ಚಳಿಗಾಲದಲ್ಲಿ ಇಂತವರು ತಪ್ಪದೆ ಹುರುಳಿಕಾಳು ತಿನ್ನೋದ್ರಿಂದ ಏನಾಗತ್ತೆ ಗೊತ್ತ?

0 1,839

ಹುರುಳಿಕಾಳನ್ನು ಹೇಗೆ ಉಪಯೋಗಿಸಬೇಕು ಯಾರು ಯಾರು ಇದನ್ನು ಉಪಯೋಗಿಸಬಾರದು ಅನ್ನೋದು 99% ಜನಕ್ಕೆ ಗೊತ್ತಿಲ್ಲ,ಹೇಗೆ ಉಪಯೋಗಿಸಬೇಕು ರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನವಾಗುತ್ತದೆ ಮತ್ತು ಯಾರು ಉಪಯೋಗಿಸಬಾರದು ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ಹೇಳ್ತೀನಿ,

ಹುರುಳಿಕಾಳು ತುಂಬಾನೇ ಶಕ್ತಿಯುತವಾಗಿದೆ ನಮ್ಮ ದೇಹಕ್ಕೆ ತುಂಬಾನೇ ಒಳ್ಳೆಯದು.ಇಂಗ್ಲೀಷಲ್ಲಿ ಇದಕ್ಕೆ ಹಾರ್ಸ್ ಗ್ರಾಮ್ ಎಂದು ಹೇಳುತ್ತಾರೆ. ಹುರುಳಿಕಾಳನ್ನು ಕುದುರೆಗಳಿಗೆ ಆಹಾರವಾಗಿ ಕೊಡುತ್ತಾರೆ ಅದರಿಂದ ಕುದುರೆಗಳಿಗೆ ಅಷ್ಟೊಂದು ಶಕ್ತಿ ಇದೆ.ಮನುಷ್ಯ ತಿಂದರೆ ಕುದುರೆ ಅಷ್ಟೇ ಶಕ್ತಿ ಬರುತ್ತೆ ಅಂತ ಹೇಳುತ್ತಾರೆ.ಇದರಲ್ಲಿ ಕಾರ್ಬೋಹೈಡ್ರೇಟ್ಸ್, ಫೈಬರ್, ಪ್ರೊಟೀನ್,ಕ್ಯಾಲ್ಸಿಯಂ ಫಾಸ್ಪರಸ್, ಐರನ್ ಮತ್ತು ತುಂಬಾನೇ ವಿಟಮಿನ್ಸ್ ಇದೆ.

ಅದಲ್ಲದೆ ಹುರುಳಿಕಾಳು ತುಂಬಾ ಉಷ್ಣಾಂಶವನ್ನು ದೇಹದಲ್ಲಿ ಹೆಚ್ಚಿಸುವಂತ ಗುಣವನ್ನು ಹೊಂದಿದೆ. ಈ ಗುಣದಿಂದಾಗಿಯೇ ಹುರುಳಿಕಾಳನ್ನು ಉಪಯೋಗಿಸುವುದರಿಂದ ಯಾರಿಗೆ ಕಿಡ್ನಿಯಲ್ಲಿ ಸ್ಟೋನ್ ಇರುತ್ತದೆ. ಅದನ್ನು ಕಡಿಮೆ ಮಾಡುತ್ತದೆ. ಕಿಡ್ನಿಯಲ್ಲಿರುವ ಸ್ಟೋನ್ ಕರಗಿಸುವಂತಹ ಗುಣ ಈ ಹುರುಳಿಕಾಳಿನಲ್ಲಿ ಇದೆ.ಇದರಲ್ಲಿ ಜೀರ್ಣಾಂಗ ವ್ಯವಸ್ಥೆ ಸರಿ ಮಾಡುವ ಗುಣ ಇದರಲ್ಲಿದೆ.

ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಸೆಯನ್ನು ಕಡಿಮೆ ಮಾಡುವ ಗುಣ ಈ ಹುರುಳಿಕಾಳಿನಲ್ಲಿ ಇದೆ. ಹುರುಳಿಕಾಳು ಮಹಿಳೆಯರಿಗೆ ತುಂಬಾನೆ ಒಳ್ಳೆಯದು. ಯಾರಿಗೆ ಪಿಸಿಒಡಿ ಸಮಸ್ಯೆ ಇದೆ ನಿಯಮಿತವಾಗಿ ಮುಟ್ಟು ಆಗೋದಿಲ್ಲ ಮತ್ತೆ ಫಿಬ್ರೋಡ್ಸ್ ಆಗಿದ್ದರೆ ಇಂತಹ ಮಹಿಳೆಯರು ಹುರುಳಿಕಾಳನ್ನು ನಿಯಮಿತವಾಗಿ ಸೇವಿಸಿದರೆ ಅವರ ಋತುಚಕ್ರ ಚೆನ್ನಾಗಿ ಆಗುತ್ತದೆ ಮತ್ತು ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ.

