ನಿದ್ದೆಯಲ್ಲಿ ಮಾತನಾಡುವ ಅಭ್ಯಾಸವೇ!

0 75

ನಾವೆಲ್ಲರೂ ನಿದ್ದೆಯಲ್ಲಿ ಕನವರಿಸುತ್ತೇವೆ. ಕೆಲವರ ಕನವರಿಕೆ ಸುತ್ತ ಮುತ್ತಲ ಎಲ್ಲರ ನಿದ್ದೆ ಕೆಡಿಸುವಷ್ಟು ಗಟ್ಟಿಯಾಗಿದ್ದರೆ ಕೆಲವರನ್ನು ಕೇವಲ ಪಿಸುಮಾತಿನಂತಿರುತ್ತದೆ. ಹೆಚ್ಚಿನವರ ಕನವರಿಕೆ ಮೂಗಿನಿಂದ ಮಾತನಾಡುತ್ತಿರುವಂತಹ ಗೊಣಗಾಟದಂತೆಯೇ ಇರುತ್ತದೆ. ಹೆಚ್ಚಿನ ಮಾತುಗಳು ಅಸ್ಪಷ್ಟವಾಗಿದ್ದು ಯಾವುದೇ ಮಾಹಿತಿಯನ್ನು ನೀಡದಂತೆ ಇರುತ್ತದೆ. ಆದರೆ, ಕೆಲವು ವ್ಯಕ್ತಿಗಳ ಕನವರಿಕೆ ಸ್ಪಷ್ಟವಾಗಿದ್ದು ಪದಗಳು ಅರ್ಥಪೂರ್ಣವಾಗಿಯೇ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆಯೇ ಇರುತ್ತದೆ. ಎಷ್ಟೋ ಸಲ, ಕೋಣೆಯಲ್ಲಿ ಮಲಗಿರುವ ಇತರ ವ್ಯಕ್ತಿಗಳು ಈ ಕನವರಿಕೆಯನ್ನು ಕೇಳಿಸಿಕೊಂಡು ಎಚ್ಚರಿಸುವುದೂ ಉಂಟು. ಆದರೆ, ಎಚ್ಚರಾದ ಬಳಿಕ, ಈ ವ್ಯಕ್ತಿ ಕನವರಿಸುತ್ತಿದ್ದ ಬಗ್ಗೆ ಯಾವುದೇ ನೆನಪನ್ನು ಹೊಂದಿರುವುದಿಲ್ಲ.

​ಪ್ಯಾರಾಸೋಮ್ನಿಯಾ

ಈ ಕನವರಿಕೆಯನ್ನು ವೈದ್ಯವಿಜ್ಞಾನದಲ್ಲಿ ಸೋಮ್ನಿಲೋಕ್ವೇ ಎಂದು ಕರೆಯುತ್ತಾರೆ. ಅಂದರೆ, ನಿದ್ದೆಯಲ್ಲಿ ಸಂಭವಸುವ ಅಸ್ವಾಭಾವಿಕ ನಡವಳಿಕೆ ಅಥವಾ ಪ್ಯಾರಾಸೋಮ್ನಿಯಾ ಎಂಬ ಕಾಯಿಲೆಯ ಒಂದು ಅಂಗವಾಗಿದೆ. ಪ್ರಪಂಚದ ಪ್ರತಿ ಮೂವರು ವ್ಯಕ್ತಿಗಳಲ್ಲಿ ಇಬ್ಬರು ಸ್ಪಷ್ಟವಾಗಿ ಕನವರಿಸುತ್ತಾರೆ. ಅಂದರೆ ಮೂರನೆಯ ವ್ಯಕ್ತಿ ಕನವರಿಸುವುದೇ ಇಲ್ಲವೆಂದಲ್ಲ, ಬದಲಿಗೆ ಇವರ ಕನವರಿಕೆ ಗಮನಕ್ಕೆ ಬಾರದಷ್ಟು ಕ್ಷೀಣವಾಗಿರುತ್ತದೆ. ಮಕ್ಕಳಲ್ಲಿ ಕನವರಿಕೆ ಗರಿಷ್ಟವಾಗಿರುತ್ತದೆ.

