ಗಾಢವಾದ ನಿದ್ರೆ ಬರಲು 10 ಕ್ರಮಗಳು! ನಿದ್ದೆ ಬರಲು ಮನೆಮದ್ದು!ನಿದ್ರೆ ಮಾಡುವ ವಿಧಾನ
ಮಲಗುವಾಗ ಈ ರೀತಿ ಮಲಗಿದರೆ ತುಂಬಾ ಬೇಗ ನಿದ್ರೆಗೆ ಹೋಗುತ್ತೀರಾ.ಯಾವುದೇ ಕಾರಣಕ್ಕೂ ನೀವು ಮಲಗುವಾಗ ಹಾಸಿಗೆ ಬಹಳ ಮೆತ್ತಗೆ ಇರಬಾರದು.ಅಂದರೆ ಸ್ಪೋಜ್ ಬೆಡ್ ಗಳನ್ನು ಬಳಕೆ ಮಾಡಬಾರದು.ಇದರಿಂದ ಮೂಳೆಗಳಿಗೆ, ಸ್ಪೇನಲ್ ಕಾರ್ಡ್ ಗೆ ವಿಶ್ರಾಂತಿ ಸಿಗುವುದಿಲ್ಲ. ಸಮತೋಲನವಾಗಿ ಮಲಗಿದಾಗ ಮೂಳೆಗಳಿಗೆ ವಿಶ್ರಾಂತಿ ಮಾಡುವಾಗ ಸಪ್ಪೋರ್ಟ್ ಸಿಗಬೇಕು.ಅದರೆ ಸ್ಪೋಜ್ ಬೆಡ್ ನಲ್ಲಿ ಮಧ್ಯದಲ್ಲಿ ಬೆಡ್ ಒಳಗೆ ಹೋಗುತ್ತದೆ ಮತ್ತು ಮೂಳೆಗಳಿಗೆ ಒತ್ತಡ ಬೀಳುತ್ತದೆ.
ಇದರಿಂದ ಸೊಂಟ ನೋವು, ಕುತ್ತಿಗೆ ನೋವು, ಕೀಲು ನೋವು ಬೆನ್ನು ನೋವು ಶುರು ಆಗುತ್ತಾದೆ. ಆದ್ದರಿಂದ ಸಾಧ್ಯವಾದಷ್ಟು ಸ್ಪೋಜ್ ಬೆಡ್ ಗಳ ಮೇಲೆ ಮಲಗಬಾರದು.ನೆಲದ ಮೇಲೆ ಕೂಡ ಮಲಗಬಾರದು. ಯಾಕೇಂದರೆ ಭೂಮಿಗೆ ಉತ್ತರ ದ್ರುವ ಮತ್ತು ದಕ್ಷಿಣ ದ್ರುವ ಎಂದು ಕರೆಯುತ್ತಾರೆ.ಇದರಲ್ಲಿ ಇರುವ ಮ್ಯಾಗ್ನೆಟ್ ಮನುಷ್ಯನ ದೇಹದಲ್ಲಿ ಇರುವ ಶಕ್ತಿ ಯನ್ನು ಹಿರಿಕೊಳ್ಳುವಂತಹ ಶಕ್ತಿ ಇರುತ್ತದೆ.ನೆಲದ ಮೇಲೆ ಏನು ಹಾಕದೆ ಮಲಗಿದರೆ ಖಂಡಿತವಾಗಿ ಭೂಮಿ ದೇಹದ ಶಕ್ತಿಯನ್ನು ಹಿರಿಕೊಳ್ಳುತ್ತದೆ.
ಮಲಗುವುದಕ್ಕೆ ಕಡ್ಡಿ ಚಾಪೆ ಉತ್ತಮ
ಮಲಗುವುದಕ್ಕೆ ಚಾಪೆ, ಹುಲ್ಲು, ಹತ್ತಿಯಿಂದ ಮಾಡಿದ ತಡಿ ಅಥವಾ ಹಾಸಿಗೆಯಲ್ಲಿ ಮಲಗುವುದು ಉತ್ತಮ.ಇನ್ನು ಮಲಗುವುದಕ್ಕೆ ದಿಂಬು ಬೇಕು ಅದರೆ ಕಿವಿಯಿಂದ ನಿಮ್ಮ ಭುಜದವರೆ ಅಳತೆ ಇರುವ ದಿಂಬುವನ್ನು ಬಳಸಬೇಕು.ಮಲಗಿದಾಗ ನಿಮ್ಮ ತಲೆ ಸಮಾನವಾಗಿ ಇರಬೇಕು ಮತ್ತು ಯಾವುದೇ ಕಾರಣಕ್ಕೂ ಬೆಂಡ್ ಆಗಬಾರದು.ಈ ಅಳತೆಯ ದಿಂಬನ್ನು ಬಳಸುವುದು ಸೂಕ್ತ.
ಯಾವ ರೀತಿ ಮಲಗಿದರೆ ಉತ್ತಮ..?
ಯಾವಾಗಲು ತುಂಬಾ ಹೆದರುವವರು, ಅಂಜಿಕೆ ಸ್ವಭಾವ ಇರುವವರು ಮಕಾಡೆ ಮಲಗುತ್ತಾರೆ.ಅಂದರೆ ಹೊಟ್ಟೆಯನ್ನು ಕೆಳಗೆ ಹಾಕಿ ಮಲಗುತ್ತಾರೆ.ಇನ್ನು ರೋಗಿಗಳು, ಉಸಿರಾಟದ ಸಮಸ್ಸೆ ಇರುವವರು, ಹೊಟ್ಟೆ ಇರುವವರು ಅಂಗತಾ ಮಲಗುತ್ತಾರೆ. ಸಂಸಾರಿಗಳು ಎಡ ಬದಿಗೆ ಮಲಗಬೇಕು.ಇನ್ನು ಸನ್ಯಾಸಿಗಳು, ವೈರಾಗ್ಯ ಹೊಂದಿದವರು ಬಲ ಭಾಗದಲ್ಲಿ ಮಲಗಬೇಕು.
ಇನ್ನು ದೇಹದಲ್ಲಿ ಉಷ್ಟ ಜಾಸ್ತಿ ಇರುವವರು ಬಲ ಭಾಗಕ್ಕೆ ಮಲಗಬೇಕು.ಈ ರೀತಿ ಮಲಗಿದರೆ ದೇಹಕ್ಕೆ ತಂಪನ್ನು ಕೊಡುತ್ತದೆ.ಇನ್ನು ಕಫ, ಶೀತದ ಸಮಸ್ಸೆ ಇರುವವರು ಎಡ ಭುಜವನ್ನು ನೆಲಕ್ಕೆ ತಾಗುವಂತೆ ಮಲಗಬೇಕು.ಈ ರೀತಿ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಿ.