ದೇವರಿಗೆ ಈ ಹೂವುಗಳನ್ನು ಯಾವುದೇ ಕಾರಣಕ್ಕೂ ಇಡಬೇಡಿ!

0 2,377

ದೇವರನ್ನು ಪ್ರತಿದಿನ ಆರಾಧನೆ ಮತ್ತು ಪೂಜೆಯನ್ನು, ನೈವೇದ್ಯವನ್ನು ಪ್ರತಿಯೊಬ್ಬರೂ ಮಾಡುತ್ತಾರೆ. ಪೂಜೆಯನ್ನು ಮಾಡುವಾಗ ಹೂವು ಮೂಡಿಸಿ, ಕರ್ಪೂರವನ್ನು ಹಚ್ಚಿ ದೀಪವನ್ನು ಬೆಳಗಿ ನೈವೇದ್ಯ ಮಾಡಿ ದೇವರ ಪೂಜೆಯನ್ನು ಮಾಡುತ್ತಾರೆ.ಯಾವ ಯಾವ ದೇವರಿಗೆ ಯಾವ ಹೂವು ಇಡಬಾರದು ಎಂದು ಮೊದಲು ತಿಳಿದುಕೊಳ್ಳಬೇಕು.

ಸಾಮಾನ್ಯವಾಗಿ ಪ್ರತಿಯೊಬ್ಬರು ಎಲ್ಲಾ ರೀತಿಯ ಹೂವು ಇಟ್ಟು ಪೂಜೆಯನ್ನು ಮಾಡುತ್ತಾರೆ. ಅದರೆ ಹಲವಾರು ದೇವರಿಗೆ ಹಲವು ಹೂವುಗಳನ್ನು ಇಡಬಾರದು. ಮುಖ್ಯವಾಗಿ ಹೂವು ಇಡುವುದಾದರೆ ಆ ಹೂವು ಸುಗಂಧ ಹಾಗೂ ಪರಿಮಳದಿಂದ ಸ್ವಚ್ಛವಾಗಿ ಇರಬೇಕು. ಯಾವುದೇ ಕಾರಣಕ್ಕೂ ಯಾವುದೇ ಕಾರಣಕ್ಕೂ ಒಣಗಿದ ಹಾಗೂ ಕೊಳೆತ್ತಿರುವ ಹೂವನ್ನು ದೇವರಿಗೆ ಅರ್ಪಿಸಬಾರದು.ಶ್ರೇದ್ದೆ ಭಕ್ತಿಯಿಂದ ದೇವರಿಗೆ ಹೂವನ್ನು ಮೂಡಿಸಿ ದೇವರ ಪೂಜೆಯನ್ನು ಮಾಡಬೇಕು.

1, ಗಣೇಶನಿಗೆ ತುಳಸಿ ಎಲೆಯನ್ನು ಹಾಗೂ ತುಳಸಿ ಪತ್ರೆಯನ್ನು ಗಣೇಶನಿಗೆ ಅರ್ಪಿಸಬಾರದು. ಯಾಕೇಂದರೆ ತುಳಸಿ ಧರ್ಮ ಧ್ವಜೆದ ಪ್ರತಿ ರೂಪ ಎಂದು ಹೇಳಲಾಗುತ್ತದೆ.ಧರ್ಮ ಧ್ವಜೆ ಇಷ್ಟಪಟ್ಟು ಗಣೇಶನನ್ನು ಮದುವೆ ಆಗುವುದಕ್ಕೆ ಕೇಳುತ್ತಾಳೆ.ಅದರೆ ಗಣೇಶ ಅದನ್ನು ನಿರಾಕರಿಸಿ ರಾಕ್ಷಸಿ ಜನ್ಮತಾಳು ಎಂದು ಶಾಪವನ್ನು ಕೊಡುತ್ತಾನೆ.ಧರ್ಮ ಧ್ವಜೆ ಇದರಲ್ಲಿ ಇರುವುದಕ್ಕೆ ಆಗುವುದಿಲ್ಲ ಎಂದಾಗ ನೀನು ತುಳಸಿ ಆಗಿ ಹುಟ್ಟಿ ನಿನ್ನ ಶಾಪವನ್ನು ವಿಮೋಚನೆ ಮಾಡಿಕೋ ಎಂದು ಹೇಳುತ್ತಾನೆ.ಅದರಿಂದ ಯಾವುದೇ ಕಾರಣಕ್ಕೂ ತುಳಸಿ ಎಲೆಯನ್ನು ಗಣೇಶನಿಗೆ ಅರ್ಪಿಸಬಾರದು.ಗಣೇಶನಿಗೆ ಗರಿಕೆ ಹುಲ್ಲನ್ನು ಅರ್ಪಿಸುವುದರಿಂದ ಗಣೇಶನು ನಿಮಗೆ ಒಲಿಯುತ್ತಾನೆ.

