ಹೆಚ್ಚು ಬಿಸಿಯಾದ ನೀರನ್ನು ಕುಡಿಯುತ್ತೀರಾ?
ಊಟಕ್ಕೆ ಮುಂಚೆ ಮತ್ತು ನಂತರ ಬಿಸಿನೀರು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಅನೇಕ ಅಧ್ಯಯನಗಳು ತಿಳಿಸಿದೆ.
ಬೇಸಿಗೆ ಶುರುವಾಗಿದೆ. ಮಾರ್ಚ್ನಲ್ಲಿಯೇ ಸೂರ್ಯ ತನ್ನ ಆರ್ಭಟ ತೋರಿಸಲು ಆರಂಭಿಸಿದ್ದಾನೆ. ಹೊರಗಿನಿಂದ ಮನೆಗೆ ಬಂದ ತಕ್ಷಣ ತಂಪಾಗಿರುವ ನೀರು ಕುಡಿಯಬೇಕು ಅನಿಸುತ್ತದೆ. ಆದರೆ ತಣ್ಣೀರು ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು, ಆದ್ದರಿಂದ ಬಿಸಿನೀರು ಕುಡಿಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
ಊಟಕ್ಕೆ ಮುಂಚೆ ಮತ್ತು ನಂತರ ಬಿಸಿನೀರು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಅನೇಕ ಅಧ್ಯಯನಗಳು ತಿಳಿಸಿದೆ.
ಊಟದ ನಂತರ ಬಿಸಿ ನೀರು ಕುಡಿಯುವುದು ಉತ್ತಮ. ಏಕೆಂದರೆ ಈ ಬಿಸಿನೀರು ಆಹಾರವನ್ನು ಒಡೆಯಲು ಉಪಯುಕ್ತವಾಗಿದೆ.
ಮಲಬದ್ಧತೆ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ, ಬಿಸಿನೀರು ಕುಡಿಯುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ.
ಇಷ್ಟೇ ಅಲ್ಲ ತೂಕ ಇಳಿಸಿಕೊಳ್ಳಲು ಅದೆಷ್ಟೋ ಮಂದಿ, ವ್ಯಾಯಾಮ, ವಾಕಿಂಗ್ ಸೇರಿದಂತೆ ಹಲವಾರು ರೀತಿಯ ಸರ್ಕಸ್ ಮಾಡುತ್ತಾರೆ. ಆದರೆ ಬಿಸಿನೀರು ಕುಡಿಯುವುದರಿಂದ ತೂಕ ಕಡಿಮೆಯಾಗುವ ಸಾಧ್ಯತೆಗಳಿವೆ.
ಊಟಕ್ಕೂ ಮುನ್ನ ಬಿಸಿನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಶೇ.32ರಷ್ಟು ಹೆಚ್ಚುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.
ಆದರೆ ಬಿಸಿ ನೀರು ಕುಡಿಯುವಾಗ ಒಂದಿಷ್ಟು ಮುಂಜಾಗ್ರತೆ ವಹಿಸುವುದು ಉತ್ತಮ. ಏಕೆಂದರೆ ಅತಿ ಬಿಸಿಯಾದ ನೀರು ಕುಡಿಯುವುದರಿಂದ ಬಾಯಿ ಸುಡುತ್ತದೆ. ಇದರಿಂದ ಬಾಯಿ ಉರಿಯುತ್ತದೆ.