ಮಹಾ ಶಿವರಾತ್ರಿ ಪೂಜೆ ಅರ್ಚನೆ ವಿಶೇಷ ದೀಪರಾಧನೆ ಮಾಡುವ ವಿಧಾನ!
ಶಿವರಾತ್ರಿ ಹಬ್ಬದ ಸಂಪೂರ್ಣ ಪೂಜಾ ವಿಧಾನ ಮತ್ತು ಬಿಲ್ವ ಪತ್ರೆ ಅರ್ಚನೆ ಬಗ್ಗೆ ತಿಳಿದುಕೊಂಡು ಪೂಜೆ ಮಾಡಿ.ಮೊದಲು ಪೀಠವನ್ನು ತಯಾರು ಮಾಡಬೇಕು ಮತ್ತು ಶಿವ ಪಾರ್ವತಿ ಫೋಟೋ ಇಟ್ಟು ಹೂವಿನಿಂದ ಅಲಂಕಾರ ಮಾಡಬೇಕು.ನಂತರ ಶಿವ ಲಿಂಗವನ್ನು ಒಂದು ಪ್ಲಟ್ ನಲ್ಲಿ ಇಡಬೇಕು ಹಾಗೂ ಪಂಚ ಮೃತ ಅಭಿಷೇಕ ಜಲ ಅಭಿಷೇಕ ಅಥವಾ ಎಳೆನೀರಿನ ಅಭಿಷೇಕ ಮಾಡಬೇಕು.ನಂತರ ಪೂಜೆಯನ್ನು ಪ್ರಾರಂಭ ಮಾಡಬೇಕಾಗುತ್ತದೇ.ಮೊದಲು ಒಂದು ಪ್ಲಟ್ ನಲ್ಲಿ 5 ಇಡಿ ಅಕ್ಕಿಯನ್ನು ಹಾಕಿ ರಂಗೋಲಿ ಮೇಲೆ ಇಡಬೇಕು. ಅಕ್ಕಿಯ ಮೇಲೆ ಸ್ವಸ್ತಿಕ್ ಚಿತ್ರವನ್ನು ಬರಿಯಬೇಕು.ನಂತರ ಅದರ ಮೇಲೆ ವಿಭೂತಿ ಮತ್ತು ಅಕ್ಷತೆಯನ್ನು ಹಾಕಿ.ನಂತರ ಮೂರು ಎಲೆ ಇರುವ ಬಿಲ್ವ ಪತ್ರೆ ತೆಗೆದುಕೊಂಡು ವಿಭೂತಿ ಹಚ್ಚಿ ಅದರ ಮೇಲೆ ಶಿವ ಲಿಂಗವನ್ನು ಪ್ರತಿಷ್ಟಪನೆ ಮಾಡಬೇಕು.
ಶಿವ ಲಿಂಗಕ್ಕೆ ವಿಭೂತಿ ಹಚ್ಚಿ ಬಿಳಿ ಹೂವುಗಳಿಂದ ಅಲಂಕಾರ ಮಾಡಬೇಕು.ಲಿಂಗದ ಮುಂದೆ ಬಸವಣ್ಣನ ವಿಗ್ರಹವನ್ನು ಇಡಬೇಕು.ನಂತರ ರುದ್ರಾಕ್ಷಿ ಇದ್ದಾರೆ ರುದ್ರಾಕ್ಷಿ ಹಾರ ಮಾಡಿ ಹಾಕಬಹುದು.ಪೂಜಾ ಸಮಯ ನೋಡಿಕೊಂಡು ಪೂಜೆ ಮಾಡಬೇಕು.ಇನ್ನು ಶಿವರಾತ್ರಿ ದಿನ ಪ್ರಸಾದವಾಗಿ ಹಾಲು ಹಣ್ಣು ಡ್ರೈ ಫ್ರೂಟ್ಸ್ ಮತ್ತು ಪಂಚಾಮೃತ ಅಭಿಷೇಕ ಮಾಡಿದ್ದಾರೆ ಅದನ್ನು ಸಹ ಇಡಬಹುದು.ಇನ್ನು ಅಖಂಡ ದೀಪರಾಧನೆ ಮಾಡಬೇಕು ಹಾಗೂ ಬೆಲ್ಲದ ದೀಪರಾಧನೆ ಮಾಡಬೇಕು.
