2023ರಲ್ಲಿ ಈ 5 ರಾಶಿಯವರಿಗೆ ಮನೆ ಕಟ್ಟುವ ಯೋಗ
2023ರಲ್ಲಿ ಈ 5 ರಾಶಿಯವರಿಗೆ ಮನೆ ಕಟ್ಟುವ ಯೋಗ
ಮೊದಲನೆಯದಾಗಿ ಮೇಷ ರಾಶಿ: 2023ರಲ್ಲಿ ಮೇಷ ರಾಶಿಯವರಿಗೆ ಮನೆ ಕಟ್ಟಲು ಉತ್ತಮ ಅವಕಾಶಗಳು ಇದೆ ಗುರು ಹೊಸ ವರ್ಷದಲ್ಲಿ ನಿಮ್ಮ 12ನೇ ಮನೆಗೆ ಬರುತ್ತಾನೆ ಇದು ಮನೆ ಖರೀದಿಸಲು ಬಹಳ ಉತ್ತಮವಾದ ಸಮಯ ಮೇಷ ರಾಶಿಯವರಿಗೆ ಆಸ್ತಿ,ಹೊಸ ಮನೆ ಅಥವಾ ಭೂಮಿಯನ್ನು ಖರೀದಿಸಲು ನಿಖರವಾದ ಮತ್ತು ಸಮೃದ್ಧವಾದ ಪರಿಸ್ಥಿತಿಗಳು ರೂಪುಗೊಳ್ಳುತ್ತದೆ ನೀವು ಖರೀದಿಸುವ ಭೂಮಿ ಅಥವಾ ಆಸ್ತಿ ನಿಮ್ಮ ಪ್ರಸ್ತುತ ಮನೆಯಿಂದ ಸ್ವಲ್ಪ ದೂರ ಇರಬಹುದು ಮನೆ ಖರೀದಿಸಲು ಸಾಧ್ಯವಾಗದ ಮೇಷ ರಾಶಿಯವರಿಗೆ ಮೇ ಮತ್ತು ಅಕ್ಟೋಬರ್ ತಿಂಗಳ ನಡುವಿನ ಅವಧಿ ಆಸ್ತಿಯಲ್ಲಿ ಹೂಡಿಕೆ ಮಾಡಲು ಬಹಳ ಅತ್ಯುತ್ತಮವಾಗಿರುತ್ತದೆ
ನಿಮ್ಮ ಜೀವನದಲ್ಲಿ ಆಸ್ತಿಯ ವಿಚಾರವಾಗಿ ಜಗಳಗಳು ಇದ್ದರೆ ನೀವು ಅದರಲ್ಲಿ ಯಶಸ್ಸನ್ನು ಪಡೆಯುವಿರಿ ಆಸ್ತಿಯ ಜಗಳ ನ್ಯಾಯಾಲಯದಲ್ಲಿ ಇದ್ದರೆ ಅಥವಾ ಮನೆಯವರ ಪಾಲಾಗುತ್ತಿದ್ದರೆ ಆಸ್ತಿಗೆ ಸಂಬಂಧಪಟ್ಟಂತೆ ನಿಮಗೆ ಯಶಸ್ಸು ಗಳಿಸುವ ಸಾಧ್ಯತೆ ಇದೆ ಎರಡನೆಯದಾಗಿ ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಮನೆ ಖರೀದಿಸಲು ಬಯಸುವವರು ಅಥವಾ ದೀರ್ಘಕಾಲದಿಂದ ಮನೆಗಾಗಿ ಹುಡುಕುತ್ತಿರುವವರು 2023ರಲ್ಲಿ ಮನೆ ಖರೀದಿಸಲು ಬಹಳ ಉತ್ತಮ ಸಮಯ ಇದೆ
ಈ ವರ್ಷ ನೀವು ಖಂಡಿತವಾಗಿಯೂ ಆಸ್ತಿಯನ್ನು ಖರೀದಿ ಮಾಡುವಿರಿ ಅಥವಾ ಭೂಮಿಯ ಮೇಲೆ ಹೂಡಿಕೆ ಮಾಡುವಿರಿ ವರ್ಷದ ಆರಂಭದಲ್ಲಿ ಆಸ್ತಿ ಖರೀದಿಸುವುದು ಬೇಡ ಜನವರಿ ತಿಂಗಳಲ್ಲಿ ಆಸ್ತಿ ಖರೀದಿ ಮಾಡುವುದು ಉತ್ತಮವಲ್ಲ ನಂತರ ಶನಿ ದೇವರ ಅನುಗ್ರಹದಿಂದ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ ಮತ್ತು ಉತ್ತಮ ಲಾಭವನ್ನು ಪಡೆದುಕೊಳ್ಳುವಿರಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಅವಧಿಯು ಆಸ್ತಿಯನ್ನು ಖರೀದಿಸಲು ಬಹಳ ಉತ್ತಮವಾದ ಸಮಯ
