ನೀವೇನಾದ್ರು ಕಪ್ಪು ಬಣ್ಣದ ಬಟ್ಟೆ ಹಾಗು ಕೆಂಪು ಬಣ್ಣದ ಬಟ್ಟೆ ಹಾಕಿದರೆ ಕಷ್ಟ ತಪ್ಪಿದ್ದಲ್ಲ!

0 320

ಕಣ್ಣು ದೃಷ್ಟಿಯಿಂದ ಪರಾಗಬೇಕು ಎಂದರೆ ಹೆಣ್ಣು ಮಕ್ಕಳು ಈ ಬಣ್ಣದ ವಸ್ತುಗಳನ್ನು ಬಳಸಬಾರದು. ಮಹಿಳೆಯರು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ಅಲಂಕಾರವನ್ನು ಮಾಡಿಕೊಳ್ಳುತ್ತಾರೆ. ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಆಭರಣವನ್ನು ಹಾಕಿಕೊಳ್ಳುತ್ತಾರೆ. ಅದೇ ರೀತಿ ತುಂಬಾ ಲಕ್ಷಣವಾಗಿ ಕೂಡ ಕಾಣುತ್ತಾರೆ. ಮುಖದಲ್ಲಿ ಮಂದಹಾಸ ಹಾಗು ಉಲ್ಲಾಸ ಹೆಚ್ಚಾಗಿರುತ್ತದೆ. ಅದರಲ್ಲೂ ಕಾರ್ಯ ಕ್ರಮಕ್ಕೆ ಹೋದರೆ ಅವರ ಅಂದವು ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಅವರಿಗೆ ಕಣ್ಣು ದೃಷ್ಟಿ ಆಗುವ ಸಾಧ್ಯತೆ ಇರುತ್ತದೆ.

ಮನುಷ್ಯನ ಕಣ್ಣು ದೃಷ್ಟಿ ತುಂಬಾ ಕೆಟ್ಟ ದೃಷ್ಟಿ ಆಗಿದೆ ಎಂದೂ ಹೇಳಬಹುದು. ಮಹಿಳೆಯರು ಬೇರೆ ಕಡೆ ಹೊರಟಾಗ ಅಥವಾ ಮನೆಯಲ್ಲಿ ಇರುವಾಗ ಇಂತಹ ವಸ್ತುಗಳನ್ನು ಉಪಯೋಗಿಸಬಾರದು. ಮಹಿಳೆಯರಲ್ಲಿ ಹೆಚ್ಚಿನ ಆಕರ್ಷಣೆ ಶಕ್ತಿ ಇರುತ್ತದೆ. ಹಾಗಾಗಿ ಈ ರೀತಿ ವಸ್ತುಗಳನ್ನು ಹಾಕಬಾರದು ಎಂದೂ ಹೇಳಲಾಗುತ್ತದೆ.

ಹೆಣ್ಣು ಮಕ್ಕಳು ಕಪ್ಪು ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ನಕಾರಾತ್ಮಕ ಶಕ್ತಿಗಳು ಇವರಿಗೆ ಹೆಚ್ಚಾಗಿ ಕಾಡುತ್ತದೆ. ಶುಭ ಕಾರ್ಯ ಕ್ರಮಕ್ಕೆ ಹೊರಡುವಾಗ ಅಥವಾ ಮನೆಯಲ್ಲಿ ಇರುವಾಗ ಅಥವಾ ಮನೆಯಲ್ಲಿ ಇರುವಾಗ ಕಪ್ಪು ಬಣ್ಣದ ಬಟ್ಟೆಯನ್ನು ಹಾಕಬಾರದು.