ನಂತರ ಶಿವನ ಮಕ್ಕಳಾದ ಸುಬ್ರಮಣ್ಯ ಮತ್ತು ಗಣೇಶ ಪೂಜೆಯನ್ನು ಮಾಡಬೇಕು.ಇನ್ನು ಶಿವರಾತ್ರಿ ಹಬ್ಬದ ದಿನ ಶಿವನ ಆರಾಧನೆ ಮಾಡಿದರೆ ಒಳ್ಳೆಯದು.ಶಿವರಾತ್ರಿ ಹಬ್ಬದ ದಿನ ನಿರ್ಜಲ ಉಪವಾಸ ಇದ್ದು ಪೂಜೆಯನ್ನು ಮಾಡಿದರೆ ಒಳ್ಳೆಯದು.ನಂತರ ಊದುಬತ್ತಿಯಿಂದ ದೀಪ ಹಚ್ಚಿ ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸಿ ದೂಪವನ್ನು ಬೆಳಗಬೇಕು.
ಮೂರು ಎಲೆ ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸುವುದು ಶ್ರೇಷ್ಠ ಎನ್ನುವುದು ಪುರಾಣದಲ್ಲಿ ಉಲ್ಲೇಖ ಇದೆ.ಬಿಲ್ವ ಪತ್ರೆಯಲ್ಲಿ ಎಡಗಡೆ ಇರುವುದು ಬ್ರಹ್ಮ ಮತ್ತು ಬಲಗಡೆ ಇರುವುದು ವಿಷ್ಣು ಮತ್ತು ಮಧ್ಯ ಇರುವುದು ಸದಾಶಿವ ನೆಲೆಸಿರುವ ಎಂದು ಪುರಾಣದಲ್ಲಿ ಹೇಳಿದೆ.ಶಿವರಾತ್ರಿ ದಿನ ಶಿವ ಸಹಸ್ರನಾಮವನ್ನು ಓದಬೇಕು ಮತ್ತು ಪ್ರತಿ ಸೋಮವಾರ ದಿನ ಓದಬೇಕು.ಒಂದು ವೇಳೆ ಇಲ್ಲವಾದರೆ ಓಂ ನಮಃ ಶಿವಯ ಎಂದು ಹೇಳುತ್ತಾ ಬಿಲ್ವ ಪತ್ರೆಯಿಂದ ಅರ್ಚನೆ ಮಾಡಬೇಕು.
ಶಿವರಾತ್ರಿ ಹಬ್ಬದ ಸಮಯದಲ್ಲಿ ಉಪವಾಸ ಜಾಗರಣೆ ಮತ್ತು ಪೂಜೆ ಬಗ್ಗೆ ಹೆಚ್ಚಿನ ಗಮನ ಕೊಡಬೇಕು.ಬಿಲ್ವ ಪತ್ರೆ ಅರ್ಪಿಸುವುದರಿಂದ ನಿಮ್ಮ ಪಾಪಗಳು ನಿವಾರಣೆ ಆಗುತ್ತದೆ.ಬಿಲ್ವ ಪತ್ರೆ ಅರ್ಪಿಸಿದ ಮೇಲೆ ಬೆಲ್ಲದ ದೀಪರಾಧನೆ ಮಾಡಬೇಕು.ಮಾರನೇ ದಿನ ಬೆಲ್ಲದಲ್ಲಿ ಸ್ವೀಟ್ ಮಾಡಿ ಹಸುವಿಗೆ ನೀಡಬೇಕು.ಕೋನೇಯಲ್ಲಿ ಕಾಯಿಯನ್ನು ಒಡೆಯಬೇಕು. ನಂತರ ಪಂಚಾ ಆರತಿ ಮಾಡಬೇಕು.ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳು ನಿವರಾಣೆ ಆಗುತ್ತದೆ.