ಕನವರಿಕೆ ನಿದ್ದೆಯ ಎಲ್ಲಾ ಸಮಯದಲ್ಲಿ ಸಂಭವಿಸುವುದಿಲ್ಲ, ಎಲ್ಲೋ ಮಧ್ಯೆ ಒಂದೆರಡು ನಿಮಿಷ ಅಷ್ಟೇ. ಕೆಲವರದ್ದಂತೂ ಕೆಲವು ಸೆಕೆಂಡುಗಳಷ್ಟು ಕಾಲ ಮಾತ್ರ. ಹಾಗಾಗಿ, ಇದು ಅತಿ ತೊಂದರೆ ಎಂದು ಅನ್ನಿಸುವುದಿಲ್ಲ. ಆದರೆ, ಈ ಪ್ರಮಾಣ ಹೆಚ್ಚಾದರೆ ಮತ್ತು ಸತತವಾಗಿ ಇಡಿಯ ರಾತ್ರಿ ಕನವರಿಸುತ್ತಿದ್ದರೆ ಮಾತ್ರ ಇದು ಬೇರೆ ಸ್ಥಿತಿಯ ಪ್ರಭಾವ ಅಥವಾ ಔಷಧಿಯ ಅಡ್ಡ ಪರಿಣಾಮದಿಂದ ಎದುರಾಗಿರಬಹುದು.

​ಅಷ್ಟಕ್ಕೂ ಕನವರಿಕೆ ಏಕೆ ಸಂಭವಿಸುತ್ತದೆ?

ಈ ಪ್ರಶ್ನೆಗೆ ವೈದ್ಯ ವಿಜ್ಞಾನದಲ್ಲಿ ಸ್ಪಷ್ಟ ಉತ್ತರವಿಲ್ಲ. ಸಾಮಾನ್ಯವಾಗಿ, ನಿದ್ದೆಗೆ ಒಳಗಾದ ಬಳಿಕ ಕಂಡ ಕನಸಿನಲ್ಲಿ ವ್ಯಕ್ತಿ ಸ್ವತಃ ಪಾಲುದಾರನಾಗಿದ್ದರೆ ತನ್ನ ಪಾತ್ರದ ಅಭಿನಯ ನಡೆಸುವಾಗ ಸಚೇತನವಿರುವ ಮೆದುಳು ಆ ಸೂಚನೆಗಳನ್ನು ಸಂಬಂಧಿತ ಅಂಗಗಳಿಗೆ ಕಳುಹಿಸಿ ಮಾತುಗಳನ್ನು ಆಡಿಸುತ್ತದೆ. ಎಷ್ಟೋ ಬಾರಿ, ಈ ಮಾತುಗಳನ್ನು ದಾಖಲಿಸಿ ವ್ಯಕ್ತಿ ಎಚ್ಚರಾದ ಬಳಿಕ ಕಂಡ ಕನಸನ್ನು ವಿವರಿಸಲು ಹೇಳಿದಾಗ ಈ ವಿಷಯ ಖಾತ್ರಿಗೊಂಡಿದೆ.

ಆದರೆ, ಎಲ್ಲಾ ಕನವರಿಕೆಗಳೂ ಕನಸುಗಳಿಗೆ ಸಂಬಂಧಿಸಿಲ್ಲ. ಕನಸುಗಳು ಗಾಢ ನಿದ್ದೆಯಲ್ಲಿ ಮಾತ್ರವೇ ಸಂಭವಿಸುತ್ತವೆ. ಈ ಸಮಯದಲ್ಲಿ ಕಣ್ಣುಗಳು ತೀವ್ರ ಗತಿಯಲ್ಲಿ ಚಲಿಸುತ್ತವೆ (ರೆಮ್ ಅಥವಾ ರ್‍ಯಾಂಡಮ್ ಐ ಮೂವ್ಮೆಂಟ್ ಸಮಯದಲ್ಲಿ). ಆದರೆ, ಕನವರಿಕೆ ರೆಮ್ ಅಥವಾ ರೆಮ್ ಇಲ್ಲದ ಎರಡೂ ಸ್ಥಿತಿಗಳಲ್ಲಿ ಕಾಣಿಸಿಕೊಳ್ಳಬಹುದು.

