ನೀವು ನಿಮ್ಮ ಮನೆಯಲ್ಲಿ ಇಂತಹ ತಪ್ಪುಗಳನ್ನು ಮಾಡುತ್ತಾ ಇದ್ದರೆ ಎಚ್ಚರ ವಹಿಸಿ!
ನಮ್ಮ ಮನೆಗೆ ದರಿದ್ರ ಬರಲು ನಾವು ತಿಳಿಯದೆ ತಿಳಿದು ಮಾಡುವಂತಹ ಕೆಲವೊಂದಿಷ್ಟು ತಪ್ಪುಗಳಿಂದ ನಮ್ಮ ಮನೆಗೆ ದರಿದ್ರ ಬರುತ್ತದೆ. ಇಂತಹ ತಪ್ಪುಗಳನ್ನು ನಾವು ಸರಿ ಮಾಡಿಕೊಂಡರೆ ನಾವು ಆರ್ಥಿಕವಾಗಿ ಆರೋಗ್ಯವಾಗಿ ಎಲ್ಲಾ ಕೆಟ್ಟ ಶಕ್ತಿಯಿಂದ ಕೂಡಿ ಮುಕ್ತಿಯನ್ನು ಹೊಂದಬಹುದು. ಇನ್ನು ಯಾವೆಲ್ಲಾ ತಪ್ಪುಗಳನ್ನು ನಾವು ಸರಿ ಮಾಡಿಕೊಳ್ಳಬೇಕು ಅಂತ ನೋಡುವುದಾದರೆ
-ಕುಲದೇವರಿಗೆ ವರ್ಷಕೊಮ್ಮೆ ಕಾಣಿಕೆ ಹಾಕದೆ ಇದ್ದರೆ ಖಂಡಿತವಾಗಿ ಮನೆಗೆ ಏಳಿಗೆ ಅನ್ನೋದು ಇರುವುದಿಲ್ಲ.
ಸಾಧ್ಯವಾದಷ್ಟು ದೇವರಿಗೆ ಮನೆಯ ಹೂವುಗಳನ್ನು ಅರ್ಪಿಸಲು ಪ್ರಯತ್ನ ಮಾಡಿ. ಹೊರಗಿನಿಂದ ತಂದ ಹೂವಿಗೆ ನೀರನ್ನು ಸಿಂಪಡಿಸಬೇಕು.ಶುದ್ಧ ಮಾಡಿದ ನಂತರ ಉಪಯೋಗಿಸಬೇಕು.
ನಿಂತ ಗಡಿಯಾರ ಅಶುಭ ಲಕ್ಷಣ. ಇದನ್ನು ಕೂಡಲೇ ಸರಿಪಡಿಸುವುದು ಉತ್ತಮ.
-ಮುಖ್ಯದ್ವಾರದ ಮುಂದೆ ಇರುವ ಮೇಟಿಲುಗಳು ಬೆಸ ಸಂಖ್ಯೆಯಲ್ಲಿ ಇರಬೇಕು. ಇದು ರಸ್ತೆಗಿಂತ ಸ್ವಲ್ಪ ಎತ್ತರವಾಗಿ ಇರಬೇಕು.
ಮನೆಯಲ್ಲಿ ಹಿರಿಯರಿಗೆ ಮತ್ತು ತಂದೆ ತಾಯಿಗಳಿಗೆ ಕಾಲು ಮುಟ್ಟಿ ನಮಸ್ಕಾರ ಮಾಡುವ ಪದ್ಧತಿಯನ್ನು ಬೆಳೆಸಿ. ಹೆತ್ತವರಿಗೆ ಇದು ಅವಶ್ಯಕತೆ ಇಲ್ಲದೆ ಇರಬಹುದು. ಅದರ್ ಹೆತ್ತವರ ಆಶೀರ್ವಾದವು ಮಕ್ಕಳನ್ನು ನಿರಂತರವಾಗಿ ರಕ್ಷಿಸಲು ಇದು ಅತ್ಯಂತ ಸಹಕಾರಿ.
