ಎದೆಯಲ್ಲಿ ಕಟ್ಟಿದ ಕಫ ಸಮಸ್ಸೆಗೆ ಮನೆಮದ್ದು!

0 18,162

ಕೆಲವೊಮ್ಮೆ ಶೀತಾ ಹೆಚ್ಚಾದಾಗ ಮೂಗು ಮತ್ತು ಎದೆಯಲ್ಲಿ ಕಫ ಬ್ಲಾಕ್​ ಆಗುತ್ತದೆ. ಇದರಿಂದ ವ್ಯಕ್ತಿಯ ಸಂಪೂರ್ಣ ದಿನಚರಿಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸಾಕಷ್ಟು ಕಿರಿಕಿರಿ ಉಂಟಾಗಲಿದೆ. ಇದನ್ನು ನಿವಾರಿಸಲು ಕೆಲವು ಅಡುಗೆ ಮನೆಯಲ್ಲಿರುವ ಸಾಮಾಗ್ರಿಗಳು ತುಂಬಾ ಪ್ರಯೋಜನಕಾರಿಯಾಗಿವೆ.

ಸ್ಟೀಮ್-ಮೂಗು ಕಟ್ಟಿರುವ ಸಮಸ್ಯೆಗೆ ಸ್ಟೀಮ್ ಮೂಲಕ ಚಿಕಿತ್ಸೆ ನೀಡಬಹುದು. ಇದಕ್ಕಾಗಿ ನೀರನ್ನು ಬಿಸಿ ಮಾಡಿ, ಅದರಿಂದ ಉಗಿ ತೆಗೆದುಕೊಳ್ಳಬೇಕು. ಬಿಸಿ ನೀರಿನ ಹಬೆಯಲ್ಲಿ ಉಸಿರಾಡುವ ಮೂಲಕ, ಬಿಸಿ ಗಾಳಿಯು ಮೂಗು ಮತ್ತು ಗಂಟಲಿನ ಮೂಲಕ ಶ್ವಾಸಕೋಶವನ್ನು ತಲುಪುತ್ತದೆ. ಇದು ಶೀತ ಮತ್ತು ಜ್ವರದ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಉಗಿಯನ್ನು ಉಸಿರಾಡುವುದರಿಂದ ಬ್ಲಾಕ್​ ಆಗಿರುವ ಮೂಗು ತೆರೆಯುತ್ತದೆ. ಇದನ್ನು ದಿನಕ್ಕೆ ಎರಡು ಬಾರಿ ಮಾಡುವುದು ಉತ್ತಮ

ಶುಂಠಿ-ಉಸಿರಾಟದ ಸಮಸ್ಯೆಯ ಚಿಕಿತ್ಸೆಯಲ್ಲಿ ಶುಂಠಿಯನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಮೂಗು ಕಟ್ಟಿಕೊಂಡರೂ ಶುಂಠಿಯನ್ನು ಸೇವಿಸಬಹುದು. ಶುಂಠಿಯು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಕಟ್ಟಿದ ಮೂಗು ಮತ್ತು ಎದೆಯಲ್ಲಿನ ಕಟ್ಟಿದ ಕಫದ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ. ಇದಕ್ಕಾಗಿ ಉಪ್ಪು ಬೆರೆಸಿದ ಶುಂಠಿ ತುಂಡುಗಳನ್ನು ಸೇವಿಸಿ ಅಥವಾ ಶುಂಠಿ ಚಹಾವನ್ನು ಸಹ ಕುಡಿಯಬಹುದು.

3.ಬೆಳ್ಳುಳ್ಳಿ-ಬೆಳ್ಳುಳ್ಳಿಯು ಮೂಗು ಮತ್ತು ಎದೆಯಲ್ಲಿ ಕಟ್ಟಿಕೊಂಡಿರುವ ಕಫದ ಸಮಸ್ಯೆಯನ್ನೂ ಹೋಗಲಾಡಿಸುತ್ತದೆ. ಇದಕ್ಕಾಗಿ ಬೆಳ್ಳುಳ್ಳಿಯ 3-4 ಮೊಗ್ಗುಗಳನ್ನು ತೆಗೆದುಕೊಂಡು, ಅದನ್ನು ನೀರಿನಲ್ಲಿ ಕುದಿಸಬೇಕು. ಇದಕ್ಕೆ ಅರಿಶಿನ ಪುಡಿ, ಕರಿಮೆಣಸಿನ ಪುಡಿ ಸೇರಿಸಿ ಕುಡಿಯಬೇಕು. ಇದನ್ನು ದಿನಕ್ಕೆ 2 ಬಾರಿ ಮಾಡಬಹುದು. ಇದರಿಂದ ಸಮಸ್ಯೆಗೆ ಸಾಕಷ್ಟು ಪರಿಹಾರ ಸಿಗುತ್ತದೆ.

ಉಪ್ಪು ಕೂಡ ಪರಿಣಾಮಕಾರಿ–ಮೂಗು ಕಟ್ಟಿಕೊಂಡಿರುವ ಸಮಸ್ಯೆಯನ್ನು ನಿವಾರಿಸಲು ಉಪ್ಪನ್ನು ಸಹ ಬಳಸಬಹುದು. ಇದಕ್ಕಾಗಿ, 2 ಕಪ್ ನೀರನ್ನು ಬಿಸಿ ಮಾಡಿ, ಅದಕ್ಕೆ ಅರ್ಧ ಚಮಚ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈಗ ಡ್ರಾಪರ್ ಸಹಾಯದಿಂದ ಮೂಗಿನಲ್ಲಿ ಕೆಲವು ಹನಿಗಳನ್ನು ಹಾಕಬೇಕು. ಈ ಪ್ರಕ್ರಿಯೆಯನ್ನು ದಿನಕ್ಕೆ 2-3 ಬಾರಿ ಪುನರಾವರ್ತಿಸಬಹುದು.

ಮೂಗು ಕಟ್ಟುವಿಕೆ ಸಮಸ್ಯೆ ಒಂದೆಡರು ದಿನಗಳಿಂದ ಇದ್ದರೆ ಈ ಮನೆಮದ್ದುಗಳನ್ನು ಪ್ರಯತ್ನಿಸಬಹುದು. ದೀರ್ಘಕಾಲದಿಂದ ಈ ರೀತಿಯ ಸಮಸ್ಯೆಗಳನ್ನು ಎದರಿಸುತ್ತಿದ್ದರೆ ವೈದ್ಯರನ್ನು ಭೇಟಿ ಮಾಡುವುದು ಅಗತ್ಯ. ಏಕೆಂದರೆ ಅನೇಕ ಬಾರಿ ಮೂಗು ಕಟ್ಟುವಿಕೆಯ ಸಮಸ್ಯೆ ಆರೋಗ್ಯ ಸಮಸ್ಯೆಯಿಂದಲೂ ಉಂಟಾಗಬಹುದು.

Leave A Reply

Your email address will not be published.