವೇದದಲ್ಲಿ ಇದನ್ನು ಒಂದು ಔಷಧೀಯ ಸಸ್ಯ ಎಂದು ಪರಿಗಣಿಸಲಾಗಿದೆ ಅಷ್ಟೇ ಅಲ್ಲದೆ ಈ ಸಸ್ಯವು ಆಂಟಿಬಯೋಟಿಕ್ ನೋವು ನಿವಾರಕ, ಉತ್ಕರ್ಷಣ ನಿರೋಧಕ, ಉರಿಯುತ, ಆಂಟಿ ಕ್ಯಾನ್ಸರ್,ಅಂಟಿ ಡಯಾಬಿಟಿಕ್, ಆಂಟಿ ಫಂಗಸ್ ಮತ್ತು ಅತ್ಯಂತ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ
ಇನ್ನು ನುಗ್ಗೆ ಸೊಪ್ಪಿನ ಎಲೆಗಳನ್ನು ತಿನ್ನುವುದರಿಂದ ಚಯಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರ ಜೊತೆಗೆ ಒತ್ತಡ,ಆತಂಕ ಮತ್ತು ಮೂಡ್ ಸ್ವಿಂಗ್ ಗಳನ್ನು ಕಡಿಮೆ ಮಾಡುತ್ತದೆ ಥೈರಾಯ್ಡ್ ಕಾರ್ಯವನ್ನು ಸುಧಾರಿಸುವುದರ ಜೊತೆಗೆ ತಾಯಂದಿರ ಎದೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಇನ್ನು ಹಿಮೋಗ್ಲೋಬಿನ್ ಅನ್ನು ಸುಧಾರಿಸಲು ನುಗ್ಗೆಸೊಪ್ಪು ನಿಮಗೆ ಸಹಾಯ ಮಾಡುತ್ತದೆ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
ಯಕೃತ್ ಮತ್ತು ಮೂತ್ರಪಿಂಡದ ವಿಷಕಾರಿ ಅಂಶವನ್ನು ಹೊರತೆಗೆಯುತ್ತದೆ ಇನ್ನು ನುಗ್ಗೆ ಮರದ ಎಲ್ಲಾ ಭಾಗಗಳು ಅತಿ ಪ್ರಯೋಜನಕಾರಿ ಆದರೆ ಎಲೆಗಳು ತುಂಬಾ ಉಪಯುಕ್ತ ನೀವು ತಾಜಾ ಎಲೆಗಳ ರಸವನ್ನು ಮತ್ತು ಎಲೆಗಳ ಪುಡಿ ಮಾಡಿ ಬಳಸಬಹುದು ಇದರ ಜ್ಯೂಸ್ ಕುಡಿಯುವುದರಿಂದ ಸಂಧಿವಾತ, ಮೂಳೆ ನೋವು ಹಾಗೂ ತೂಕ ಇಳಿಸಲು ಸಹಾಯ ಮಾಡುತ್ತದೆ ಇನ್ನು ನುಗ್ಗೆ ಸೊಪ್ಪು ಪ್ರಕೃತಿಯಲ್ಲಿ ಬಿಸಿಯಾಗಿರುತ್ತದೆ ಆದ್ದರಿಂದ ಉಷ್ಣದ ಸಮಸ್ಯೆಯಿಂದ ಬಳಲುತ್ತಿರುವಂತಹ ಜನರು ಆಮ್ಲೀಯತೆ, ರಕ್ತಸ್ರಾವ, ಪೈಲ್ಸ್, ಬಾರಿ ಮುಟ್ಟಿನ ಸಮಸ್ಯೆ, ಮೊಡವೆ ಸಮಸ್ಯೆ ಇರುವವರು ಬೇಸಿಗೆಯಲ್ಲಿ ಇದನ್ನು ತಿನ್ನಬಾರದು ಪಿತ್ತ ಇರುವವರು ಚಳಿಗಾಲದಲ್ಲಿ ಇದನ್ನು ತಿನ್ನಬಹುದು