ಪಿರೇಡ್ಸ್ ಆದಾಗ ಈ ರೀತಿಯ ಲಕ್ಷಣಗಳು ಕಂಡರೆ ತುಂಬಾ ಎಚ್ಚರ!
ಪ್ರತಿಯೊಬ್ಬ ಮಹಿಳೆಯು ವಿಭಿನ್ನ ಮುಟ್ಟಿನ ಲಕ್ಷಣಗಳನ್ನು ಹೊಂದಿರುತ್ತಾಳೆ. ಅವುಗಳಲ್ಲಿ ಹೊಟ್ಟೆ ಸೆಳೆತ, ಕಾಲು ನೋವು, ಬೆನ್ನಿನ ನೋವು, ಅತಿಯಾದ ರಕ್ತ ಸ್ರಾವ ಮತ್ತು ಕೋಮಲ ಸ್ತನದ ಸಂವೇದನೆಯು ಸಾಮಾನ್ಯವಾಗಿರುತ್ತದೆ. ಹುಡುಗಿಯರು 11 ರಿಂದ 14 ವರ್ಷ ವಯಸ್ಸಿನ ಒಳಗೆ ಮೊದಲ ಋತು ಸ್ರಾವವನ್ನು ಅನುಭವಿಸುತ್ತಾರೆ.
ನಂತರ 40 ರಿಂದ 50 ವರ್ಷಗಳ ವರೆಗೆ ಮುಂದುವರಿಯುತ್ತದೆ. ಕೆಲವರಿಗೆ ಋತು ಸ್ರಾವ ಸರಿಯಾಗಿ ಆಗುವುದಿಲ್ಲ. ಅಂತಹ ಸಮಯದಲ್ಲಿ ಸೂಕ್ತ ಪರಿಹಾರಗಳನ್ನು ಅನುಸರಿಸುವುದರಿಂದ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು.
ಆರೋಗ್ಯಕರ ಋತುಚಕ್ರದ ಚಿಹ್ನೆಗಳು
ಒಮ್ಮೆ ಋತುಬಂಧಕ್ಕೆ ಒಳಗಾದ ಬಳಿಕ ಪ್ರತಿ ತಿಂಗಳು ನಿರ್ದಿಷ್ಟ ಅವಧಿಗಳ ಕಾಲ ಕಾಣಿಸಿಕೊಳ್ಳುತ್ತದೆ. ಇದು ಪ್ರತಿ ತಿಂಗಳು 4-8 ದಿನಗಳ ಕಾಲ ಕಾಣಿಸಿಕೊಳ್ಳುತ್ತದೆ. ಇದನ್ನು ಸಾಮಾನ್ಯ ಋತು ಸ್ರಾವ ಎಂದು ಪರಿಗಣಿಸಲಾಗುತ್ತದೆ.
ಕೆಲವೊಮ್ಮೆ ಅನಿಯಮಿತವಾದ ಅವಧಿಗಳಿಂದ ದೀರ್ಘ ಸಮಯಗಳ ಋತು ಸ್ರಾವ ಅಥವಾ ಅನೇಕ ತಿಂಗಳುಗಳಿಂದ ಋತು ಸ್ರಾವ ಉಂಟಾಗದೆ ಇರುವುದು ಸಮಸ್ಯೆಯಾಗಿ ತೋರುವುದು. ಹಾಗಾಗಿ ತಮ್ಮ ಋತು ಸ್ರಾವದ ಅವಧಿ ಹಾಗೂ ದಿನಾಂಕಗಳನ್ನು ಸರಿಯಾಗಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಆಗ ಸಮಸ್ಯೆಯನ್ನು ಸರಿಯಾಗಿ ಪರಿಗಣಿಸಬಹುದು.
ಸಮಸ್ಯೆಗೆ ಕಾರಣಗಳು
ಮಾನಸಿಕ ಒತ್ತಡ, ಹಾರ್ಮೋನ್‍ಗಳ ವ್ಯತ್ಯಾಸ, ಔಷಧಗಳ ಅಡ್ಡ ಪರಿಣಾಮ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಪ್ರತಿ ತಿಂಗಳು ಸೂಕ್ತ ಅವಧಿಗೆ ಋತುಸ್ರಾವ ಉಂಟಾಗದು. ಅಂತಹ ಸಮಯದಲ್ಲಿಯೂ ಕೆಲವು ಆರೋಗ್ಯ ಸಮಸ್ಯೆ ಹೆಚ್ಚುವ ಸಾಧ್ಯತೆಗಳಿವೆ.
ಅದಕ್ಕಾಗಿ ಕೆಲವು ಆರೋಗ್ಯಕರ ಮನೆ ಔಷಧಗಳನ್ನು ಅನುಸರಿಸುವುದು ಉತ್ತಮ. ಅವು ಯಾವುದೇ ಅಡ್ಡ ಪರಿಣಾಮಗಳನ್ನು ಉಂಟುಮಾಡದೆ ಋತುಸ್ರಾವದ ಆರೋಗ್ಯವನ್ನು ಸರಿ ಪಡಿಸುತ್ತದೆ.
