ಹುಣ್ಣಿಮೆ ದಿನ ನೀರನ್ನು ಇಲ್ಲಿ ಬಚ್ಚಿಡಿ! ಸಾಕು ಸಾಕು ಅಂದ್ರೂ ಹಣ ಬರುತ್ತೆ!

0 15,883

ಶ್ರೀಮಂತರಾಗಲು ಮತ್ತು ಸಾಲದಿಂದ ಮುಕ್ತಿ ಹೊಂದುವುದಕ್ಕೆ ಹುಣ್ಣಿಮೆ ದಿನ ಮಾಡಿಕೊಳ್ಳಿ ಈ ಹತ್ತರಲ್ಲಿ ಯಾವುದಾದರು ರೆಮಿಡಿ. ಕಷ್ಟ ಪಟ್ಟು ಕೆಲಸ ಮಾಡುವುದನ್ನು ಬಿಡಬಾರದು. ಪ್ರತಿ ತಿಂಗಳು ಬರುವ ಹುಣ್ಣಿಮೇ ದಿನ ತುಂಬಾ ವಿಶೇಷವಾಗಿ ಇರುತ್ತದೆ. ಹುಣ್ಣಿಮೆ ದಿನ ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾದ ದಿನ. ಅಂದು ಮಾತೇ ಮಹಾ ಲಕ್ಷ್ಮಿ ಕೃಪೆ ಬಹು ಬೇಗ ದೊರೆಯುತ್ತದೆ. ಹುಣ್ಣಿಮೆ ದಿನ ಚಂದ್ರಕಾರನು ಪೂರ್ಣಕಾರದಲ್ಲಿ ಇರುತ್ತನೇ. ಹುಣ್ಣಿಮೆ ದಿನ ಶಕ್ತಿ ಭಕ್ತಿ ಮತ್ತು ವಿಶ್ವಾಸದಿಂದ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿ ಕೃಪೆ ಸದಾ ನಿಮ್ಮ ಮೇಲೆ ಇರುತ್ತದೆ.

ಹುಣ್ಣಿಮೆ ದಿನ ಸಂಜೆ ಗೋಧಿ ಹಿಟ್ಟಿಗೆ ಹಾಲನ್ನು ಮಿಕ್ಸ್ ಮಾಡಿ 6 ಚಪಾತಿ ಮಾಡಬೇಕು. ಆ ಚಪಾತಿಯನ್ನು ಚಂದ್ರನ ಬೆಳಕಿನಲ್ಲಿ ಬಿಳಿ ಹಸುವಿಗೆ ತಿನ್ನಿಸಬೇಕು. ಈ ರೀತಿ ಮಾಡುವುದರಿಂದ ಕೆಟ್ಟ ದುರದೃಷ್ಟವು ಅದೃಷ್ಟದಲ್ಲಿ ಬದಲಾಗುತ್ತದೆ. ಈ ಉಪಾಯವನ್ನು ಹುಣ್ಣಿಮೆಯಿಂದ 5 ದಿನ ಮಾಡಬೇಕು. ಇದರಿಂದ ಭಿಕ್ಷುಕ ಕೂಡ ಕುಬೇರ ಆಗುತ್ತಾನೆ.

ಹುಣ್ಣಿಮೆ ದಿನ ಕಪ್ಪು ಅರಿಶಿನವನ್ನು ಸಿಂಧೂರದಲ್ಲಿ ನೆನಸಿ ನಂತರ ಶ್ರೀಗಂಧ ದೂಪಾದಿಂದ ಪೂಜಿಸಿ ಎರಡು ಬೆಳ್ಳಿಯ ನಾಣ್ಯಗಳನ್ನು ಜೊತೆಗೆ ಕೆಂಪು ಬಟ್ಟೆಯಲ್ಲಿ ಸುತ್ತಿ ಹಣ ಇಡುವ ಸ್ಥಳದಲ್ಲಿ ಇಡುವುದರಿಂದ ಆರ್ಥಿಕ ಸಮಸ್ಸೆಗಳು ಶಾಶ್ವತವಾಗಿ ಪರಿಹಾರವಾಗುತ್ತವೆ. ಇದನ್ನು ನೀವು ನಿಮ್ಮ ವ್ಯಾಪಾರ ಸ್ಥಳದಲ್ಲಿ ಇಟ್ಟರೆ ನಿಮ್ಮ ವ್ಯಾಪಾರ ಹೆಚ್ಚಾಗುತ್ತದೆ.

