ನೀವು ಮನೇಲಿ ಬೀನ್ಸ್ (ಹುರುಳಿಕಾಯಿ) ಬಳಸ್ತೀರ ಮಿಸ್ ಮಾಡದೇ ಮಾಹಿತಿ ನೋಡಿ!
ಹಸಿರು ಬೀನ್ಸ್ ಕಾಳುಗಳಲ್ಲಿ ಹಲವು ಪೋಷಕಾಂಶಗಳು ಸಾಂದ್ರೀಕೃತ ಸ್ಥಿತಿಯಲ್ಲಿದ್ದು ದೇಹದ ಹಲವು ಅಗತ್ಯತೆಗಳನ್ನು ಪೂರೈಸುತ್ತವೆ. ವಿಶೇಷವಾಗಿ ಕ್ಯಾರೋಟಿಯಾಯ್ಡುಗಳು ಆಂಟಿ ಆಕ್ಸಿಡೆಂಟುಗಳ ರೂಪದಲ್ಲಿ ಕಾರ್ಯನಿರ್ವಹಿಸುತ್ತವೆ. ಇಂದು ನಾವು ನಾರಿಲ್ಲದ ಹುರುಳಿಕಾಯಿ ನ ಬೀಜಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದೇವೆ. ಈ ಬೀಜಗಳಲ್ಲಿ ಮೂರು ವಿಧದ ಕ್ಯಾರೋಟಿನಾಯ್ಡುಗಳು-ಅಂದರೆ ಬೀಟಾ ಕ್ಯಾರೋಟಿನ್, ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಹೆಚ್ಚಿನ ಪ್ರಮಾಣದಲ್ಲಿವೆ. ಜೀರ್ಣಕ್ರಿಯೆಯಲ್ಲಿ ಬೀಟ್ಯಾ ಕ್ಯಾರೋಟಿನ್ ವಿಟಮಿನ್ ಎ ಆಗಿ ಪರಿವರ್ತಿತವಾಗುತ್ತದೆ.
ಇದು ನಮ್ಮ ಸಾಮಾನ್ಯ ಇರುಳಿನ ದೃಷ್ಟಿಗೆ ಅತ್ಯಂತ ಅಗತ್ಯವಾಗಿದೆ. ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಪ್ರಖರ ನೀಲಿ ಕಿರಣಗಳಿಂದ ನಮ್ಮ ಕಣ್ಣುಗಳನ್ನು ರಕ್ಷಿಸುತ್ತವೆ. ಕ್ಯಾರೋಟಿನಾಯ್ಡುಗಳನ್ನು ಸೇವಿಸುವ ಮೂಲಕ ನಿತ್ಯದ ಅಗತ್ಯದ ವಿಟಮಿನ್ ಎ ಲಭಿಸುವ ಕಾರಣ ಇದನ್ನು ನಿತ್ಯವೂ ಸೇವಿಸಲು ಸಲಹೆ ಮಾಡಲಾಗುತ್ತದೆ. ಅಂದರೆ ನಿತ್ಯವೂ ಒಂದು ಕಪ್ ನಷ್ಟು ಹುರುಳಿಕಾಯಿಯ ಬೀಜಗಳನ್ನು ಸೇವಿಸುವ ಮೂಲಕ ದೈನಂದಿನ ಅಗತ್ಯದ ವಿಟಮಿನ್ ಎ ನ ಸುಮಾರು 29% ರಷ್ಟು ಪ್ರಮಾಣ ದೊರಕುತ್ತದೆ.
ಈ ಬೀಜಗಳಲ್ಲಿ ಸಂಕೀರ್ಣ ನಾರುಗಳು, ವಿವಿಧ ವಿಟಮಿನ್ನುಗಳು, ಖನಿಜಗಳು ಹಾಗೂ ಆಂಟಿ ಆಕ್ಸಿಡೆಂಟುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅಲ್ಲದೇ ಇದರಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇಲ್ಲವೇ ಇಲ್ಲದ ಕಾರಣ ಎಲ್ಲಾ ವಯಸ್ಸಿನವರಿಗೆ ಸೂಕ್ತವಾದ ಆಹಾರವಾಗಿದೆ. ಇಂದಿನ ಲೇಖನದಲ್ಲಿ ಈ ಬೀಜಗಳನ್ನು ನಿತ್ಯವೂ ಸೇವಿಸುವ ಮೂಲಕ ದೇಹ ಪಡೆಯುವ ಪ್ರಯೋಜನಗಳ ಬಗ್ಗೆ ವಿವರಿಸಲಾಗಿದೆ…
ದೃಢವಾದ ಮೂಳೆಗಳಿಗಾಗಿ ವಿಟಮಿನ್ ಕೆ
ನಮ್ಮ ಆಹಾರದಲ್ಲಿ ಎಷ್ಟು ಕ್ಯಾಲ್ಸಿಯಂ ಇದ್ದರೂ ಇದನ್ನು ಮೂಳೆಗಳು ನೇರವಾಗಿ ಹೀರಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಇದನ್ನು ಹೀರಿಕೊಳ್ಳಲು ಸಾಧ್ಯವಾಗಿಸಲು ಕೆಲವು ಪ್ರೋಟೀನುಗಳ ಅಗತ್ಯವಿದ್ದು ಈ ಅಗತ್ಯತೆಯನ್ನು ವಿಟಮಿನ್ ಕೆ ಪೂರೈಸುತ್ತದೆ. ಅಲ್ಲದೇ ವಿಟಮಿನ್ ಕೆ ಮೂಳೆಗಳ ಜೀವರಾಸಾಯನಿಕ ವ್ಯವಸ್ಥೆಯನ್ನು ನಿಯಂತ್ರಿಸುವ ಹಾಗೂ ಮೂಳೆಗಳಿಂದ ಖನಿಜಗಳು ನಷ್ಟಗೊಳ್ಳುವುದನ್ನು ತಡೆಯುತ್ತದೆ. ಪ್ರತಿದಿನ ಒಂದು ಕಪ್ ಹಸಿರು ಬೀನ್ಸ್ ಬೀಜ ಸೇವಿಸುವ ಮೂಲಕ ಇಪ್ಪತ್ತು ಮೈಕ್ರೋಗ್ರಾಂ ವಿಟಮಿನ್ ಪಡೆಯಬಹುದು.
ವಿಟಮಿನ್ ಸಿ
ದೇಹವನ್ನು ಹೇಗೋ ಪ್ರವೇಶಿಸಿ ಜೀವಕೋಶಗಳಿಗೆ ಹಾನಿ ಎಸಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ವಿಟಮಿನ್ ಸಿ ನಿಷ್ಕ್ರಿಯಗೊಳಿಸುತ್ತದೆ. ಅಲ್ಲದೇ ವಿಟಮಿನ್ ಸಿ ಪ್ರೋಟೀನುಗಳು, ಕಾರ್ಬೋಹೈಡ್ರೇಟುಗಳು ಮತ್ತು ಡಿ ಎನ್ ಎ ಗಳನ್ನು ಈ ಫ್ರೀ ರ್‍ಯಾಡಿಕಲ್ ಗಳ ಧಾಳಿಯಿಂದ ರಕ್ಷಿಸುತ್ತದೆ. ಹಸಿರು ಬೀನ್ಸ್ ಸೇವನೆಯ ಇದು ಅತ್ಯುತ್ತಮ ಪ್ರಯೋಜನವಾಗಿದೆ.
ಕಡಿಮೆ ಕ್ಯಾಲೋರಿಗಳು
ತಾಜಾ ಹಸಿರು ಬೀನ್ಸ್ ಗಳು ಅತಿ ಅಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ತೂಕ ಇಳಿಸಿಕೊಳ್ಳಲು ಯತ್ನಿಸುತ್ತಿರುವ ವ್ಯಕ್ತಿಗಳಿಗೆ ಅತ್ಯಂತ ಸೂಕ್ತವಾದ ಆಹಾರವಾಗಿದೆ.
