ವೆಂಕಟೇಶ್ವರನು ಉದ್ಬವರೂಪಿಯಾಗಿ ನೆಲೆಸಿರುವ ಈ ಕ್ಷೇತ್ರವನ್ನು ಇಂದಿಗೂ ಸರ್ಪವೊಂದು ಕಾವಲು ಕಾಯುತ್ತಿದೆ

0 1,165

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಆನೇಕಲ್ ಬೆಂಗಳೂರು ನಗರ ಜಿಲ್ಲೆಯ ಒಂದು ದೊಡ್ಡ ಪಟ್ಟಣ ಇದು ನಮ್ಮ ನೆರೆಯ ತಮಿಳುನಾಡು ರಾಜ್ಯದ ಗಡಿ ಭಾಗದಲ್ಲಿ ಬಹಳ ಸಮೀಪದಲ್ಲಿ ಸ್ಥಿತವಿದೆ ಆನೇಕಲ್ ಪಟ್ಟಣವು ಹಲವಾರು ದೇವಾಲಯಗಳ ತಾಣವೆನಿಸಿಕೊಂಡಿದೆ ಆನೇಕಲ್ ನಲ್ಲಿ ಪಾರಂಪರಿಕವಾಗಿ ಧಾರ್ಮಿಕ ಆಚರಣೆಗಳೆಲ್ಲವೂ ತಲತಲಾಂತರಗಳಿಂದಲೂ ಸಹ ನಡೆದುಕೊಂಡು ಬರುತ್ತವೆ.

ಆನೇಕಲ್ ನಲ್ಲಿರುವಂತಹ ಹಲವು ದೇಗುಲಗಳಲ್ಲಿ ಆನೇಕಲ್ ನ ಆದಿದೇವರಾದ ತಿಮ್ಮರಾಯಸ್ವಾಮಿ ದೇಗುಲ ಸಹಸ್ರಾರು ಭಕ್ತಾದಿಗಳನ್ನು ಆಕರ್ಷಿಸುವ ಹಾಗೂ ಭಕ್ತಾದಿಗಳ ಇಷ್ಟಾರ್ಥಗಳನ್ನೆಲ್ಲ ಈಡೇರಿಸುವ ಅತ್ಯಪರೂಪವಾದ ದೇಗುಲವೆನಿಸಿಕೊಳ್ಳುತ್ತದೆ ಈ ದೇಗುಲದ ಪ್ರಶಾಂತ ವಾತಾವರಣ ಹಾಗೂ ಶಿಲ್ಪಕಲೆ ಭಕ್ತಾದಿಗಳನ್ನು ತನ್ನತ್ತ ಕೈ ಬಿಸಿ ಕರೆಯುತ್ತದೆ ಈ ದೇವಸ್ಥಾನದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯನ್ನೇ ತಿಮ್ಮರಾಯಸ್ವಾಮಿ ಎಂದು ಕರೆದು ಪೂಜಿಸಲಾಗುತ್ತದೆ ಈ ದಿನ ಬೆಂಗಳೂರಿಗೆ ಬಹಳ ಸಮೀಪವಿರುವಂತಹ ಆನೇಕಲ್ನ ಇತಿಹಾಸ ಪ್ರಸಿದ್ಧವಾದ ತಿಮ್ಮರಾಯಸ್ವಾಮಿ ದೇಗುಲದ ಬಗ್ಗೆ ಕುತೂಹಲವನ್ನು ಹುಟ್ಟಿಸುವಂತಹ ಅನೇಕ ಸಂಗತಿಗಳನ್ನೆಲ್ಲ ಒಂದೊಂದಾಗಿ ತಿಳಿಯುತ್ತಾ ಹೋಗೋಣ.