ಕೆಲವರಿಗೆ ಕನವರಿಕೆಯ ಜೊತೆಗೇ ನಿದ್ದೆಯಲ್ಲಿ ನಡೆಯುವ, ತಿನ್ನುವ, ಮೂತ್ರವಿಸರ್ಜನೆ ಮೊದಲಾದ ಕ್ರಿಯೆಗಳನ್ನು ನಡೆಸುವ ಇತರ ಪ್ಯಾರಾಸೋಮ್ನಿಯಾ ಲಕ್ಷಣಗಳೂ ಕಾಣಿಸಿಕೊಳ್ಳಬಹುದು.ನಮ್ಮ ನಿದ್ದೆಯ ಮತ್ತು ಎಚ್ಚರ ನಡುವಣ ಸ್ಥಿತಿ ಅಥವಾ ಅರೆನಿದ್ರಾವಸ್ಥೆಯಲ್ಲಿ ಪ್ಯಾರಾಸೋಮ್ನಿಯಾ ಲಕ್ಷಣಗಳು ಗರಿಷ್ಟವಾಗಿರುತ್ತವೆ ಹಾಗೂ ನಿದ್ದೆಯ ಸಮಯದಲ್ಲಿ ಭಂಗವಾದರೆ ಅಥವಾ ನಿದ್ದೆಯ ಸಮಯದಲ್ಲಿ ಬದಲಾವಣೆ ಕಂಡುಬಂದರೆ ಈ ಲಕ್ಷಣಗಳು ಹೆಚ್ಚು ಸ್ಪಷ್ಟವಾಗಿರುತ್ತವೆ. ಕೆಲವೊಮ್ಮೆ ಮದ್ಯದ ಅಮಲು, ಔಷಧಿಯ ಅಡ್ಡ ಪರಿಣಾಮ, ತಲೆಗೆ ಬಿದ್ದ ಪೆಟ್ಟು ಮೊದಲಾದ ಸ್ಥಿತಿಗಳೂ ಕನವರಿಕೆಗೆ ಕಾರಣವಾಗಬಹುದು.

ಕನವರಿಕೆ ಇದ್ದರೂ, ಇದೇನೂ ಗಂಭೀರವಾದ ಅನಾರೋಗ್ಯ ಎಂದು ಪರಿಗಣಿಸಬೇಕಾಗಿಲ್ಲ. ಆದರೆ, ಇದು ಬೇರೆ ಸ್ಥಿತಿಗೆ ಸಂಬಂಧಿಸಿದ ಲಕ್ಷಣವೂ ಆಗಿರಬಹುದು. ವೈದ್ಯರು ಪರಿಗಣಿಸುವ ಇತರ ಸ್ಥಿತಿಗಳು ಎಂದರೆ:

ಪ್ರತಿರೋಧಕ ನಿದ್ರಾ ಉಸಿರುಕಟ್ಟುವಿಕೆ..ರೆಮ್ ನಿದ್ರೆಯ ವರ್ತನೆಯ ಅಸ್ವಸ್ಥತೆ..ಆಘಾತದ ಬಳಿಕ ಎದುರಾಗುವ ಒತ್ತಡದ ಅಸ್ವಸ್ಥತೆ.ಒಂದು ವೇಳೆ ವಯಸ್ಕರಾದ ಬಳಿಕವೂ ನಿದ್ದೆಯಲ್ಲಿ ಕನವರಿಕೆ ಏಕಾ ಏಕಿ ಕಂಡುಬಂದರೆ, ಅತೀವ ಭಯದಿಂದ ಕೂಡಿದ್ದರೆ, ಕೂಗಾಟ ಚೀರಾಟಗಳು ಕೇಳಿಬಂದರೆ ಅಥವಾ ಕ್ರೂರತೆ ಪ್ರಕಟಿಸುವ ಯಾವುದೇ ಲಕ್ಷಣಗಳು ಕಂಡು ಬಂದರೆ ಮಾತ್ರ ನಿದ್ರಾ ತಜ್ಞರನ್ನು ಕಾಣುವುದು ಅನಿವಾರ್ಯವಾಗುತ್ತದೆ.

​ಕನವರಿಕೆಯನ್ನು ನಿಲ್ಲಿಸುವುದು ಹೇಗೆ?

