ಅಡುಗೆ ಮನೆಯಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ!

0 149

ವಾಸ್ತು ಶಾಸ್ತ್ರದಲ್ಲಿ ಜೊತೆಗೆ ಜ್ಯೋತಿಷ್ಯಶಾಸ್ತ್ರದಲ್ಲೂ ಅಡುಗೆ ಮನೆಗೆ ಬಹಳ ಪ್ರಾಶಸ್ತ್ಯವನ್ನು ನೀಡಲಾಗಿದೆ. ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಎಲ್ಲಾ ವಿಷಯಗಳ ಕಡೆಗೂ ಗಮನ ಹರಿಸುವುದು ಮುಖ್ಯ. ಇಲ್ಲವಾದರೆ ಮನೆಯಲ್ಲಿ ವಾಸ್ತು ದೋಷಗಳು ಹೆಚ್ಚಾಗುವವು. ಇದರೊಂದಿಗೆ ಎಲ್ಲಾ ಸಮಸ್ಯೆಗಳೂ ಬಂದೆರಗುತ್ತವೆ. ಆದ್ದರಿಂದ ವಾಸ್ತುವಿನ ದೃಷ್ಟಿಯಿಂದ ಅಡುಗೆ ಮನೆಯಲ್ಲಿ ಗಮನಿಸಬೇಕಾದ ಅಂಶಗಳು ಯಾವುವು ಎನ್ನುವುದನ್ನು ತಿಳಿಯಿರಿ.

ಹಣದ ನಷ್ಟ

ವಾಸ್ತುಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಎಂದಿಗೂ ಚಪ್ಪಲಿಗಳನ್ನು ಧರಿಸಬಾರದು. ಇದರಿಂದ ವ್ಯಕ್ತಿಯು ಆರ್ಥಿಕ ನಷ್ಟವನ್ನು ಎದುರಿಸಬಹುದು. ಇದಲ್ಲದೇ ಎಂದಿಗೂ ಚಾಕು, ಕತ್ತರಿ ಅಥವಾ ಯಾವುದೇ ಹರಿತವಾದ, ಚೂಪಾದ ವಸ್ತುಗಳನ್ನು ಅಡುಗೆ ಮನೆಯ ಗೋಡೆಯ ಮೇಲೆ ತೂಗು ಹಾಕಬಾರದು. ಇದು ಅನೇಕ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುತ್ತದೆ.

​ಇದನ್ನು ಮರೆಯಬೇಡಿ

ವಾಸ್ತುಶಾಸ್ತ್ರದ ಪ್ರಕಾರ ಪ್ರತಿಬಾರಿ ಆಹಾರ ತಯಾರಿಸಿದಾಗಲೆಲ್ಲಾ ಆ ಆಹಾರವನ್ನು ಪ್ರತ್ಯೇಕವಾಗಿ ಶುದ್ಧ ಪಾತ್ರೆಗಳಲ್ಲಿ ಇರಿಸಿ. ಒಂದು ಶುದ್ಧವಾದ ತಟ್ಟೆಯಲ್ಲಿ ನೀವು ತಯಾರಿಸಿದ ಆಹಾರವನ್ನು ಬಡಿಸಿ, ಅದನ್ನು ಹಸುವಿಗೆ ನೀಡಿ, ನಂತರ ಮನೆಯ ಸದಸ್ಯರು ಆಹಾರವನ್ನು ಸೇವಿಸಿ. ಇದು ಸಾಧ್ಯವಾಗದಿದ್ದಲ್ಲಿ ನೀವು ಆಹಾರ ಸೇವಿಸುವ ಮುನ್ನ ಒಂದು ತಟ್ಟೆಯಲ್ಲಿ ಸ್ವಲ್ಪ ಆಹಾರ ಪದಾರ್ಥನ್ನು ಹಾಕಿ ಪಕ್ಕದಲ್ಲಿಡಿ, ಇದನ್ನು ಮಾಡುವುದರಿಂದ ಜೀವನದಲ್ಲಿ ಹಣಕ್ಕೆ ಸಂಬಂಧಿಸಿದ ಯಾವ ಸಮಸ್ಯೆಯೂ ಇರುವುದಿಲ್ಲವೆಂದು ಹೇಳಲಾಗುತ್ತದೆ. ಅಲ್ಲದೇ ಆರೋಗ್ಯವೂ ಉತ್ತಮವಾಗಿರುತ್ತದೆ.

​ಹಾಲು ಶೇಖರಿಸಿಡುವಾಗ ಈ ಅಂಶ ನೆನಪಿರಲಿ

ಹಾಲನ್ನು ಅಡುಗೆ ಮನೆಯಲ್ಲಿಡುವಾಗ ವಿಶೇಷ ಜಾಗರೂಕತೆ ವಹಿಸಬೇಕು. ಹಾಲನ್ನು ಎಂದಿಗೂ ತೆರೆದಿಡಬಾರದು. ಅದನ್ನು ಬೇರೊಂದು ತಟ್ಟೆಯಿಂದ ಮುಚ್ಚಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇಲ್ಲವಾದರೆ ತೆರೆದಿಟ್ಟ ಪಾತ್ರೆಯಲ್ಲಿರುವ ಹಾಲು ಮನೆಯಲ್ಲಿ ಅನೇಕ ಸಮಸ್ಯೆಗಳನ್ನುಂಟು ಮಾಡಬಹುದು. ಅದು ಯಾವುದೇ ರೀತಿಯ ಆರ್ಥಿಕ, ದೈಹಿಕ ಮತ್ತು ಮಾನಸಿಕ ತೊಂದರೆಗಳು ಆಗಿರಬಹುದು.

​ಅಡುಗೆ ಮನೆಯಲ್ಲಿ ಆಹಾರ ಸೇವನೆ

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಆಹಾರ ಸೇವನೆ ಮಾಡುವುದು, ಅನೇಕ ರೀತಿಯ ಗ್ರಹದೋಷಗಳಿಂದ ಮುಕ್ತಿಯನ್ನು ನೀಡುತ್ತದೆ. ವಾಸ್ತುಪ್ರಕಾರ ಅಡುಗೆ ಮನೆಯಲ್ಲಿ ಊಟ ಮಾಡಲು ಕುಳಿತುಕೊಳ್ಳುವಾಗ ಈ ವಿಷಯಗಳನ್ನು ಅನುಸರಿಸಿ. ಅಡುಗೆ ಮನೆಯ ಮಧ್ಯದಲ್ಲಿ ಎಂದಿಗೂ ಕುಳಿತು ಊಟ ಮಾಡಬಾರದು. ಅಲ್ಲದೇ ತಿನ್ನುವಾಗ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನತ್ತ ಮುಖ ಮಾಡಬೇಡಿ. ಇದು ಶುಭವಲ್ಲ. ಅಡುಗೆ ಮನೆಯಲ್ಲಿನ ಗ್ಯಾಸ್‌ ಸ್ಟೋವ್‌ ಹೊರಗಿನಿಂದ ಯಾರಿಗೂ ಗೋಚರಿಸದಂತಿರಬೇಕು.

Leave A Reply

Your email address will not be published.