ಬರಿ ಒಂದು ಗಂಟೆಯಲ್ಲಿ ಕಾಳು ನೆನೆಸುವ ಸೂಪರ್ ಟಿಪ್ಸ್!

0 903

ಕೆಲವೊಮ್ಮೆ ಕಾಳು ನೆನಸಿಡುವುದಕ್ಕೆ ಕೆಲವರು ಮರೆತು ಹೋಗುತ್ತಾರೆ. ಕಾಳು ಸಾಂಬಾರ್ ಅಂದ್ರೆ ತುಂಬಾ ರುಚಿಯಾಗಿ ಇರುತ್ತದೆ. ಕಾಳು ಸಾಂಬಾರ್ ಮಾಡುವಾಗ ಹಿಂದಿನ ದಿನವೇ ನೆನಸಿ ಇಡುತ್ತೇವೆ. ಈ ರೀತಿ ಮಾಡಿ ಕಾಳು ಸಾಂಬಾರ್ ಅನ್ನು ಮಾಡುತ್ತೀವಿ. ಕೆಲವೊಮ್ಮೆ ಕಾಳನ್ನು ನೆನಸಿಡುವುದಕ್ಕೆ ಮರೆತು ಹೋಗಿದ್ದರೆ ಈ ಒಂದು ಸೂಪರ್ ಟಿಪ್ಸ್ ಅನ್ನು ಫಾಲೋ ಮಾಡಿ.

ಮೊದಲು ಒಂದು ಹಾಟ್ ಬಾಕ್ಸ್ ತೆಗೆದುಕೊಂಡು ನಿಮಗೆ ಬೇಕಾಗಿರುವ ಕಾಳನ್ನು ಹಾಕಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಚೆನ್ನಾಗಿ ಕುದಿಸುವುದಕ್ಕೆ ನೀರು ಇಡಬೇಕು. ಕುದಿಸಿದ ನೀರನ್ನು ಹಾಟ್ ಬಾಕ್ಸ್ ಒಳಗೆ ಹಾಕಿ ಲೀಡ್ ಇಂದ ಕ್ಲೋಸ್ ಮಾಡಬೇಕು. ಈ ರೀತಿ ಮಾಡಿ ಒಂದು ಗಂಟೆ ಹಾಗೆ ಬಿಟ್ಟರೆ ಕಾಳು ಚೆನ್ನಾಗಿ ನೆನೆಯುತ್ತೇ. ಕಾಳಲ್ಲಿ ಇರುವ ಪೋಷಕಾಂಶಗಳು ಅರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದರಿಂದ ಕಾಳನ್ನು ಅವಾಗ್ ಅವಾಗ್ ತಿನ್ನುತ್ತಾ ಇರಬೇಕು.

ಒಂದು ಗಂಟೆ ನಂತರ ಕಾಳನ್ನು ನೋಡಿ ಕಾಳು ಚೆನ್ನಾಗಿ ನೆಂದಿರುತ್ತದೆ. ಈ ರೀತಿ ಮಾಡುವುದರಿಂದ ಒಂದೇ ಒಂದು ಗಂಟೆಯಲ್ಲಿ ನೀವು ಕಾಳನ್ನು ನೆನಸಬಹುದು. ಯಾವುದೇ ಕಾಳು ಇರಲಿ ಸುಲಭವಾಗಿ ಒಂದು ಗಂಟೆಯಲ್ಲಿ ಈ ರೀತಿ ನೆನಸುವುದಕ್ಕೆ ಇಡಬಹುದು.

Leave A Reply

Your email address will not be published.