ಕನವರಿಕೆ ಏಕಾಗಿ ಬರುತ್ತದೆ ಎಂಬುದೇ ವಿಜ್ಞಾನಕ್ಕೆ ಸ್ಪಷ್ಟವಾಗಿಲ್ಲದೇ ಇದ್ದಾಗ ಇದಕ್ಕೆ ಸ್ಪಷ್ಟ ಚಿಕಿತ್ಸೆಯನ್ನೂ ಹೇಳಲು ಸಾಧ್ಯವಿಲ್ಲ. ಆದರೆ, ನಿದ್ದೆಯನ್ನು ಸಮರ್ಪಕಗೊಳಿಸುವ ಮೂಲಕ ಆದಷ್ಟೂ ಕಡಿಮೆ ಮಾಡಬಹುದು.

ಆರೋಗ್ಯಕರ ಹಾಗೂ ನಿಸರ್ಗ ನಿಯಮಕ್ಕೆ ಸರಿಯಾಗಿ ನಿದ್ದೆಯನ್ನು ಅನುಸರಿಸುವ ಮೂಲಕ ಹಾಗೂ ನಿದ್ರಿಸುವ ಪರಿಸರ ಪೂರಕವಾಗಿ ಇರುವಂತೆ ಮಾಡುವ ಮೂಲಕ ಮತ್ತು ನಿದ್ದೆಗೆ ಯಾವುದೇ ಭಂಗ ಬಾರದಂತೆ ನೋಡಿಕೊಳ್ಳುವ ಮೂಲಕ ನಿದ್ದೆಯ ಗುಣಮಟ್ಟವನ್ನು ಉತ್ತಮಗೊಳಿಸಬಹುದು.

​ನಿದ್ದೆಯ ಸಮಯದಲ್ಲಿ ಈ ಕೆಳಗಿನ ವಿಷಯಗಳ ಬಗ್ಗೆ ಗಮನವಿರಲಿ…ಸದಾ ಒಂದೇ ನಿದ್ದೆಯ ಸಮಯಗಳನ್ನು ಪಾಲಿಸಿ.ನಿತ್ಯ ರಾತ್ರಿ ಏಳರಿಂದ ಒಂಭತ್ತು ಗಂಟೆ ಕಾಲ ಮಲಗಲು ಯೋಜಿಸಿಕೊಳ್ಳಿ.ಮಲಗುವ ಮುನ್ನ ನಿಮ್ಮ ಯಾವುದೇ ಇಂದ್ರಿಯಗಳಿಗೆ ಹೊರ ನೀಡದಂತೆ ಕನಿಷ್ಟ ಅರ್ಧ ಘಂಟೆ, ಸಾಧ್ಯವಾದರೆ ಒಂದು ಘಂಟೆ ವಿರಾಮ ನೀಡಿ.ನಿಮ್ಮ ಮನಸ್ಸಿಗೆ ಎದುರಾಗುವ ಒತ್ತಡವನ್ನು ಆದಷ್ಟೂ ಕಡಿಮೆ ಮಾಡಿಕೊಳ್ಳಲು ಯತ್ನಿಸಿ.ಮದ್ಯಪಾನ ಅತಿ ಮಿತವಾಗಿಸಿ, ವರ್ಜಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ.ನಿದ್ದೆಗೂ ಆರು ಘಂಟೆಗಳ ಮುನ್ನ ಕೆಫೇನ್ ಅಥವಾ ನಿದ್ದೆ ಭಂಗಗೊಳಿಸುವ ಯಾವುದೇ ಆಹಾರ ಸೇವಿಸದಿರಿ.

ನಿತ್ಯವೂ ವ್ಯಾಯಾಮ ಮಾಡಿ

ಮಲಗುವ ಕೋಣೆ ಆದಷ್ಟೂ ಕತ್ತಲಿನಿಂದಿರಲಿ ಮತ್ತು ಯಾವುದೇ ಸದ್ದು ಬಾರದಂತಿರಲಿ.ಕೋಣೆಯ ತಾಪಮಾನ 15.5 ರಿಂದ 19.5 ಡಿಗ್ರಿ ಸೆಲ್ಸಿಯಸ್ ನಷ್ಟು ತಂಪಾಗಿರುವಂತೆ ವ್ಯವಸ್ಥೆ ಮಾಡಿಕೊಳ್ಳಿ.

Leave A Reply

Your email address will not be published.