ಈ ನಕ್ಷತ್ರದವರು ಈ ಗಿಡಗಳನ್ನು ಬೆಳೆಸಿದರೆ ಒಳ್ಳೆಯದು!

0 9,400

ನಿಮ್ಮ ನಕ್ಷತ್ರದ ಗುಣವಾಗಿ ಈ ಗಿಡಗಳನ್ನು ಬೆಳೆಸಿದರೆ ಒಳ್ಳೆಯದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ಮರಗಿಡಗಳನ್ನು ನಿಮ್ಮ ನಕ್ಷತ್ರಗಳಿಗೆ ಅನುಸಾರವಾಗಿ ನಕ್ಷತ್ರಗಳ ಪ್ರಕಾರ ಗಿಡಗಳನ್ನು ನೆಟ್ಟರೆ ಗ್ರಹದೋಷ ನಿವಾರಣೆ ಮಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಇದಕ್ಕೆ ಅನುಗುಣವಾಗಿ ನವಗ್ರಹವನ ಗಿಡಮೂಲಿಕೆ ವನಗಳು, ದೇವವನಗಳ ಸಂಖ್ಯೆ ಹೆಚ್ಚುತ್ತಿದೆ. ಎಲ್ಲಾ ಕಡೆ ಕಟ್ಟಡಗಳು ನಿರ್ಮಾಣವಾಗುತ್ತಿರುವ ಈ ಕಾಲದಲ್ಲಿ ಹಸಿರು ಗಿಡಮರಗಳನ್ನು ಕಡಿದು ಹಾಕುತ್ತಿದ್ದಾರೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಕ್ಷತ್ರದ ಅನುಗುಣವಾಗಿ ಗಿಡಗಳನ್ನು ಬೆಳೆಸುವುದರಿಂದ ಅವರ ದೋಷಗಳು ನಿವಾರಣೆಯಾಗುತ್ತದೆ.ಅಶ್ವಿನಿ, ಮಘ, ಮೂಲ ನಕ್ಷತ್ರದವರು : ಈ ನಕ್ಷತ್ರಗಳ ಅಧಿಪತಿ ಕೇತು. ಆದ್ದರಿಂದ ಕೇತು ದೋಷ ನಿವಾರಣೆಗೆ ದರ್ಬೆ ಗಿಡವನ್ನು ಬೆಳೆಸಿ ಹಾಗೂ ಜಾಜಿ ಹೂವಿನ ಗಿಡವನ್ನು ಮನೆಯಲ್ಲಿ ಇಟ್ಟು ಬೆಳೆಸಬಹುದು.ಭರಣಿ,ಪುಬ್ಜ,ಪೂರ್ವಷಾಡ ನಕ್ಷತ್ರದವರು: ಈ ನಕ್ಷತ್ರಗಳಿಗೆ ಅಧಿಪತಿ ಶುಕ್ರ ಗ್ರಹ. ಆದ್ದರಿಂದ ಶುಕ್ರ ಗ್ರಹದೋಷವನ್ನು ನಿವಾರಣೆ ಮಾಡಿಕೊಳ್ಳಲು ಹೌದಂಬರ, ಕಮಲದ ಹೂವಿನ ಗಿಡಗಳನ್ನು ಬೆಳೆಸಿದರೆ ಒಳ್ಳೆಯದು.ಕೃತಿಕಾ,ಉತ್ತರ, ಉತ್ತರಾಷಾಡ ನಕ್ಷತ್ರದವರು : ಈ ನಕ್ಷತ್ರಗಳ ಅಧಿಪತಿ ಸೂರ್ಯ ಗ್ರಹ. ಆದ್ದರಿಂದ ಸೂರ್ಯ ದೋಷ ನಿವಾರಣೆಗೆ ಬಿಳಿ ಎಕ್ಕೆಯ ಗಿಡವನ್ನು ಹಾಗೂ ಕನಕಾಂಬರ ಹೂವಿನ ಗಿಡವನ್ನು ಮನೆಯಲ್ಲಿ ಬೆಳೆಸಿದರೆ ಒಳ್ಳೆಯದು.

ರೋಹಿಣಿ, ಹಸ್ತ, ಶ್ರಾವಣ ನಕ್ಷತ್ರದವರು :ಈ ನಕ್ಷತ್ರಗಳಿಗೆ ಅಧಿಪತಿ ಚಂದ್ರ ಗ್ರಹ. ಆದ್ದರಿಂದ ಚಂದ್ರ ಗ್ರಹ ದೋಷ ನಿವಾರಣೆಗೆ ಉತ್ತುಂಗದ ಮರ ಮತ್ತು ಬಿಳಿ ತಾವರೆ ಗಿಡವನ್ನು ಮನೆಯಲ್ಲಿ ಬೆಳೆಸಿದರೆ ಒಳ್ಳೆಯದು.ಮೃಗಶಿರಾ,ಚಿತ್ತಾ,ಧನಿಷ್ಟ ನಕ್ಷತ್ರದವರು : ಈ ನಕ್ಷತ್ರಗಳಿಗೆ ಅಧಿಪತಿ ಕುಜ ಗ್ರಹ. ಆದ್ದರಿಂದ ಕುಜ ಗ್ರಹ ದೋಷ ನಿವಾರಣೆಗೆ ಗಲ್ಲಿ ಮರ ಹಾಗೂ ದಗ್ಗರಿ ಹೂವಿನ ಮರದ ಗಿಡಗಳನ್ನು ಮನೆಯ ಬಳಿ ಬೆಳೆಸಬೇಕು.ಆರಿದ್ರ, ಸ್ವಾತಿ,ಶತಾಬಿಷ ನಕ್ಷತ್ರದವರು : ಈ ನಕ್ಷತ್ರಗಳ ಅಧಿಪತಿ ರಾಹು ಗ್ರಹ. ರಾಹು ಗ್ರಹ ದೋಷ ನಿವಾರಣೆಗೆ ಗರಿಕೆ ಹಾಗೂ ಬೆಟ್ಟದ ತಾವರೆ ಹೂವಿನ ಗಿಡಗಳನ್ನು ಮನೆಯಲ್ಲಿ ಬೆಳೆಸಬೇಕು.

ಪುನರ್ವಸು, ವಿಶಾಖ, ಪೂರ್ವಭಾದ್ರಪದ ನಕ್ಷತ್ರದವರು : ಈ ನಕ್ಷತ್ರಗಳ ಅಧಿಪತಿ ಗುರು ಗ್ರಹ. ಗುರು ಗ್ರಹ ದೋಷ ನಿವಾರಣೆಗೆ ಅರಳಿ ಗಿಡ ಮತ್ತು ಪಾರಿಜಾತ ಹೂವಿನ ಗಿಡವನ್ನು ಮನೆಯಲ್ಲಿ ಬೆಳೆಸಬೇಕು.ಪುಷ್ಯ,ಅನುರಾಧ, ಉತ್ತರಭಾದ್ರಪದ ನಕ್ಷತ್ರದವರು : ಈ ನಕ್ಷತ್ರಗಳ ಅಧಿಪತಿ ಶನಿ ಗ್ರಹ. ಶನಿ ಗ್ರಹ ದೋಷ ನಿವಾರಣೆಗೆ ಶನಿ ವೃಕ್ಷ ಹಾಗೂ ತುಳಸಿ ಗಿಡವನ್ನು ಮನೆಯಲ್ಲಿ ಬೆಳೆಸಬೇಕು.ಆಶ್ಲೇಷ ಜೇಷ್ಠ, ರೇವತಿ ನಕ್ಷತ್ರದವರು: ಈ ನಕ್ಷತ್ರಗಳ ಅಧಿಪತಿ ಬುಧ ಗ್ರಹ. ಬುಧ ಗ್ರಹ ದೋಷ ನಿವಾರಣೆಗೆ ಉತ್ತರಣಿ ಗಿಡ ಮತ್ತು ಮಲ್ಲಿಗೆ ಹೂವಿನ ಗಿಡಗಳನ್ನು ಮನೆಯಲ್ಲಿ ಬೆಳೆಸಬೇಕು.

Leave A Reply

Your email address will not be published.