ಹುಣ್ಣಿಮೆ ದಿನ ನೀವು ಪೂಜೆ ಮಾಡುವ ಪೂಜಾ ಕೋಣೆಯಲ್ಲಿ ಶ್ರೀ ಮಹಾಲಕ್ಷ್ಮಿ ಯಂತ್ರವನ್ನು ಸ್ಥಾಪನೆ ಮಾಡಿ ಹಸುವಿನ ತುಪ್ಪದಿಂದ ದೀಪ ಬೆಳಗಬೇಕು. ನಂತರ ಈ ಯಂತ್ರದ ಮುಂದೆ ಕುಳಿತುಕೊಂಡು ಓಂ ಮಹಾಲಕ್ಷ್ಮಿಯೇ ನಮಃ ಎಂದು 11 ಬಾರಿ ಜಪ ಮಾಡಬೇಕು. ಈ ಮಂತ್ರದಿಂದ ಲಕ್ಷ್ಮಿ ದೇವಿ ಪ್ರಸನ್ನಳಾಗಿ ನಿಮಗೆ ಒಲಿಯುತ್ತಾಳೆ.

ಹುಣ್ಣಿಮೆ ದಿನ ಕಪ್ಪು ಎಳ್ಳು ತೆಗೆದುಕೊಂಡು ಮನೆಯ ಎಲ್ಲಾ ಸದಸ್ಯರ ಮೇಲೆ ಮೇಲಿಂದ 7 ಬಾರಿ ನೀವಾಳಿಸಬೇಕು. ಅದನ್ನು ಪಶ್ಚಿಮ ದಿಕ್ಕಿಗೆ ಎಸೆಯಬೇಕು. ಈ ಉಪಾಯ ಮಾಡಿದ ಮಾರನೇ ದಿನದಲ್ಲಿ ನಿಮ್ಮ ಮನೆಯಲ್ಲಿ ಹಣದ ಅರಿವು ಹೆಚ್ಚಾಗುತ್ತ ಹೋಗುತ್ತದೆ.

ಹುಣ್ಣಿಮೆ ದಿನ ನೀವು ಸ್ನಾನ ಮಾಡಿದ ನಂತರ ಅರಳಿ ಮರಕ್ಕೆ ಸಕ್ಕರೆ ಬೆರೆಸಿದ ಸಿಹಿ ನೀರನ್ನು ಹಾಕಿ ಬಿಳಿ ಬಣ್ಣದ ಸಿಹಿ ತಿಂಡಿಯನ್ನು ನೈವೇದ್ಯವನ್ನು ಇಟ್ಟು ಪೂಜೆಯನ್ನು ಮಾಡಿ ಲಕ್ಷ್ಮಿ ದೇವಿಯನ್ನು ಮನೆಗೆ ಬರುವಂತೆ ಪ್ರಾರ್ಥನೆ ಮಾಡಿಕೊಳ್ಳಿ. ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿ ಕೃಪೆ ಸದಾ ಕಾಲ ಇರುತ್ತದೆ.

ಸಾಲದಿಂದ ಮುಕ್ತರು ಆಗುವುದಕ್ಕೆ ಮತ್ತು ಹಣದ ಸಮಸ್ಸೆಯಿಂದ ಹೊರ ಬರುವುದಕ್ಕೆ ಈ ಉಪಾಯವನ್ನು ಮರೆಯದೆ ಮಾಡಬೇಕು. ಹುಣ್ಣಿಮೆ ದಿನ ಚಂದ್ರೋದಯ ಸಮಯದಲ್ಲಿ ಹಸಿ ಹಾಲಿಗೆ ಸಕ್ಕರೆ ಅಕ್ಕಿ ಬಿಳಿ ಎಳ್ಳು ಮಿಶ್ರಣ ಮಾಡಿ ಓಂ ಐಂ ಕ್ಲಿಂ ಸೋಮಯೆಯ್ ನಮಃ ಮಂತ್ರ ಹೇಳುತ್ತ ಚಂದ್ರನಿಗೆ ಅರ್ಘ್ಯ ನೀಡಬೇಕು.ಇದೆ ರೀತಿ 5 ದಿನ ಮಾಡಬೇಕು ಈ ರೀತಿ ಮಾಡಿದರೆ ಹಣದ ಸಮಸ್ಸೆ ಇರುವುದಿಲ್ಲ.

