ಕಿತ್ತಳೆ ಹಣ್ಣಿನ ಸಿಪ್ಪೆ ಕಸಕ್ಕೆ ಹಾಕುವ ಮೊದಲು ಈ ಮಾಹಿತಿ ನೋಡಿ!

0 91

ಸಾಮಾನ್ಯವಾಗಿ ಕಿತ್ತಳೆ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಎಸೆಯುತ್ತಾರೆ.ಕಿತ್ತಳೆ ಹಣ್ಣಿನ ಸಿಪ್ಪೆಯ ಉಪಯೋಗಗಳು ಯಾವುವು ಎಂದರೆ,

ಒಂದು ಬೌಲ್ ನೀರಿಗೆ ಈ ಆರೆಂಜ್ ಸಿಪ್ಪೆಗಳನ್ನು ,3 ಲವಂಗವನ್ನು ಹಾಕಿ ಮಾಧ್ಯಮ ಉರಿಯಲ್ಲಿ ಕುದಿಸಬೇಕು. ಸಾಮಾನ್ಯವಾಗಿ ಮಾಂಸಾಹಾರ ಮಾಡಿದಾಗ ಅಡುಗೆ ಮನೆಯಲ್ಲಿ ಕೆಟ್ಟ ಸುವಾಸನೆ ಬರುತ್ತದೆ.ಈ ರೀತಿ ಮಾಡಿದರೆ ಅಡುಗೆ ಮನೆಯಲ್ಲಿ ಸ್ವಲ್ಪನು ಕೆಟ್ಟ ವಾಸನೆ ಇರುವುದಿಲ್ಲ. ನಂತರ ಈ ನೀರನ್ನು ಸ್ಪ್ರೇ ಬಾಟಲಿಗೆ ಹಾಕಿಕೊಂಡು ಗ್ಯಾಸ್ ಸ್ಟವ್ ಗಲೀಜು ಆದಾಗ ಈ ನೀರನ್ನು ಸ್ಪ್ರೇ ಮಾಡಿಕೊಂಡು ಬಟ್ಟೆಯಿಂದ ಕ್ಲೀನ್ ಮಾಡಿದರೆ ಸಾಕು ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ.ಇದು ರೂಮ್ ಫ್ರೆಶನರ್ ರೀತಿ ಕೆಲಸ ಮಾಡುತ್ತದೆ ಹಾಗೂ ನೊಣ ಬರುವುದು ಕಡಿಮೆ ಆಗುತ್ತದೆ.

ಕಿತ್ತಳೆ ಹಣ್ಣಿನ ಬಿಳಿಯ ಭಾಗದಿಂದ ಬಾಗಿಲು, ಫರ್ನಿಚರ್ ಅನ್ನು ಪಾಲಿಶ್ ಮಾಡಿಕೊಳ್ಳಬಹುದು.ಈ ರೀತಿ ಮಾಡಿದರೆ ತುಂಬಾ ಚೆನ್ನಾಗಿ ಶೈನಿಂಗ್ ಬರುತ್ತದೆ.

ಟಿಶ್ಯೂ ಪೇಪರ್ ಒಳಗೆ ಸಿಪ್ಪೆಯನ್ನು ಹಾಕಿ. ಇದನ್ನು ಶೂ, ಕಾಬೋರ್ಡ್, ಫ್ರಿಡ್ಜ್ ಒಳಗೆ ಇಟ್ಟುಕೊಳ್ಳಬಹುದು. ಈ ರೀತಿ ಮಾಡುವುದರಿಂದ ಯಾವುದೇ ಕೆಟ್ಟ ವಾಸನೆ ಇದ್ದರು ಕಡಿಮೆ ಆಗುತ್ತದೆ.

ಟೀ ಮಾಡುವಾಗ ಒಂದು ಚಿಕ್ಕ ಪೀಸ್ ಕಿತ್ತಳೆ ಸಿಪ್ಪೆ ಹಾಕಿಕೊಂಡು ಕುಡಿಯುವುದರಿಂದ ಹೊಟ್ಟೆ ಉಬ್ಬರ, ಗ್ಯಾಸ್ಟಿಕ್ ಹಾಗೂ ಜೀರ್ಣ ಕ್ರಿಯೆ ಸಂಬಂಧಿಸಿದ ಸಮಸ್ಸೆ ನಿವಾರಣೆಯಾಗುತ್ತದೆ.

Leave A Reply

Your email address will not be published.