ರಕ್ತವನ್ನು Fast ಆಗಿ ಉತ್ಪತ್ತಿ ಮಾಡುತ್ತೆ!ರಕ್ತ ಕಡಿಮೆ ಆಗಲ್ಲ!

0 22,866

ಇತ್ತೀಚಿನ ಜನಗಳಿಗೆ ರಕ್ತ ಹೀನತೆ ಸಮಸ್ಸೆ ಉಂಟಾಗುತ್ತಿದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಆಗುತ್ತಿದೆ. ಇದರಿಂದ ತುಂಬಾ ಸುಸ್ತು ಆಗುವುದು ಸ್ಟ್ರೆಸ್ ಗೆ ಒಳಗಾಗುವುದು, ಯಾವುದ್ರಲ್ಲೂ ಆಸಕ್ತಿ ಇರುವುದಿಲ್ಲ, ನಿಶಕ್ತಿಯಿಂದ ಕೂಡಿರುವುದು ಹೀಗೆಲ್ಲ ಆಗುತ್ತದೆ. ಇದಕ್ಕೆಲ್ಲ ಕಾರಣ ಅವರ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಇಲ್ಲದೆ ಇರುವುದು. ಏಕೆಂದರೆ ಸೇವನೆ ಮಾಡುವ ಆಹಾರದಲ್ಲಿ ಕಬ್ಬಿಣ ಅಂಶ ಕೊರತೆ ಇರುವುದರಿಂದ ಅದರ ರಕ್ತದಲ್ಲಿ ಕೂಡ ಹಿಮೋಗ್ಲೋಬಿನ್ ಅಂಶ ಇರುವುದಿಲ್ಲ.ಇದಕ್ಕೆ ನಾವು ಅನಿಮಿಯ ಮತ್ತು ರಕ್ತ ಹೀನತೆ ಸಮಸ್ಸೆ ಎಂದು ಕರೆಯುತ್ತೇವೆ.

ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ರಕ್ತ ಹೀನತೆ ಸಮಸ್ಸೆ ಕಂಡು ಬರುತ್ತದೆ. ನಿಮಗೆ ತುಂಬಾ ಸುಸ್ತು ನಿಶಕ್ತಿ ಆಗುತ್ತಿದ್ದರೆ ನೀವು ಒಂದು ಬ್ಲಾಡ್ ಟೆಸ್ಟ್ ಮಾಡಿಸಬೇಕು. ಆಗ ನಿಮಗೆ ಗೊತ್ತಾಗುತ್ತದೆ ಹಿಮೋಗ್ಲೋಬಿನ್ ಅಂಶ ಕಡಿಮೆ ಇದೆ ಇಲ್ಲವಾ ಎಂದು.ಇದಕ್ಕಾಗಿ ಈ ಲೇಖನದಲ್ಲಿ ರಕ್ತ ಬೇಗ ಉತ್ಪತ್ತಿ ಆಗುವ ಮನೆಮದ್ದನ್ನು ತಿಳಿಸಿಕೊಡುತ್ತೇವೆ.

ಪಾತ್ರೆಗೆ ಎರಡು ಗ್ಲಾಸ್ ನೀರು ಹಾಕಿಕೊಳ್ಳಿ. ಇದಕ್ಕೆ 25 ಒಣದ್ರಾಕ್ಷಿ ಹಾಕಿಕೊಳ್ಳಬೇಕು. ಒಣದ್ರಾಕ್ಷಿಯಲ್ಲಿ ತುಂಬಾನೇ ಐರನ್ ಕಂಟೆಂಟ್ ಇರುತ್ತದೆ. ಇದನ್ನು ಚೆನ್ನಾಗಿ ಕುದಿಸಬೇಕು. ಇದನ್ನು ರಾತ್ರಿ ಪೂರ್ತಿ ಹಾಗೆ ಇಟ್ಟುಬಿಡಿ. ಇದನ್ನು ಬೆಳಗ್ಗೆ ಶೋದಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದರ ಜೊತೆ ದ್ರಾಕ್ಷಿ ಅನ್ನು ತಿನ್ನಬೇಕು.ಆಗ ಕಬ್ಬಿಣ ಅಂಶ ನಿಮಗೆ ಪೂರ್ತಿಯಾಗಿ ಸಿಗುತ್ತದೆ.

Leave A Reply

Your email address will not be published.