ಮೊಣಕಾಲು ಮತ್ತು ಮೊಣಕೈ ಕಪ್ಪಾಗುತ್ತಿದ್ದರೆ ಇಲ್ಲಿದೆ ಪರಿಹಾರ!
ಮೊಣಕಾಲು ಮತ್ತು ಮೊಣಕೈ ಕಪ್ಪಾಗಿದ್ದರೆ ಮನೆಯಲ್ಲಿ ಇರುವಂತಹ ವಸ್ತುಗಳನ್ನು ಉಪಯೋಗ ಮಾಡಿಕೊಂಡು ಕಪ್ಪು ಕಲೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಮೊದಲನೇಯದಾಗಿ ಮನೆಯಲ್ಲಿ ಇರುವ ನಿಂಬೆ ಹಣ್ಣು. ನಿಂಬೆ ಹಣ್ಣಿಗೆ ಚರ್ಮಕ್ಕೆ ಕಾಂತಿಯನ್ನು ನೀಡುವ ಗುಣವನ್ನು ಹೊಂದಿದೆ. ಸ್ವಲ್ಪ ನಿಂಬೆ ರಸವನ್ನು ತೆಗೆದುಕೊಂಡು ಕಪ್ಪಾಗಿರುವ ಜಾಗದಲ್ಲಿ ಅಂದರೆ ಮೊಣಕೈ, ಮೊಣಕಾಲಿಗೆ ಹಚ್ಚಿ ಮಾಸಜ್ ಮಾಡಬೇಕು. ನಂತರ 15 ರಿಂದ 20 ನಿಮಿಷಗಳ ಕಾಲ ನಂತರ ಬಿಟ್ಟು ನೀರಿನಿಂದ ತೊಳೆಯಬೇಕು. ಈ ರೀತಿ ಮಾಡುವುದರಿಂದ ಸಹಜವಾದ ಬಣ್ಣ ಬರುತ್ತದೆ.
ಇನ್ನು ಅಲೋವೆರಾ ಜೆಲ್ ಕಪ್ಪಾಗಿರುವ ಜಾಗಕ್ಕೆ ಸಹಜವಾಗಿ ತರಲು ಅಲೋವೆರಾ ಜೆಲ್ ಬಹಳ ಉಪಯುಕ್ತವಾಗಿದೆ. ಸ್ವಲ್ಪ ಅಲೋವೆರಾ ಜೆಲ್ ಅನ್ನು ಕಪ್ಪಾಗಿರುವ ಜಾಗಕ್ಕೆ ಹಚ್ಚಿ 20 ನಿಮಿಷಗಳ ಕಾಲ ಬಿಟ್ಟು ನಂತರ ನೀರಿನಿಂದ ತೊಳೆಯಬೇಕು. ಈ ರೀತಿ ಮಾಡಿದರೆ ಒಳ್ಳೆಯ ಫಲಿತಾಂಶ ಕಂಡು ಬರುತ್ತದೆ.
ಇನ್ನು ಸೌತೆಕಾಯಿ, ನಿಂಬೆ ರಸ, ಅರಿಶಿನವನ್ನು ಮಿಕ್ಸಿ ಯಲ್ಲಿ ಹಾಕಿ ಪೇಸ್ಟ್ ರೀತಿ ಮಾಡಿ ಮೊಣಕಾಲು ಮತ್ತು ಮೊಣಕೈಗೆ ಹಚ್ಚಬೇಕು.ಈ ರೀತಿ ಮಾಡಿದರೆ ಒಳ್ಳೆಯ ಫಲಿತಾಂಶ ಕಂಡು ಬರುತ್ತದೆ.
ಆಲೂಗಡ್ಡೆಯನ್ನು ಕುದಿಸಿ ತುಂಡು ಮಾಡಿ ರುಬ್ಬಿಕೊಂಡು ಪೇಸ್ಟ್ ಮಾಡಿ ಕಪ್ಪಾಗಿರುವ ಜಾಗಕ್ಕೆ ಇದನ್ನು ಹಚ್ಚುವುದರಿಂದ ಸಹಜವಾದ ಹೊಳಪು ಬರುವುದರಿಂದ ಸಹಾಯವಾಗುತ್ತದೆ.
ಇನ್ನು ಬೇಕಿಂಗ್ ಸೋಡಾ ಕಪ್ಪಾಗಿರುವ ಕೈ ಕಾಲುಗಳನ್ನು ಬೆಳ್ಳಗಾಗಿಸಲು ಸಹಾಯ ಆಗುತ್ತದೆ. ಸ್ವಲ್ಪ ಅಡುಗೆ ಸೋಡಾ ತೆಗೆದುಕೊಂಡು ಸ್ವಲ್ಪ ನೀರು ಹಾಕಿ ಕಪ್ಪಾಗಿರುವ ಜಾಗಕ್ಕೆ ಹಚ್ಚುವುದರಿಂದ ಕಪ್ಪಾಗಿರುವ ಭಾಗ ಬೆಳ್ಳಗೆ ಆಗಲು ಸಹಾಯವಾಗುತ್ತದೆ.
ಇನ್ನು ಹಾಲು ಮತ್ತು ಹಾಲಿನ ಉತ್ಪನ್ನಗಳು ಕೂಡ ಚರ್ಮವನ್ನು ರಕ್ಷಿಸುವ ಗುಣವನ್ನು ಹೊಂದಿದೆ. ಸ್ವಲ್ಪ ಹಾಲು ಮತ್ತು ಮೊಸರು ಬೆರೆಸಿ ಕಪ್ಪಾಗಿರುವ ಚರ್ಮದ ಮೇಲೆ ಹಚ್ಚುವುದರಿಂದ ಒಣಚರ್ಮ ಮೃದುವಾಗುತ್ತದೆ.