-ದೇವರ ಕೋಣೆಯಲ್ಲಿ ಒಂಟಿ ದೀಪವನ್ನು ಉರಿಸಬಾರದು. ಸಣ್ಣ ದೀಪವಾದರೂ ಅಡ್ಡಿ ಇಲ್ಲಾ ಎರಡು ದೀಪಗಳನ್ನು ಇಡೀ.
ಸಂಜೆ ಗುಡಿಸಿದ ಕಸವನ್ನು ಹೊರಗೆ ಹಾಕಬಾರದು.ಯಾವುದೇ ಹೊಸ ಬಟ್ಟೆ ಒಡವೆಗಳನ್ನು ತಂದರೆ ಮೊದಲು ದೇವರ ಸನ್ನಿದಾನದಲ್ಲಿ ಇಟ್ಟು ನಂತರ ತೆಗೆದುಕೊಳ್ಳಬೇಕು.
-ಕುಲ ದೇವರಿಗೆ ಇಷ್ಟ ದೇವರಿಗೆ ಮನೆಯ ಎಲ್ಲಾ ಶುಭ ಕಾರ್ಯಗಳಲ್ಲಿ ಮನೆಯಲ್ಲಿ ಕಾಣಿಕೆಯನ್ನು ತೆಗೆದು ಇಡುವುದನ್ನು ರೂಡಿ ಮಾಡಿ.
ಜೇಡರ ಬಲೆ ಕಟ್ಟಿದರೆ ತಕ್ಷಣ ನಿವಾರಣೆ ಮಾಡಿ. ಇದು ಅಶುಭ ತರುವ ಸಂಕೇತ. ಮನೆಯನ್ನು ಎಷ್ಟು ಶುಚಿಯಾಗಿ ಇಟ್ಟುಕೊಳ್ಳುತ್ತಿವೇಯೋ ಅಷ್ಟು ದೈವಿಕ ಕಳೆ ವೃದ್ಧಿಸುವುದು.
ಮನೆಯ ಯಾವುದೇ ಜಾಗದಲ್ಲಿ ಪಾರಿವಾಳಗಳು ಮನೆಯನ್ನು ಮಾಡಿದರೆ ಅದು ಕಷ್ಟಗಳು ಎದುರಾಗುವ ಸಂಕೇತ. ಅವುಗಳ ಪ್ರಾಣ ಹಾನಿಯಾಗದಂತೆ ಅಲ್ಲಿಂದ ಓಡಿಸಬೇಕು.
ಜೇನಿನ ಗೂಡು ಮನೆಯಲ್ಲಿ ಕಟ್ಟಬಾರದು. ಸಾಧ್ಯವಾದಷ್ಟು ಯಾವುದೇ ಜೀವಿಗಳಿಗೆ ಮನೆಯ ಒಳಗೆ ಹಾನಿ ಮಾಡಬೇಡಿ.
ಬಾವಲಿಗಳು ಮನೆಯ ಸರಹದ್ದಿನಲ್ಲಿ ವಾಸ ಮಾಡದಂತೆ ಎಚ್ಚರ ವಹಿಸಿ.
ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಬಾರದು.ದಕ್ಷಿಣ ದಿಕ್ಕಿಗೆ ಮುಖ ನಿರಂತರ ಕುಳಿತುಕೊಳ್ಳುವ ವ್ಯವಸ್ಥೆ ಇರಬಾರದು.
ಬರೀ ನೆಲದ ಮೇಲೆ ಮಲಗುವುದಾಗಲಿ ಹರಿದ ಬಟ್ಟೆಗಳನ್ನು ಧರಿಸುವುದನ್ನು ಮಾಡಬಾರದು.
ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ದೇವರಿಗೆ ದೀಪ ಹಚ್ಚುವ ಅಭ್ಯಾಸವನ್ನು ರೂಡಿ ಮಾಡಿ.
ಊಟ ಮಾಡುವಾಗ ಅನವಶ್ಯಕವಾಗಿ ಯೋಚನೆ ಮಾಡಿ ಕಣ್ಣೀರು ಹಾಕುತ್ತ ಊಟ ಮಾಡಬಾರದು