ಕನ್ಯಾ ರಾಶಿ: ಈ ರಾಶಿಯವರ ಮನೆ ಖರೀದಿಸುವ ಕನಸು 2023ರಲ್ಲಿ ನನಸಾಗುತ್ತದೆ ಹೊಸ ವರ್ಷವು ನಿಮಗೆ ಯಶಸ್ಸನ್ನು ತರುತ್ತದೆ ಭೂಮಿ,ಆಸ್ತಿ ಖರೀದಿಗೆ ಉತ್ತಮವಾದ ಸಮಯ ಜನವರಿ ಮತ್ತು ಏಪ್ರಿಲ್ ತಿಂಗಳ ನಡುವೆ ನೀವು ದೊಡ್ಡ ಆಸ್ತಿ ಅಥವಾ ದೊಡ್ಡ ಎಸ್ಟೆಟನ್ನು ಖರೀದಿಸುವುದಕ್ಕೆ ಉತ್ತಮ ಸಮಯವಾಗಿದೆ ಕನ್ಯಾ ರಾಶಿಯವರಿಗೆ ಮೇ ಇಂದ ಆಗಸ್ಟ್ ನಡುವಿನ ಅವಧಿ ಮನೆ ಖರೀದಿಸಲು ಉತ್ತಮ ಸಮಯವಲ್ಲ ನವೆಂಬರ್ ಮತ್ತು ಡಿಸೆಂಬರ್ ತಿಂಗಳು ನೀವು ಮನೆ ಖರೀದಿಸಲು ಬಹಳ ಉತ್ತಮವಾದ ಸಮಯವಾಗಿದೆ
ತುಲಾ ರಾಶಿ: ಮನೆ ಖರೀದಿಸುವ ಅದೃಷ್ಟದ ರಾಶಿಗಳಲ್ಲಿ ತುಲಾ ರಾಶಿ ಕೂಡ ಒಂದಾಗಿದೆ ಮೇ ನಿಂದಾ ಜುಲೈ ನಡುವಿನ ಅವಧಿಯು ಉತ್ತಮವಾಗಿದೆ ಆರಂಭದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆದರೆ ಸಾಲವನ್ನು ತೆಗೆದುಕೊಳ್ಳುವ ಮೂಲಕ ನೀವು ಮನೆ ಖರೀದಿಸಲು ಯಶಸ್ವಿಯಾಗುವಿರಿ ಕೊನೆಯದಾಗಿ
ವೃಶ್ಚಿಕ ರಾಶಿ: ದೀರ್ಘಕಾಲದಿಂದ ಮನೆ ಖರೀದಿಸಲು ಅಥವಾ ಮನೆ ನಿರ್ಮಾಣ ಮಾಡಲು ಯೋಚಿಸುತಿರುವುದು ಈ ಸಮಯದಲ್ಲಿ ಕೂಡಿಬರಲಿದೆ 2023ನೇ ವರ್ಷವೂ ಆಸ್ತಿ ಖರೀದಿಯ ವಿಷಯದಲ್ಲಿ ಸಮೃದ್ಧವಾಗಿದೆ ವರ್ಷದ ಆರಂಭದಲ್ಲಿ ಸ್ವಲ್ಪ ನಿಧಾನವಾಗಬಹುದು ಏಕೆಂದರೆ ಶನಿಯು ನಿಮ್ಮ ಮೂರನೇ ಮನೆಯಲ್ಲಿ ಇರುತ್ತಾನೆ ಈ ಮನೆಯಲ್ಲಿ ಶುಕ್ರ ಕೂಡ ಇರ್ತಾನೆ ಹಾಗಾಗಿ ವರ್ಷದ ಆರಂಭದಲ್ಲಿ ಮನೆ ಖರೀದಿಸಲು ಸೂಕ್ತವಲ್ಲ ಆದರೆ ಮಾರಾಟ ಮಾಡುವುದರಲ್ಲಿ ಲಾಭವನ್ನು ಪಡೆಯುವಿರಿ