ಶನಿವಾರ ಈ 7 ವಸ್ತುಗಳನ್ನು ಮನೆಗೆ ತರಬಾರದು!

0 19,006

ಶನಿವಾರದಂದು ಎಣ್ಣೆಯನ್ನು ಖರೀದಿಸಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದಲ್ಲದೆ, ಶನಿವಾರದಂದು ಅನೇಕ ಕೆಲಸಗಳನ್ನು ಖರೀದಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ಶನಿದೇವನಿಗೆ ಕೋಪ ಬರುತ್ತದೆ ಎನ್ನಲಾಗಿದೆ. ಹಾಗೆಯೇ ಯಾರಿಗಾದರೂ ಶನಿ ದೋಷ ತಗುಲಿದರೆ ಅವರ ಜೀವನ ನರಕವಾಗುತ್ತದೆ. ಶನಿದೇವನನ್ನು ಶನಿವಾರದಂದು ಪೂಜಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ದಿನ ಶನಿಯು ಕೋಪಗೊಳ್ಳುವಂತಹ ತಪ್ಪು ಮಾಡಬೇಡಿ. ಶನಿದೇವನ ಕೋಪವನ್ನು ತಪ್ಪಿಸಲು ಮತ್ತು ಶನಿ ಶಾಂತಿ ಪರಿಹಾರದ ಬಗ್ಗೆ ಈ ಲೇಖನವನ್ನು ಓದುವ ಮೂಲಕ ತಿಳಿದುಕೊಳ್ಳಿ.

ಮೊದಲನೇಯದಾಗಿ ಬದನೆಕಾಯಿಯನ್ನು ಶನಿವಾರ ಕೊಳ್ಳಬಾರದು ಹಾಗೂ ತಿನ್ನಬಾರದು. ಹಾಗೆ ಕಾಳುಮೆಣಸನ್ನು ಈ ವಾರ ಮನೆಗೆ ತೆಗೆದುಕೊಂಡು ಬರಬಾರದು. ಉಪ್ಪನ್ನು ಶನಿವಾರ ಖರೀದಿಸುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ.

ಶನಿವಾರ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಖರೀದಿಸಬಾರದು. ಅದರಲ್ಲೂ ವಾಹನಗಳನ್ನು ಖರೀದಿಸಲೇ ಬಾರದು. ಒಂದುವೇಳೆ ಖರೀದಿಸಿದರೆ ಅಪಘಾತವಾಗುವ ಸಂಭವವಿರುತ್ತದೆ. ಬೇಳೆಕಾಳುಗಳು ಶನಿದೇವರಿಗೆ ಸಂಬಂಧಿಸಿರುವುದಾದ್ದರಿಂದ ಅದನ್ನು ಶನಿವಾರ ಖರೀದಿಸಬಾರದು.ಅದರಬದಲು ಬೇರೆಯವರಿಗೆ ದಾನಮಾಡಬಹುದು ಹಾಗು ಕಾಗೆಗಳಿಗೆ ಹಾಕಬಹುದು.ಹಾಗೆ ಕಪ್ಪು ಬಣ್ಣದ ಬಟ್ಟೆಗಳನ್ನು ಶನಿವಾರ ಖರೀದಿಸಬಾರದು ಆದರೆ ಧರಿಸಬಹುದು. ಶನಿವಾರ ಸಾಸಿವೆ ಹಾಗು ಮರದ ಪೀಠೋಪಕರಣಗಳನ್ನು ಖರೀದಿಸಿ ಮನೆಗೆ ತರಬಾರದು.

Leave A Reply

Your email address will not be published.