ಗಂಡ ಹೆಂಡತಿ ಲೈಗಿಕೆ ಕ್ರಿಯೆ ನಂತರ ತಲೆ ಸ್ನಾನ ಮಾಡದೆ ಪೂಜೆ ಮಾಡಬಹುದೆ?
ಗಂಡ ಹೆಂಡತಿ ಎಂದ ಮೇಲೆ ಅಲ್ಲಿ ಲೈಗಿಕ ಕ್ರಿಯೆ ನಡೆಯುವುದು ಸಾಮಾನ್ಯ. ಇಲ್ಲಾ ಎಂದರೆ ವಂಶಭಿವೃದ್ದಿ ಆಗುವುದು ಹೇಗೆ. ಮದುವೆಯಾದ ಹೊಸದರಲ್ಲಿ ಪ್ರತಿನಿತ್ಯ ಅಥವಾ ವಾರದಲ್ಲಿ ಕನಿಷ್ಠ 3-4 ಬಾರಿಯಾದರು ದೈಹಿಕ ಕ್ರಿಯೆ ನಡೆಯುತ್ತದೆ. ದಿನ ಕಳೆದಂತೆ ಇದು ಕಡಿಮೆ ಆಗುತ್ತದೆ ಅದರೆ ಸಂಪೂರ್ಣವಾಗಿ ನಿಲ್ಲುವುದಿಲ್ಲ. ಇದೆ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಮಹಿಳೆಯರಿಗೆ ವಿಚಿತ್ರ ಪ್ರೆಶ್ನೆ ಹುಟ್ಟುತ್ತದೆ ಅದು ಏನು ಎಂದರೆ ಲೈಗಿಕ ಕ್ರಿಯೆ ಮಾಡಿದ ಮೇಲೆ ತಲೆ ಸ್ನಾನ ಮಾಡಿಕೊಂಡೆ ದೇವರ ಕಾರ್ಯಗಳನ್ನು ಮಾಡಬೇಕಾ. ಎಂದು ಮಾನದಲ್ಲಿ ಪ್ರೆಶ್ನೆ ಹಾಕಿಕೊಳ್ಳುತ್ತಾರೆ.
ಹಿಂದಿನ ಕಾಲದಲ್ಲಿ ದೇವರ ಕಾರ್ಯಗಳನ್ನು ಮಡಿಯಿಂದ ಮಾಡುತ್ತಿದ್ದರು. ಅದರಲ್ಲೂ ಹೆಣ್ಣು ಮಕ್ಕಳು ಮುಟ್ಟಾದಾಗ ದೇವರ ಕೆಲಸಗಳನ್ನು ಮಾಡುವಾಗಿರಲಿಲ್ಲ. ಗಂಡ ಹೆಂಡತಿ ಕೂಡಿದ ಮೇಲೆ ತಲೆ ಸ್ನಾನ ಮಾಡಿಯೇ ದೇವರ ಕೆಲಸವನ್ನು ಮಾಡಬೇಕು ಅಡುಗೆ ಮನೆಗೆ ಹೋಗಬೇಕು ಎನ್ನುವ ನಿಯಮ ಹಾಕಿದ್ದರು. ಅದರೆ ಪ್ರತಿನಿತ್ಯ ಲೈಗಿಕ ಕ್ರಿಯೆ ಉಂಟಾದಾಗ ಪ್ರತಿ ನಿತ್ಯ ತಲೆ ಸ್ನಾನ ಮಾಡಿದರೆ ಅನೇಕ ಸಮಸ್ಸೆಗಳು ಉಂಟಾಗುತ್ತದೆ ಎನ್ನುವ ಹಿಂದಿನ ಹೆಣ್ಣುಮಕ್ಕಳ ನೋವು. ಅದರಲ್ಲೂ ಕೆಲಸಕ್ಕೆ ಹೋಗುವ ಹೆಣ್ಣು ಮಕ್ಕಳಿಗೆ ತಲೆ ಸ್ನಾನ ಎನ್ನುವುದು ಕಿರಿಕಿರಿ ವಿಷಯ.
ಗಂಡ ಹೆಂಡತಿ ನಡುವೆ ದೈಹಿಕ ಕ್ರಿಯೆ ನಡೆದಾಗ ಹೆಣ್ಣು ಮಕ್ಕಳು ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಹೆಣ್ಣು ಮಕ್ಕಳು ತಲೆ ಕೂದಲನ್ನು ತೊಳೆದುಕೊಳ್ಳಬೇಕು ಎಂದು ಹೇಳಲಾಗುತ್ತದೆ. ಇನ್ನು ಹೆಣ್ಣು ಮಕ್ಕಳು ಮಂಗಳವಾರದ ದಿನ ತಲೆ ಕೂದಲನ್ನು ತೊಳೆಯಬಾರದು ಎನ್ನುವ ನಿಯಮ ಕೂಡ ಇದೆ.
ಇನ್ನು ಒಬ್ಬನೇ ಮಗ ಇರುವವರು ಸೋಮವಾರದ ದಿನ ತಲೆ ಕೂದಲನ್ನು ತೊಳೆಯಬಾರದು. ಇನ್ನು ಶನಿವಾರ ಮತ್ತು ಅಮಾವಾಸ್ಯೆ ದಿನಗಳಂದು ಕೂದಲನ್ನು ತೊಳೆಯಬಾರದು. ಇನ್ನು ಹಿರಿಯರು ಹೆಣ್ಣು ಮಕ್ಕಳ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಈ ನಿಯಮಗಳನ್ನು ರೂಪಿಸಿದ್ದಾರೆ.
ಮಹಿಳೆಯರ ದೇಹದಲ್ಲಿ ವಿಶೇಷವಾದ ಅಂಗವಿರುತ್ತದೆ. ಅದು ಪುರುಷರಲ್ಲಿ ಇರುವುದಿಲ್ಲ. ಅದಕ್ಕೆ ಯಾವುದೇ ರೀತಿಯ ಹಾನಿ ಆಗಬಾರದು ಎಂದು ಗಂಡ ಹೆಂಡತಿ ದೈಹಿಕ ಸಂಪರ್ಕ ಅದಬಳಿಕ ತಲೆ ಸ್ನಾನ ಮಾಡಬೇಕು ಎಂದು ಹೇಳಲಾಗಿದೆ.
ಇನ್ನು ಪ್ರತಿ ನಿತ್ಯ ದೈಹಿಕ ಕ್ರಿಯೆ ಅದರೆ ಶಾಸ್ತ್ರದ ಪ್ರಕಾರ ತಲೆ ಸ್ನಾನ ಮಾಡದೇ ಪೂಜೆ ಮಾಡಬಹುದು. ಅದರೆ ಸ್ನಾನವನ್ನು ಖಂಡಿತವಾಗಿ ಗಂಡ ಹೆಂಡತಿ ಇಬ್ಬರು ಸ್ನಾನ ಮಾಡಬೇಕು. ಇದರಿಂದ ಸುಸ್ತು ನಿಶಕ್ತಿ ಆಗುವುದಿಲ್ಲ.
ಇನ್ನು ಧರ್ಮ ಗ್ರಂಥಿಗಳಲ್ಲಿ ಕೆಲವು ಮಾಹಿತಿಗಳನ್ನು ಕೊಡಲಾಗಿದೆ. ಯಾವುದೇ ತಿಂಗಳ ಹುಣ್ಣಿಮೆ ಮತ್ತು ಅಮಾವಾಸ್ಯೆ ದಿನದಂದು ಪತಿ ಪತ್ನಿಯರು ಸಂಭೋಗವನ್ನು ಮಾಡಬಾರದು ಮತ್ತು ಪರಸ್ಪರ ದೂರ ಇರಬೇಕು ಎಂದು ಶಾಸ್ತ್ರದಲ್ಲಿ ಉಲ್ಲೇಖಮಾಡಲಾಗಿದೆ. ಹೀಗೆ ಮಾಡಿದರೆ ದಾಂಪತ್ಯದ ಮೇಲೆ ದುಷ್ಟಪರಿಣಾಮ ಬಿರುತ್ತದೆ ಮತ್ತು ಕುಟುಂಬಕ್ಕೆ ತೊಂದರೆ ಆಗುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೆ ಹುಣ್ಣಿಮೆ ಅಮಾವಾಸ್ಯೆ ದಿನ ನಕಾರಾತ್ಮಕ ಶಕ್ತಿಗಳು ಮೇಲುಗೈ ಇರುತ್ತದೆ. ಇದರಿಂದ ವೃತ್ತಿ ಮತ್ತು ಮಕ್ಕಳ ಮೇಲೆ ಪರಿಣಾಮ ಬಿರುತ್ತದೆ.
ಯಾವುದೇ ತಿಂಗಳಿನಲ್ಲಿ ಚತುರ್ಥಿ ಮತ್ತು ಅಷ್ಟಮಿ ತಿಥಿಯೊಂದು ಶರೀರಿಕ ಸಂಬಂಧ ಹೊಂದಬಾರದು. ಇದರಿಂದ ವೃತ್ತಿ ಮತ್ತು ಮಕ್ಕಳ ಮೇಲೆ ಪರಿಣಾಮ ಬಿರುತ್ತದೆ ಹಾಗು ನವರಾತ್ರಿ ಸಮಯದಲ್ಲೂ ಕೂಡ 9 ದಿನಗಳವರೆಗೆ ಶರೀರಿಕ ಸಂಬಂಧ ಹೊಂದಬಾರದು. ಇದರಿಂದ ವೃತ್ತಿ ಮತ್ತು ಮಕ್ಕಳ ಮೇಲೆ ಪರಿಣಾಮ ಬಿರುತ್ತದೆ.