ನಿಮ್ಮ ಜೀವನದಲ್ಲಿ ಎಂದೂ ಹಣದ ಕೊರತೆ ಆಗದಿರಲು ನವರಾತ್ರಿ ಸಮಯದಲ್ಲಿ ಈ ಸರಳ ಪರಿಹಾರ ಮಾಡಿಕೊಳ್ಳಿ!
ನವರಾತ್ರಿಯಲ್ಲಿ ಚಿಕ್ಕ ಪುಟ್ಟ ಸಮಸ್ಸೆ ಮಾಡಿಕೊಳ್ಳುವುದರಿಂದ ಹಣದ ಸಮಸ್ಸೆ ನಿವಾರಣೆ ಮಾಡಿಕೊಳ್ಳಬಹುದು.
ಮೊದಲನೇಯದು ಪ್ರತಿದಿನ ಶ್ರೀಸೂಕ್ತ ಹೇಳಿಕೊಳ್ಳಬೇಕು. ಇದನ್ನು ಪ್ರತಿದಿನ ಹೇಳಿಕೊಳ್ಳುವುದರಿಂದ ಜೀವನದಲ್ಲಿ ತುಂಬಾ ಬದಲಾವಣೆ ಆಗುತ್ತದೆ. ಮನೆಯಲ್ಲಿ ಸಂತೋಷ ಸಮೃದ್ಧಿ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಬಡತನ ದೂರವಾಗುತ್ತದೆ. ನವರಾತ್ರಿ ಅಲ್ಲದೆ ಪ್ರತಿ ಶುಕ್ರವಾರ ಇದನ್ನು ಹೇಳಿಕೊಳ್ಳುವುದರಿಂದ ತುಂಬಾನೇ ಒಳ್ಳೆಯ ಫಲ ಸಿಗುತ್ತದೆ. ನಿಮ್ಮ ಆಸೆಗಳು ಯಾವುದೇ ಇರಲಿ ಈಡೇರುತ್ತಾ ಹೋಗುತ್ತದೆ.
ಇನ್ನು ತುಂಬಾ ಮನೆಯಲ್ಲಿ ಕಷ್ಟಗಳು ಇದ್ದರೆ ಈ ನವರಾತ್ರಿ ಸಮಯದಲ್ಲಿ ದುರ್ಗಾ ಶಾಪ್ತಿ ಬೆಳಗ್ಗೆ ಮತ್ತು ಸಂಜೆನು ಹೇಳಿಕೊಂಡು ನಂತರ ನೀವು ಒಂದು ಬೌಲ್ ಅನ್ನು ತೆಗೆದುಕೊಳ್ಳಿ ಅದರಲ್ಲಿ 5-7 ಲವಂಗವನ್ನು ಹಾಕಿಕೊಳ್ಳಿ. ಇದರ ಜೊತೆಯಲ್ಲಿ ಮೂರು ಏಲಕ್ಕಿ ಹಾಕಿ ಕರ್ಪೂರವನ್ನು ಹಚ್ಚಿ. ಇದರ ಪೂರ್ತಿ ಹೊಗೆಯನ್ನು ಇಡೀ ಮನೆಪೂರ್ತಿ ತೋರಿಸಬೇಕು. ಸಂಪೂರ್ಣ ಹೋಗುವ ತನಕ ಅದು ಹಾಗೆ ಇರಬೇಕು. ಈ ರೀತಿಯಾಗಿ ನವರಾತ್ರಿ ಹಬ್ಬವನ್ನು ಮುಗಿಯುವರೆಗು ಆಚರಣೆ ಮಾಡುತ್ತ ಬನ್ನಿ ನಿಮಗೆ ಹಣದ ಸಮಸ್ಸೆ ಕಡಿಮೆ ಆಗುತ್ತದೆ. ನೀವು ಅಂದುಕೊಂಡಿದ್ದು ಕೂಡ ಈಡೇರುತ್ತದೆ. ನಂತರ ಅಮಾವಾಸ್ಯೆ ಹುಣ್ಣಿಮೆ ಮಂಗಳವಾರ ಶುಕ್ರವಾರ ಶನಿವಾರ ಸಂಜೆ ಈ ರೀತಿಯಾಗಿ ದೂಪವನ್ನು ಹಾಕಿ. ಈ ರೀತಿ ಮಾಡಿದರೆ ಕಂಡಿತವಾಗಿ ಹಣದ ಸಮಸ್ಸೆಯನ್ನು ಪರಿಹಾರವನ್ನು ಮಾಡಿಕೊಳ್ಳಬಹುದು.
ಇನ್ನು ಶ್ರೀಸೂಕ್ತ ಹೇಳುವ ಸಮಯದಲ್ಲಿ ಎರಡು ವೀಳ್ಯದೆಲೆ ತೆಗೆದುಕೊಂಡು ಗುಲಾಬಿ ಹೂವನ್ನು ಇಡಬೇಕು. ಸ್ವಲ್ಪ ಸಕ್ಕರೆ ಒಂದು ಲವಂಗವನ್ನು ದೇವರ ಬಳಿ ತಾಂಬೂಲವನ್ನು ನಿಮ್ಮ ಕೈಯಲ್ಲಿ ಇಟ್ಟುಕೊಂಡು ಅಮ್ಮನವರ ಹತ್ತಿರ ಕೇಳಿಕೊಳ್ಳಿ. ಈ ರೀತಿ ಹಣದ ತೊಂದರೆ ಇದೆ ನಿವಾರಣೆ ಮಾಡಿಕೊಡಿ ಎಂದೂ ಕೇಳಿಕೊಂಡು ತಾಂಬೂಲವನ್ನು ದೇವರ ಬಳಿ ಇಟ್ಟು ಶ್ರೀಸೂಕ್ತವನ್ನು ಹೇಳಿಕೊಳ್ಳಿ. ಇದರಿಂದ ತುಂಬಾ ತುಂಬಾನೇ ಫಲ ಸಿಗುತ್ತದೆ.