ದಾಲ್ಚಿನ್ನಿ
ಮುಟ್ಟಿನ ಸಮಸ್ಯೆಗೆ ಒಳಗಾಗಿದ್ದರೆ ದಾಲ್ಚಿನ್ನಿಯನ್ನು ಬಳಸಬಹುದು. ಅದು ಅದ್ಭುತ ಪರಿಹಾರವನ್ನು ನೀಡುತ್ತದೆ. ಪಿಸಿಓಎಸ್ ಚಿಕಿತ್ಸೆಗೆ ದಾಲ್ಚಿನ್ನಿ ದಿವ್ಯ ಔಷಧ ಆಗುವುದು. ಗಣನೀಯವಾಗಿ ದಾಲ್ಚಿನ್ನಿ ಸೇವಿಸುವುದರಿಂದ ಕ್ರಮಬದ್ಧವಾದ ಋತು ಸ್ರಾವವನ್ನು ಹೊಂದಬಹುದು. ಜೊತೆಗೆ ಋತು ಸ್ರಾವದ ಅವಧಿಯಲ್ಲಿ ಉಂಟಾಗುವ ನೋವನ್ನು ಕಡಿಮೆ ಮಾಡುತ್ತದೆ.
ಶುಂಠಿ
ಋತು ಚಕ್ರದ ರೋಗಲಕ್ಷಣಗಳನ್ನು ನಿವಾರಿಸಲು ಮತ್ತು ಅದನ್ನು ಕ್ರಮಬದ್ಧ ಅವಧಿಯಲ್ಲಿ ಆಗುವಂತೆ ಮಾಡಿಕೊಳ್ಳಲು ಶುಂಠಿಯನ್ನು ಸೇವಿಸಬಹುದು. ನಿಗದಿತ ದಿನಾಂಕಕ್ಕೆ ಏಳು ದಿನಗಳ ಮುಂಚಿತವಾಗಿ ಶುಂಠಿಯನ್ನು ಸೇವಿಸಬೇಕು. ಆಗ ನಿಗದಿತ ದಿನಾಂಕಕ್ಕೆ ಅನುಗುಣವಾಗಿ ಋತುಸ್ರಾವ ಉಂಟಾಗುವುದು. ಜೊತೆಗೆ ಅಧಿಕ ಸ್ರಾವ ಮತ್ತು ನೋವನ್ನು ಕಡಿಮೆ ಮಾಡುವುದು.
ಅನಾನಸ್ ಹಣ್ಣು
ನಿಯಮಿತ ಅವಧಿಗೆ ಋತುಸ್ರಾವವನ್ನು ಹೊಂದಲು ಅನಾನಸ್ ಉತ್ತಮ ಮನೆ ಮದ್ದು. ಇದು ಬ್ರೊಮೆಲೈನ್ ಎಂಬ ಕಿಣ್ವವನ್ನು ಹೊಂದಿರುತ್ತದೆ. ಇದು ಗರ್ಭಾಶಯದ ಒಳಪದರವನ್ನು ಮೃದುಗೊಳಿಸುತ್ತದೆ. ಜೊತೆಗೆ ಋತುಸ್ರಾವದ ಅವಧಿಯ ನೋವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುವುದು.
ಆಪಲ್ ಸೈಡರ್ ವಿನೆಗರ್
ಆಪಲ್ ಸೈಡರ್ ವಿನೆಗರ್ ಕುಡಿಯುವುದರಿಂದ ಋತುಚಕ್ರವನ್ನು ನಿಯಂತ್ರಿಸಲು ಹಾಗೂ ನೋವು ನಿವಾರಣೆಗೆ ಸಹಾಯ ಆಗುವುದು. ಆಪಲ್ ಸೈಡರ್ ವಿನೆಗರ್ ಅನ್ನು ದುರ್ಬಲಗೊಳಿಸಿ ಸವಿಯುವುದನ್ನು ಖಚಿತಪಡಿಸಿಕೊಳ್ಳಬೇಕು.
ಜೀರಿಗೆ
ಜೀರಿಗೆ ಗರ್ಭಾಶಯದ ಸ್ನಾಯುಗಳನ್ನು ಸಂಕುಚಿತಗೊಳಿಸುವುದರ ಮೂಲಕ ಅನಿಯಮಿತವಾದ ಅವಧಿಯನ್ನು ಸರಿಪಡಿಸುತ್ತದೆ. ಅನಿಯಮಿತವಾದ ಅವಧಿಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶವನ್ನು ಪಡೆಯಲು ಪ್ರತಿದಿನ ಬೆಳಿಗ್ಗೆ ನೆನೆಸಿದ ಜೀರಿಗೆಯನ್ನು ಬೆಚ್ಚಗಿನ ನೀರಿಗೆ ಸೇರಿಸಿ ಸೇವಿಸಬೇಕು.