ದಪ್ಪ ಇರುವ ಮಹಿಳೆಯರು ಹುರುಳಿಕಾಳನ್ನು ನಿಯಮಿತವಾಗಿ ಸೇವಿಸುತ್ತ ಬಂದರೆ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ಯೂಟರುಸ್ ಪ್ರಾಬ್ಲಮ್ ಕಡಿಮೆಯಾಗುತ್ತದೆ. ಇನ್ನು ಈ ಹುರುಳಿ ಕಾಳು ವಾತ ಮತ್ತು ಕಫ ಇರುವವರಿಗೆ ತುಂಬಾನೇ ಒಳ್ಳೆಯದು. ಡಯಾಬಿಟಿಸ್ ಸಮಸ್ಯೆ ಇರುವವರು ಹುರುಳಿಕಾಳನ್ನು ಉಪಯೋಗಿಸುವುದರಿಂದ ಒಳ್ಳೆಯ ಎನರ್ಜಿ ಬರುತ್ತದೆ ಮತ್ತು ಒಳ್ಳೆಯ ಪೌಷ್ಟಿಕವದಂತಹ ಆಹಾರವಾಗಿ ಹುರುಳಿ ಕಾಳನ್ನು ಉಪಯೋಗಿಸಬಹುದು.ಇದರಿಂದ ಶುಗರ್ ಸಮಸ್ಸೆ ಕಡಿಮೆ ಆಗುತ್ತದೆ.ಮಂಡಿ ನೋವು, ಸೊಂಟ ನೋವು,ಬೆನ್ನು ನೋವು, ಕುತ್ತಿಗೆ ನೋವು ಇರುವವರು ಹುರುಳಿ ಹಿಟ್ಟು ತೆಗೆದುಕೊಂಡು ಬಿಸಿ ನೀರು ಹಾಕಿ ಮಿಕ್ಸ್ ಮಾಡಿ. ಆ ಪೇಸ್ಟ್ ಅನ್ನು ನೋವು ಇರುವ ಜಾಗಕ್ಕೆ ಹಚ್ಚಿದರೆ ಸಾಕು ನೋವು ಬೇಗ ಕಡಿಮೆ ಆಗುತ್ತದೆ.

ತುಂಬಾ ಬೆವರಿನ ಸಮಸ್ಸೆ ಇರುವವರು ಹುರುಳಿಕಾಳಿನ ಹಿಟ್ಟಿಗೆ ಸ್ವಲ್ಪ ನೀರು ಮಿಕ್ಸ್ ಮಾಡಿ ಮೈ ಗೆ ಹಚ್ಚಿ ಮಸಾಜ್ ಮಾಡುವುದರಿಂದ ತುಂಬಾ ಬೆವರಿನ ಸಮಸ್ಸೆ ಕಡಿಮೆ ಆಗುತ್ತದೆ. ಈ ಹುರುಳಿಕಾಳನ್ನು ಯಾರು ತಿನ್ನಬಾರದು ಎಂದರೆ ಕೈಕಾಲುಗಳಲ್ಲಿ ಉರಿತಾ ಇರುತ್ತೆ, ಕಣ್ಣು ಉರಿ ಈ ತರ ಎಲ್ಲ ಪ್ರಾಬ್ಲಮ್ ಇದ್ದಾರೆ ಹುರುಳಿಕಾಳನ್ನು ತಿನ್ನಬಾರದು. ಮಹಿಳೆಯರು ಹುರುಳಿಕಾಳನ್ನು ತಿನ್ನಬಾರದು ಯಾವಾಗ ಅಂದರೆ ಪಿರೇಡ್ಸ್ ಸಮಯದಲ್ಲಿ ತಿನ್ನಬಾರದು.

ಹುರುಳಿಕಾಳನ್ನು ಹೇಗೆ ತಿನ್ನಬೇಕು ಎಂದರೆ ಹುರುಳಿಕಾಳನ್ನು ಮೊಳಕೆ ಕಟ್ಟಿದರೆ ಸ್ವಲ್ಪ ತಪ್ಪಿನ ಗುಣ ಹುರುಳಿ ಕಾಳಿನಲ್ಲಿ ಬರುತ್ತದೆ.ಇಂತಹ ಹುರುಳಿಕಾಳನ್ನು ಬೇಸಿಗೆಕಾಲದಲ್ಲಿ ತಿನ್ನಬಹುದು. ಇದರ ಬಗ್ಗೆ ತಿಳಿದವರು ಆದಷ್ಟು ಚಳಿಗಾಲದಲ್ಲಿ ಹುರುಳಿಕಾಳನ್ನು ತಿನ್ನುತ್ತಾರೆ. ಇದರಲ್ಲಿರುವ ಎಲ್ಲ ಪೋಷಕಾಂಶ ನಿಮ್ಮ ದೇಹಕ್ಕೆ ಸಿಗುತ್ತದೆ. ಚಳಿಗಾಲದಲ್ಲಿ ಹುರುಳಿಕಾಳು ಹಿಟ್ಟು ಮತ್ತು ಕಡಲೆ ಹಿಟ್ಟು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಸ್ಕಿನ್ ತುಂಬಾನೇ ಸಾಫ್ಟ್ ಆಗುತ್ತದೆ ಮತ್ತು ಸ್ಕಿನ್ ಡ್ರೈ ಕೂಡ ಕಡಿಮೆ ಆಗುತ್ತದೆ.ಹುರುಳಿ ಕಾಳನ್ನು ವಾರಕ್ಕೆ ಎರಡು ಬಾರಿ ಉಪಯೋಗಿಸುವುದರಿಂದ ದೇಹಕ್ಕೆ ಒಳ್ಳೆಯ ಇಂಮ್ಯೂನಿಟಿ ಬರುತ್ತದೆ.

Leave A Reply

Your email address will not be published.