ಇನ್ನು ಕೈಗಳಿಗೆ ಕಪ್ಪು ಬಳೆಗಳನ್ನು ಹಾಕಬಾರದು. ಕಪ್ಪು ಬಣ್ಣದಿಂದ ದೃಷ್ಟಿ ಆಗಬಾರದು ಎಂದೂ ಚಿಕ್ಕ ಮಕ್ಕಳಿಗೆ ಕಾಡಿಗೆ ಅನ್ನು ಹಚ್ಚುತ್ತಾರೆ. ಆಗಂತ ಎಲ್ಲಾ ಕಡೆ ಕಪ್ಪು ಬಣ್ಣ ಒಳ್ಳೆಯದಲ್ಲ. ಕಪ್ಪು ಎಳ್ಳು ಮತ್ತು ಕಪ್ಪು ಬಟ್ಟೆಯನ್ನು ಪ್ರತಿ ಶನಿವಾರ ದೇವಸ್ಥಾನದಲ್ಲಿ ಸುಡುತ್ತಾರೆ. ಇಂತಹ ದೋಷಗಳು ಅಂದರೆ ಕಣ್ಣು ದೃಷ್ಟಿ ಆಗಿರುವ ದೋಷಗಳು ದೂರವಾಗಲಿ ಎಂದು ಅರ್ಥ.ಇನ್ನು ಕಪ್ಪು ಬಣ್ಣದ ಬಳೆಗಳನ್ನು ಹಾಕುವುದರಿಂದ ಮನೆಯಲ್ಲಿ ಜಗಳ ಕಲಹ ಹೆಚ್ಚಾಗುತ್ತವೆ. ದಾಂಪತ್ಯದಲ್ಲಿ ವಿರಸಗಳು ಹೆಚ್ಚಾಗುತ್ತವೆ.

ಅದೇ ರೀತಿ ಯಾವುದೇ ಶುಭ ಸಮಾರಂಭಗಳಿಗೆ ಹೋದರು ಕೆಂಪು ಬಣ್ಣದ ವಜ್ರ ವೈಡುರ್ಯವನ್ನು ಹಾಕಿಕೊಳ್ಳಬಾರದು. ಇನ್ನು ಕೆಲವರು ಕಾಲು ಮತ್ತು ಕೈಗೆ ಕಪ್ಪು ಬಣ್ಣದ ದಾರವನ್ನು ಕಟ್ಟುತ್ತಾರೆ. ಇದು ಕೂಡ ತುಂಬಾ ಕೆಟ್ಟದ್ದು ಎಂದೂ ಹೇಳಲಾಗುತ್ತದೆ. ಕಪ್ಪು ಬಣ್ಣ ಎಲ್ಲರಿಗೂ ಸೂಕ್ತವಲ್ಲ. ಯಾವುದಾದರು ಶುಭ ಕಾರ್ಯ ಕ್ರಮಕ್ಕೆ ಕಪ್ಪು ಬಣ್ಣದ ಬಟ್ಟೆಯನ್ನು ಅಥವಾ ಕೆಂಪು ಬಣ್ಣದ ಚಪ್ಪಲಿಯನ್ನು ಹಾಕಿಕೊಂಡು ಮನೆಗೆ ಬಂದರೆ ಮನೆಯ ವಾತಾವರಣ ಬದಲಾವಣೆ ಆಗುತ್ತದೆ.

ಕೆಲವು ಹೆಣ್ಣು ಮಕ್ಕಳು ಚೆಂದವಾಗಿ ಕಾಣಬೇಕು ಎಂದೂ ಕೆಂಪು ಹಾಗು ಕಪ್ಪು ಬಟ್ಟೆಯನ್ನು ಹಾಕುತ್ತಾರೆ. ಅದರೆ ಈ ರೀತಿಯಾಗಿ ಮಾಡಬಾರದು. ನೀವು ಕೂಡ ಇಂತಹ ತಪ್ಪುಗಳನ್ನು ಮಾಡಬೇಡಿ. ಅದರಲ್ಲೂ ಮದುವೆ ಆದ ಹೆಣ್ಣು ಮಕ್ಕಳು ಮದುವೆ ಆಗಿ ಮೂರು ವರ್ಷದವರೆಗೂ ಕಪ್ಪು ಬಟ್ಟೆ ಮತ್ತು ಬಣ್ಣದ ಬಳೆಗಳನ್ನು ಹಾಕಬಾರದು. ಕೆಂಪು ಬಣ್ಣ ಮಂಗಳಗ್ರಹದ ಬಣ್ಣವಾಗಿದೆ. ಇದರಿಂದ ನಾವು ದಾಂಪತ್ಯದಲ್ಲಿ ವಿರಸವನ್ನು ಕಾಣಬೇಕಾಗುತ್ತದೆ. ಆದ್ದರಿಂದ ಕೆಂಪು ಬಣ್ಣದಿಂದ ಸ್ವಲ್ಪ ಮಹಿಳೆಯರು ದೂರವಿರಬಹುದು. ಆದಷ್ಟು ನಿಮ್ಮ ರಾಶಿಯ ಅನುಗುಣವಾಗಿ ಹಾಗು ಜಾತಕದ ಪ್ರಕಾರ ನಿಮಗೆ ಯಾವ ಬಣ್ಣ ಅದೃಷ್ಟ ತರುತ್ತದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ.

Leave A Reply

Your email address will not be published.