ಹೆಚ್ಚಿನ ಪ್ರಮಾಣದ ನಾರು
ಈ ಕಾಳುಗಳಲ್ಲಿ ಅತಿಹೆಚ್ಚಿನ ಪ್ರಮಾಣದ ಕರಗುವ ನಾರು ಇದ್ದು ಜೀರ್ಣಕ್ರಿಯೆಯಲ್ಲಿ ತೊಂದರೆ ಇರುವ ವ್ಯಕ್ತಿಗಳಿಗೂ ಸೂಕ್ತವಾಗಿದೆ. ಇದರ ನಾರು ಮಲಬದ್ಧತೆಯಾಗದಂತೆ ತಡೆಯುತ್ತದೆ ಹಾಗೂ ಮೂಲವ್ಯಾಧಿ ಹಾಗೂ ಕರುಳುಗಳ ಒಳಗಣ ಗಂಟುಗಳ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳಿಗೂ ಸುರಕ್ಷಿತವಾಗಿ ಸೇವಿಸಬಹುದಾದ ಆಹಾರವಾಗಿದೆ.
ಫೋಲೇಟುಗಳು
ಜೀವಕೋಶಗಳ ಭಾಗವಾಗುವಿಕೆ ಹಾಗೂ ಡಿ ಎನ್ ಎ ಗಳ ಸಂಶ್ಲೇಷಣೆ ಗೆ ಫೋಲೇಟುಗಳು ತುಂಬಾ ಅಗತ್ಯವಾಗಿವೆ. ವಿಶೇಷವಾಗಿ ಗರ್ಭಧರಿಸಬಯಸುವ ಮಹಿಳೆಯರು ಹಾಗೂ ಪ್ರಥಮ ತ್ರೈಮಾಸಿಕ ಅವಧಿಯಲ್ಲಿರುವ ಗರ್ಭಿಣಿಯರಿಗೆ ಈ ಫೋಲೇಟುಗಳು ಇತರರಿಗಿಂತ ಹೆಚ್ಚು ಅಗತ್ಯವಿವೆ.
ಸೋಂಕುಗಳಿಂದ ರಕ್ಷಿಸುತ್ತದೆ
ಹಸಿರು ಬೀಜಗಳಲ್ಲಿ ಇತರ ವಿಟಮಿನ್ನುಗಳಾದ ನಿಯಾಸಿನ್ ಹಾಗೂ ಥೈಯಾಮಿನ್ ಗಳೂ ಉತ್ತಮ ಪ್ರಮಾಣದಲ್ಲಿದ್ದು ಇವು ದೇಹವನ್ನು ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ.
ಜೀವಕೋಶಗಳಲ್ಲಿ ಹಾಗೂ ಇಡಿಯ ದೇಹದಲ್ಲಿ ನೀರನ್ನು ಹಿಡಿದಿಡುತ್ತದೆ
ಹಸಿರು ಬೀಜಗಳಲ್ಲಿರುವ ಪೊಟ್ಯಾಷಿಯಂ ಜೀವಕೋಶಗಳ ಇಬ್ಭಾಗವಾಗುವಿಕೆಯಲ್ಲಿ ನೆರವಾಗುವ ಜೊತೆಗೇ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಹಾಗೂ ಹರಿವು ಸುಲಲಿತವಾಗಿರುವಂತೆ ನೋಡಿಕೊಳ್ಳುತ್ತದೆ.
ವಿಟಮಿನ್ ಎ ಪರಿಣಾಮಗಳು
ಹಸಿರು ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಎ ಹಲವು ಆಂಟಿ ಆಕ್ಸಿಡೆಂಟುಗಳನ್ನು ಒದಗಿಸುವಲ್ಲಿ ನೆರವಾಗುತ್ತದೆ. ಇವು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಿ ವೃದ್ಧಾಪ್ಯವನ್ನು ದೂರವಿಡುತ್ತದೆ. ಹಸಿರು ಬೀನ್ಸ್ ತಿನ್ನುವ ಮೂಲಕ ನಾವು ಪಡೆಯಬಹುದಾದ ಪ್ರಯೋಜನಗಳಲ್ಲಿ ಇದು ಅತಿ ಮುಖ್ಯವಾಗಿದೆ.