ಆನೇಕಲ್ ನ ಹೊರ ವಲಯದಲ್ಲಿರುವ ಸಹದೇವಪುರದಲ್ಲಿ ತಿಮ್ಮರಾಯ ಸ್ವಾಮಿಯ ದೇಗುಲ ಅಸ್ತಿತದಲ್ಲಿದೆ ವಿಶಾಲವಾದ ಹೊರಾಂಗಣ ಹಾಗೂ ಸುಂದರವಾದ ಕುಸುರಿ ಕೆಲಸಗಳಿಂದ ಕೂಡಿರುವ ರಾಜಗೋಪುರವು ದೇಗುಲದ ಅಂದವನ್ನು ಹೆಚ್ಚಿಸುತ್ತದೆ ಈ ದೇವಾಲಯವನ್ನು ಸ್ಥಳೀಯ ಪಾಳ್ಳೇಗಾರರಾದ ಶ್ರೀ ತಿಮ್ಮೇಗೌಡ ಎನ್ನುವವರು ನಿರ್ಮಿಸಿದರು ಎಂದು ಉಲ್ಲೇಖಿಸಲಾಗುತ್ತದೆ .

ದೇವಾಲಯದ ಇತಿಹಾಸ ತಿಮ್ಮೇಗೌಡರು ಆನೇಕಲ್ನ ಪಾಳೇಗಾರರಾಗಿ ಆಡಳಿತ ನಡೆಸುತ್ತಿದ್ದಂತಹ ಸಮಯದಲ್ಲಿ ಅವರ ಗೋವುಗಳನ್ನು ಮೇಯಿಸಲು ಗೋಪಾಲಕರು ಪ್ರಸ್ತುತ ದೇವಾಲಯವಿರುವ ಸಹದೇವಪುರದ ಅರಣ್ಯ ಪ್ರದೇಶಕ್ಕೆ ತೆರಳುತ್ತಿದ್ದರು ಪಾಳೇಗಾರರ ದನಗಳ ಹಿಂಡಿನಲ್ಲಿದ್ದಂತಹ ಒಂದು ಗೋವು ಮಾತ್ರ ಮುಂಜಾನೆ ಉತ್ತಮವಾಗಿ ಹಾಲನ್ನು ನೀಡುತ್ತಿತ್ತು .

ಆದರೆ ಮೇಯಿಸಲು ಸಹದೇವಪುರಕ್ಕೆ ಕರೆದುಕೊಂಡು ಹೋಗಿ ಮರಳಿ ತಂದ ನಂತರ ಸಂಜೆ ಆ ಗೋವು ಹಾಲನ್ನೇ ನೀಡುತ್ತಿರಲಿಲ್ಲ ಒಂದು ದಿನ ತಮ್ಮ ಗೋಪಾಲಕರ ಮೇಲೆ ಅನುಮಾನ ಗೊಂಡಂತ ಪಾಳೇಗಾರ ತಿಮ್ಮೇಗೌಡರು ಗುಪ್ತ ವೇಷಧಾರಿಗಳಾಗಿ ಗೋಪಾಲಕರಿಗೆ ತಿಳಿಸದಂತೆಯೇ ಗೋವುಗಳ ಹಿಂಡನ್ನು ಹಿಂಬಾಲಿಸಿದರು ಆ ಒಂದು ಗೋವು ಮಾತ್ರ ಗೋಪಾಲಕರ ಕಣ್ಣನ್ನು ತಪ್ಪಿಸಿ ಅರಣ್ಯದಲ್ಲಿ ಒಂದು ಹುತ್ತದ ಬಳಿ ಹಾಲನ್ನು ಸುರಿಸ ತೊಡಗಿತು ಹುತ್ತದಲ್ಲಿದ್ದ ಸರ್ಪ ಹಾಲನ್ನು ಸೇವಿಸುತ್ತಲಿತ್ತು.

ಈ ಅಮೋಘವಾದ ದೃಶ್ಯಾವಳಿಯನ್ನು ಕಂಡಂತಹ ತಿಮ್ಮೇಗೌಡರು ನಿಬ್ಬೆರಗೊಳಗಾದರು ಅದೇ ದಿನ ರಾತ್ರಿ ಶ್ರೀನಿವಾಸ ದೇವರು ತಿಮ್ಮೇಗೌಡರ ಸ್ವಪ್ನದಲ್ಲಿ ಕಾಣಿಸಿಕೊಂಡು ತಾವೇ ಹುತ್ತದಲ್ಲಿ ನೆಲೆಸಿರುವುದಾಗಿಯೂ ತಮಗೊಂದು ಮಂದಿರವನ್ನು ನಿರ್ಮಿಸಿ ಪೂಜೆಗೆ ಏರ್ಪಾಡು ಮಾಡುವಂತೆ ಸೂಚನೆ ನೀಡಿದರು ಮರುದಿನವೇ ಹುತ್ತದ ಬಳಿ ತಿಮ್ಮೇಗೌಡರು ತೆರಳಿ ನೋಡಿದಾಗ ಶಿಲಾರೂಪಿಯಾದಂತಹ ಶ್ರೀನಿವಾಸ ದೇವರ ವಿಗ್ರಹ ಅವರಿಗೆ ಗೋಚರಿಸಿತು

ಸಂತಸಗೊಂಡ ಪಾಳೆಗಾರರಾದಂತಹ ತಿಮ್ಮೇಗೌಡರು ದೇವರಿಗೆ ಸಣ್ಣ ಗುಡಿಯನ್ನು ನಿರ್ಮಿಸಿ ಪೂಜೆಗೆ ವ್ಯವಸ್ಥೆಯನ್ನು ಮಾಡಿಸಿದರು ಆಶ್ಚರ್ಯಕರ ವಿಷಯವೆಂದರೆ ಈ ದೇವರ ವಿಗ್ರಹವು ಸರ್ಪ ವಾಸಿಸುವಂತಹ ಹುತ್ತದಲ್ಲಿ ಉದ್ಭವಿಸಿದರಿಂದಲೇ ಇಂದಿಗೂ ಸಹ ಸರ್ಪ ಒಂದು ದೇಗುಲವನ್ನು ಕಾವಲು ಕಾಯುತ್ತಿದೆಯಂತೆ ಈ ನಂಬಿಕೆಗೆ ಪುರಾವೆ ಎಂಬಂತೆ ತಿಂಗಳಿಗೆ ಒಮ್ಮೆ ದೇಗುಲದ ಆವರಣದಲ್ಲಿ ಸರ್ಪದ ಪೊರೆ ನಮಗೆ ಕಂಡುಬರುತ್ತದೆ .

ಹಾಗಾಗಿಯೇ ದೇವಾಲಯ ನಿರ್ಮಿಸಿದ ಸಂದರ್ಭದಲ್ಲಿದ್ದಂತಹ ಇದ್ದ ಸರ್ಪದನಂಟು ಇಂದಿಗೂ ಸಹ ಉಳಿದಿದೆ ಪಾಳೇಗಾರರಾದ ತಿಮ್ಮೇಗೌಡರು ನಿರ್ಮಿಸಿದ್ದರಿಂದ ತಿಮ್ಮರಾಯಸ್ವಾಮಿ ಎಂಬ ಹೆಸರು ಈ ದೇಗುಲಕ್ಕೆ ಬಂದಿದೆ ಆನೇಕಲ್ ನ ತಿಮ್ಮರಾಯಸ್ವಾಮಿ ದೇಗುಲವು ಶಿಥಿಲಗೊಂಡ ನಂತರ 1913 ರಲ್ಲಿ ಅಂದಿನ ತಹಸೀಲ್ದಾರರಾಗಿದ್ದ ಗೋಪಾಲ್ ರಾವ್ ಅರಸ್ ಎಂಬುವರು ಮತ್ತೊಮ್ಮೆ ಇದರ ಜೀರ್ಣೋದ್ಧಾರವನ್ನು ಮಾಡಿಸಿದ್ದಾರೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.