ಮಧುಮೆಹಿಗಳು ತಪ್ಪಿಯೂ ಈ ಹಣ್ಣನ್ನು ಸೇವಿಸಬೇಡಿ!
ಮಾವಿನ ಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ನೋಡೋಣ, ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವಾದ್ಯಂತ ಅದರ ಟೇಸ್ಟ್ ಪ್ರಸಿದ್ಧವಾಗಿದೆ, ಜನರು ವಿಶೇಷವಾಗಿ ಬೇಸಿಗೆಯಲ್ಲಿ ಈ ಹಣ್ಣಿನ ರುಚಿಯನ್ನು ಸವಿಯಲು ಕಾಯುತ್ತಾರೆ, ಆದರೆ ಇದು ಮಧುಮೇಹ ರೋಗಿಗಳಿಗೆ ಒಳ್ಳೆಯದಲ್ಲ, ಇದು ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ.
ಬಾಳೆಹಣ್ಣು ವರ್ಷವಿಡೀ ಲಭ್ಯವಿರುವ ಒಂದು ಸಾಮಾನ್ಯವಾದ ಹಣ್ಣು ಮತ್ತು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ, ಆದರೆ ಇದು ಮಧುಮೇಹ ರೋಗಿಗಳಿಗೆ ವರ್ಜವಾಗಿದೆ, ಏಕೆಂದರೆ ಇದು ಗ್ಲೈಸೆಮಿಕ್ ಇಂಡೆಕ್ಸ್ ಸ್ಕೋರ್ (62) ಅನ್ನು ಹೊಂದಿರುವುದರಿಂದ ಮಧುಮೇಹಿಗಳ ಆರೋಗ್ಯಕ್ಕೆ ಒಳ್ಳೆಯದಲ್ಲ
ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಲಿಚಿಯನ್ನು ಬಹಳಷ್ಟು ಜನರು ಇಷ್ಟಪಡುತ್ತಾರೆ, ಆದರೆ ಇದು 16 ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ, ಆದ್ದರಿಂದ ಆರೋಗ್ಯ ತಜ್ಞರು ಮಧುಮೇಹ ರೋಗಿಗಳಿಗೆ ಇದರಿಂದ ದೂರವಿರಲು ಸಲಹೆ ನೀಡುತ್ತಾರೆ.
ಅನಾನಸ್ ಅಥವಾ ಪೈನಾಪಲ್ ಮಾಧುರ್ಯವು ಅನೇಕರನ್ನು ತನ್ನತ್ತ ಆಕರ್ಷಿಸುತ್ತದೆ, ಆದರೆ ಅದರಲ್ಲಿನ ಹೆಚ್ಚಿನ ಸಕ್ಕರೆ ಅಂಶವು ಮಧುಮೇಹ ರೋಗಿಗಳಿಗೆ ಶತ್ರುಗಳಿಗಿಂತ ಕಡಿಮೆಯಿಲ್ಲ. ಅದನ್ನು ಎಂದಿಗೂ ತಿನ್ನಬೇಡಿ, ಇಲ್ಲದಿದ್ದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು.
ರಸಭರಿತವಾದ ಮತ್ತು ಟೇಸ್ಟಿ ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ ಮತ್ತು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಸ್ಕೋರ್ (76) ಅನ್ನು ಇದು ಹೊಂದಿದೆ. ಆದ್ದರಿಂದ, ಮಧುಮೇಹ ರೋಗಿಗಳು ಕಲ್ಲಂಗಡಿ ಹಣ್ಣನ್ನು ಕನಿಷ್ಠ ಪ್ರಮಾಣದಲ್ಲಿ ಸೇವಿಸಬೇಕು ಎಂದು ಸಲಹೆ ನೀಡಲಾಗುತ್ತದೆ, ಇಲ್ಲದಿದ್ದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ.