ಮೇಷ ರಾಶಿ ಅಶ್ವಿನಿ ನಕ್ಷತ್ರದವರ ಸ್ವಭಾವಗಳು
ಮೇಷ ರಾಶಿ ಅಶ್ವಿನಿ ನಕ್ಷತ್ರದವರ ಸ್ವಭಾವಗಳು
ಅಶ್ವಿನಿ ನಕ್ಷತ್ರದಲ್ಲಿ ಬರುವಂತಹ ನಾಲ್ಕು ಚರಣಗಳಲ್ಲಿ ಚೂ,ಚೇ, ಚೋ,ಲ ಎಂಬ ನಾಲ್ಕು ಅಕ್ಷರಗಳಲ್ಲಿ ಬರತಕ್ಕಂತಹ ಜನ್ಮ ನಕ್ಷತ್ರದವರಿಗೆ ಯಾವ ರೀತಿಯ ಫಲಗಳು ಬರುತ್ತದೆ ಎನ್ನುವುದಾದರೆ ಇವರು ಸದಾ ಅಧ್ಯಯನಶೀಲರಾಗಿರುತ್ತಾರೆ ಯಾವುದೇ ವಿಷಯಗಳಿದ್ದರೂ ಅದನ್ನು ಅಧ್ಯಯನಕ್ಕೆ ತಿರುಗಿಸಿಕೊಳ್ಳುವಂತಹ ಸಾಮರ್ಥ್ಯ ಇವರಿಗೆ ಇರುತ್ತದೆ ಅದರ ಬಗ್ಗೆ ಹೆಚ್ಚಾಗಿ ವಿಚಾರ ಮಾಡುತ್ತಾರೆ ಇವರು ಹತ್ತಾರು ದಿಕ್ಕುಗಳಲ್ಲಿ ಯೋಚಿಸುವಂತಹ ಮನಸ್ಥಿತಿ ಹೊಂದಿರುತ್ತಾರೆ ಇವರು ಕೆಲವು ಸಂದರ್ಭಗಳಲ್ಲಿ ಚಂಚಲ ಸ್ಥಿತಿಯನ್ನು ಹೊಂದಿರುವಂತಹವರು ಆದರೆ ಕೆಲವರು ಲೇಖಕರು ಹಾಗೂ ಪ್ರಾಮಾಣಿಕರು ಆಗಿರುತ್ತಾರೆ
ಮನಸ್ಥಿತಿ ಚಂಚಲವಾಗಿದ್ದರು ಕೂಡ ಪ್ರಾಮಾಣಿಕತೆಗೆ ಯಾವ ರೀತಿಯ ಕೊರತೆಯೂ ಇರುವುದಿಲ್ಲ ಲೇಖನಗಳನ್ನು ಬರೆಯುವಂತಹ ಅಭ್ಯಾಸಗಳನ್ನು ರೂಡಿಸಿಕೊಂಡಿರುತ್ತಾರೆ ಮನೆಯಲ್ಲಿ ಸಣ್ಣ ಪುಟ್ಟ ವಿಷಯಗಳಿಗೆ ವಾದಗಳು ಉಂಟಾಗುವ ಸಾಧ್ಯತೆಗಳು ಕಂಡುಬರುತ್ತದೆ ಮಹತ್ವಕಾಂಕ್ಷಿಗಳು ಮತ್ತು ವಿಚಾರಗಳನ್ನು ಯೋಚನೆ ಮಾಡುವ ಮನಸ್ಥಿತಿಯನ್ನು ಹೊಂದಿರುತ್ತಾರೆ ಇನ್ನು ಈ ನಕ್ಷತ್ರದಲ್ಲಿ ಜನಿಸಿದವರು ನಕ್ಷತ್ರದ ನಾಲ್ಕು ಚರಣಗಳ ಅನುಸಾರವಾಗಿ ಅಶ್ವಿನಿ ನಕ್ಷತ್ರದ ಮೊದಲನೇ ಚರಣದಲ್ಲಿ ಹುಟ್ಟಿರುವ ಜನರು ಹೇಗಿರುತ್ತಾರೆ ಎಂದರೆ ಏನೇ ಇದ್ದರೂ ನಿಷ್ಟೂರವಾಗಿ ಮಾತನಾಡುವಂತಹ ಸ್ವಭಾವದವರಾಗಿರುತ್ತಾರೆ
ನಿರಂಕುಶವಾಗಿ ಇರತಕ್ಕಂತಹದ್ದು, ನೇರ ನುಡಿಗಳನ್ನು ಆಡುವಂತಹವರಾಗಿರುತ್ತಾರೆ ಇನ್ನು ಎರಡನೇ ಚರಣದಲ್ಲಿ ಜನಿಸಿದವರು ಸದಾ ಉಲ್ಲಾಸವಾಗಿರಬೇಕು, ಆನಂದವಾಗಿರಬೇಕು ಎಂಬ ಮನಸ್ಥಿತಿಯನ್ನು ಹೊಂದಿರುತ್ತಾರೆ ಅದೇ ರೀತಿ ಮೂರನೇ ಚರಣದಲ್ಲಿ ಹುಟ್ಟಿದವರು ತಮ್ಮ ವಿಚಾರದಲ್ಲಿ ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹವರಾಗಿರುತ್ತಾರೆ ಆ ಒಂದು ಕಾರ್ಯವನ್ನು ಸಂಪೂರ್ಣವಾಗಿ ಮಾಡುವವರೆಗೂ ಬಿಡದೆ ಇರತಕ್ಕಂಥ ಮನಸ್ಥಿತಿಯನ್ನು ಹೊಂದಿರುತ್ತಾರೆ
ನಾಲ್ಕನೇ ಚರಣದಲ್ಲಿ ಹುಟ್ಟಿರುವಂತಹವರು ಆಕರ್ಷಕವಾದ ಮತ್ತು ಉತ್ತಮವಾದಂತಹ ಗುಣವನ್ನು, ನಡವಳಿಕೆಯನ್ನು ರೂಪಿಸಿಕೊಂಡಿರುವ ಅಂತಹವರು ಸ್ನೇಹಜೀವಿಗಳಾಗಿ ಇರುತ್ತಾರೆ ಅಶ್ವಿನಿ ನಕ್ಷತ್ರ ಪ್ರಾರಂಭದ ನಕ್ಷತ್ರ ಆಗಿರುವುದರಿಂದ ವಿದ್ಯಾರಂಭ ಮಾಡುವುದಕ್ಕೆ ಬಹಳ ಅಭಿವೃದ್ಧಿಯಾಗುತ್ತದೆ ವಿದ್ಯಾಪ್ರಾಪ್ತಿಯಾಗುತ್ತದೆ ಬಹಳಷ್ಟು ಶ್ರೇಷ್ಠಕರವಾಗಿರುವಂತಹ ಫಲ ವಿದ್ಯಾರ್ಥಿಗಳಿಗೆ ಸಿಗುತ್ತದೆ ಮತ್ತು ಈ ನಕ್ಷತ್ರದವರು ಮನೆ ನಿರ್ಮಾಣ ಮಾಡಲು ಆರಂಭಿಸಿದರೆ ಅದು ಬೇಗನೆ ಮುಗಿಯುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