ಅಕಾಲ ಮೃತ್ಯುವಿನಿಂದ ಪರಾಗಲು ಯಮ ದೀಪವನ್ನು ಹಚ್ಚುವುದು ಹೇಗೆ? ಯಮ ದೀಪ ಹಚ್ಚುವ ವಿಧಾನ
ಯಮ ದೀಪರಾಧನೆ ಮಾಡುವುದರಿಂದ ಯಮರಾಜ ಆಶೀರ್ವಾದ ಮಾಡುತ್ತಾರೆ ಅಂತೆ. ಯಮ ದೀಪರಾಧನೆ ಮಾಡುವುದರಿಂದ ಯಾವುದೇ ಕಾರಣಕ್ಕೂ ಅಪಮೃತ್ಯು ಕಾಡುವುದಿಲ್ಲ.ನವೆಂಬರ್ 10ನೆ ತಾರೀಕು ಶುಕ್ರವಾರ ಈ ದೀಪರಾಧನೆಯನ್ನು ಮಾಡಬೇಕು. ಇದನ್ನು ಸಂಜೆ ಸಮಯದಲ್ಲಿ ಮಾತ್ರ ಮಾಡಬೇಕಾಗುತ್ತದೆ. ಹೊಸ್ತಿಲಿನ ಹೊರ ಭಾಗದಲ್ಲಿ ದಕ್ಷಣ ದಿಕ್ಕಿನ ಕಡೆಗೆ ಈ ದೀಪವನ್ನು ಇಟ್ಟು ಈ ದೀಪರಾಧನೆ ಮಾಡಬೇಕಾಗುತ್ತದೆ. ಮತ್ತೆ ಮನೆ ಒಳಗೆ ಹಚ್ಚುವುದಕ್ಕೆ ಬರುವುದಿಲ್ಲ.
ಇದನ್ನು ಹೋಸ್ತಿಲ ಹೊರಗೆ ನೆಲ ಅಥವಾ ಒಂದು ಮಣೆ ಇಡಬೇಕು.ನಂತರ ಅದರ ಮೇಲೆ ಅರಿಶಿನ ಹಚ್ಚಬೇಕು. ನಂತರ ಕುಬೇರ ರಂಗೋಲಿ ಹಾಕಬೇಕು. ರಂಗೋಲಿ ಮೇಲೆ ಅರಿಶಿನ ಕುಂಕುಮದಿಂದ ಅಲಂಕಾರ ಮಾಡಿ ಹಾಗು ಹೂವಿನಿಂದ ಅಲಂಕಾರ ಮಾಡಿ.
ನಂತರ ಎರಡು ವೀಳ್ಯದೆಲೆ ಇಟ್ಟು ಅದರ ಮೇಲೆ ಉಪ್ಪನ್ನು ಹಾಕಬೇಕು. ದೀಪಕ್ಕೆ ನಾಲ್ಕು ಬೊಟ್ಟು ಬರುವತರ ಅರಿಶಿನ ಕುಂಕುಮವನ್ನು ಹಚ್ಚಬೇಕು. ನಂತರ ಎಳ್ಳು ಎಣ್ಣೆ ಹಾಕಿ ಹಾಗು ಎರಡೆರಡು ಬತ್ತಿಯನ್ನು 3 ಬತ್ತಿಯನ್ನಾಗಿ ಮಾಡಿ ಹಾಕಬೇಕು. ಒಂದು ಬತ್ತಿ ಆಯಸ್ಸಿಗೋಸ್ಕರ, ಮತ್ತೊಂದು ಬತ್ತಿ ಅರೋಗ್ಯಕ್ಕೋಸ್ಕರ ಹಾಗು ಇನ್ನೊಂದು ಬತ್ತಿ ಐಶ್ವರ್ಯಗೋಸ್ಕರ. ಈ ರೀತಿಯಾಗಿ ಯಮರಾಜನಿಗೆ ನೆನಪು ಮಾಡಿಕೊಂಡು ದೀಪರಾಧನೆ ಮಾಡಬೇಕಾಗುತ್ತದೆ. ಇದನ್ನು ಹೋಸ್ತಿಲ ಹೊರಗೆ ನೆಲ ಅಥವಾ ಒಂದು ಮಣೆ ಇಡಬೇಕು.
ನಂತರ ದೀಪವನ್ನು ಇಟ್ಟು ಹೂವಿನಿಂದ ಅಲಂಕಾರ ಮಾಡಿ ದೀಪವನ್ನು ಹಚ್ಚಬೇಕು. ಈ ಒಂದು ದೀಪವನ್ನು ಅರೋಗ್ಯ ಸಮಸ್ಸೆ ಇರುವವರು ಯಾವುದೇ ಕಾರಣಕ್ಕೂ ಈ ದೀಪರಾಧನೆ ಮಾಡಬೇಡಿ. ಪುಟ್ಟ ಪುಟ್ಟ ಮಕ್ಕಳನ್ನು ದೀಪದ ಹತ್ತಿರ ಬಿಡಬೇಡಿ. ದೀಪ ಶಾಂತಿ ಆಗುವ ತನಕ ಮಕ್ಕಳನ್ನು ದೂರವಿಡಿ. ಇನ್ನು ಹಚ್ಚುವಾಗ ಈ ಒಂದು ಮಂತ್ರವನ್ನು ಹೇಳಬೇಕು.
ಓಂ ಸೂರ್ಯ ಪುತ್ರಯ ವಿದ್ಮಹೇ
ಮಹಾಕಾಲಾಯ ದಿಮಹೇ
ತನ್ನೋ ಯಮ ಪ್ರಚೋದಯಾತ್ !!
ಇನ್ನು ಅನಾರೋಗ್ಯಮಾರನೇ ದಿನ ಈ ದೀಪ ಮತ್ತು ಉಪ್ಪು ಎಲ್ಲವನ್ನು ಯಾರು ತುಳಿಯದೆ ಇರುವ ಜಾಗದಲ್ಲಿ ಹಾಕಬಹುದು.
https://www.youtube.com/watch?v=VpstPuFCoTM&pp=wgIGCgQQAhgB