ಹುಣ್ಣಿಮೆ ದಿನ ಲಕ್ಷ್ಮಿ ದೇವಿ ಫೋಟೋ ಮೇಲೆ 11 ಕವಡೆ ಇಟ್ಟು ಅದಕ್ಕೆ ಅರಿಶಿನ ಕುಂಕುಮ ಹಚ್ಚಿ ಪೂಜಿಸಿ. ಮಾರನೇ ದಿನ ಇವುಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ದುಡ್ಡು ಇಡುವ ಜಾಗದಲ್ಲಿ ಇಡಬೇಕು. ಈ ರೀತಿ ಮಾಡಿದರೆ ಹಣಕ್ಕೆ ಕೊರತೆ ಇರುವುದಿಲ್ಲ.

ಹುಣ್ಣಿಮೆ ದಿನ ಕೊಳಲಿನಲ್ಲಿ 3 ನವಿಲುಗರಿಗಳನ್ನು ಕಟ್ಟಿ ಅದನ್ನು ನೀವು ಪೂಜಾ ಮಂದಿರದಲ್ಲಿ ಶ್ರೀ ಕೃಷ್ಣನ ಹತ್ತಿರ ಇಟ್ಟು ಪೂಜಿಸಬೇಕು. ಮಾರನೇ ದಿನ ಈ ಕೊಳಲು ಮತ್ತು ನವಿಲು ಗರಿಯನ್ನು ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ಎಲ್ಲಾರು ಕೂಡ ಬುದ್ದಿವಂತರು ಆಗುತ್ತಾರೆ.

ಹುಣ್ಣಿಮೇ ದಿನ ನೀವು ಒಂದು ಗಾಜಿನ ಗ್ಲಾಸ್ ನಲ್ಲಿ ನೀರನ್ನು ತುಂಬಿ ಮನೆಯ ಮೇಲೆ ಇಡಬೇಕು. ಅದರ ಮೇಲೆ ಚಂದ್ರನ ಬೆಳಕು ಬೀಳುವ ಹಾಗೆ ಇಡಬೇಕು. ಮಾರನೇ ದಿನ ಆ ನೀರಲ್ಲಿ ಗಂಗಾಜಲವನ್ನು ಮಿಕ್ಸ್ ಮಾಡಿ ಶಿವ ಲಿಂಗಕ್ಕೆ ಅರ್ಪಣೆ ಮಾಡಬೇಕು. ಉಳಿದ ನೀರನ್ನು ಪ್ರಸಾದ ರೀತಿ ಕುಡಿಯಬೇಕು. ಈ ರೀತಿ ಮಾಡಿದರೆ ಮನೆಯವರ ಮನಸ್ಸಿನ ನಕಾರಾತ್ಮಕತೆ ದೂರವಾಗುತ್ತದೆ ಮತ್ತು ಅದೃಷ್ಟವು ಜಾಗೃತವಾಗುತ್ತದೆ.

-ಒಂದು ಸ್ಟೀಲ್ ಲೋಟದಲ್ಲಿ ಹಸಿ ಹಾಲು ಜೇನುತುಪ್ಪ ಸಕ್ಕರೆ ಅಕ್ಕಿ ಕಾಳುಗಳನ್ನು ಮಿಕ್ಸ್ ಮಾಡಿ ಉದಯ ಆಗುವ ಚಂದ್ರನಿಗೆ ಅರ್ಘ್ಯವನ್ನು ಕೊಡಬೇಕು. ಈ ರಿತು ಮಾಡಿದರೆ ಇದು ನಿಮ್ಮ ಅದೃಷ್ಟವನ್ನು ಬೆಳಗಿಸುತ್ತದೆ.

Leave A Reply

Your email address will not be published.