2, ವಿಷ್ಣುವಿಗೆ ಕಣಗಲು ಹೂವನ್ನು ಇಡಬಾರದು.ಇನ್ನು ಎಲ್ಲರೀತಿಯ ಹೂವನ್ನು ಮೂಡಿಸಬಹುದು.

3, ಶಿವನಿಗೆ ಖೇದಿಗೆ, ಸಂಪಿಗೆ ಹಾಗೂ ಬಹಳ ಸುಗಂಧ ಬರುವ ಪುಷ್ಪವನ್ನು ಅರ್ಪಿಸಬಾರದು. ಶಿವನಿಗೆ ಬಿಲ್ವ ಪತ್ರೆಯಿಂದ ಪೂಜೆ ಸಲ್ಲಿಸಿದರೆ ಶಿವನ ಅನುಗ್ರಹ ಸಿಗುತ್ತದೆ.

4, ಶಕ್ತಿ ಸ್ವರೂಪಿಣಿ ಆದ ಲಕ್ಷ್ಮಿ,ಪಾರ್ವತಿ, ಸರಸ್ವತಿ,ಮಹಾಕಾಳಿ ದೇವರಿಗೆ ಯಾವುದೇ ಕಾರಣಕ್ಕೂ ಗರಿಗೆ ಹೂವನ್ನು ಅರ್ಪಿಸಬಾರದು.ಇದರ ಬದಲು ಕೆಂಪು ಪುಷ್ಪದಿಂದ ಹೆಣ್ಣು ದೇವರನ್ನು ಆರಾಧನೆ ಮಾಡುವುದರಿಂದ ಹೆಣ್ಣು ದೇವರು ಒಲಿಯುತ್ತಾಳೆ.

5, ಸೂರ್ಯ ನಾರಾಯಣನಿಗೆ ಯಾವುದೇ ಕಾರಣಕ್ಕೂ ಬಿಲ್ವ ಪತ್ರೆಯನ್ನು ಅರ್ಪಿಸಬಾರದು.ಇದನ್ನು ಬಿಟ್ಟು ಬೇರೆ ಹೂವಿನಿಂದ ಪೂಜೆಯನ್ನು ಮಾಡಬಹುದು.

6, ಕಾಳ ಭೈರವನಿಗೆ ಮಲ್ಲಿಗೆ ಪುಷ್ಪವನ್ನು ಅರ್ಪಿಸಬಾರದು.ದಾಸವಾಳ, ಕನಕಾಂಬರ ಬೇರೆ ಹೂವುಗಳನ್ನು ಅರ್ಪಿಸಬಹುದು.

7, ದುರ್ಗಿಗೆ ಯಾವುದೇ ಕಾರಣಕ್ಕೂ ಬಿಲ್ವ ಪತ್ರೆಯಿಂದ ಪೂಜೆಯನ್ನು ಮಾಡಬಾರದು. ದುರ್ಗಿಗೆ ಕೆಂಪು ಹೂವಿನಿಂದ ಪೂಜೆ ಮಾಡಿದರೆ ದೇವಿ ನಿಮಗೆ ಒಲಿಯುತ್ತಾಳೆ.ಆದಷ್ಟು ದೇವರಿಗೆ ಯಾವ ಹೂವನ್ನು ಅರ್ಪಿಸಬಾರದು ಎಂದು ತಿಳಿದುಕೊಂಡು ಪೂಜೆಯನ್ನು ಮಾಡಬೇಕು.

Leave A Reply

Your email address will not be published.