ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ.ಮೋಹನ್ ಗೆಲುವಿಗೆ ಶ್ರೀರಕ್ಷೆಯಾಗಲಿವೆಯಾ ಅವರ ಕೆಲಸಗಳು!

0 34

ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ.ಮೋಹನ್ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿ ನಾಲ್ಕನೇ ಬಾರಿಯ ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯಾದಲ್ಲಿ ತೊಡಗಿಕೊಂಡಿದ್ದಾರೆ.

ಎಲ್ಲರಂತೆ ಚುನಾವಣೆ ಸಂದರ್ಭದಲ್ಲಿ ಸಿಗುವ ರಾಜಕಾರಣಿಯಾಗದೆ, ಜನರಿಗೆ ಸುಲಭವಾಗಿ ಸಿಗುವ ರಾಜಕಾರಣಿ ಎನಿಸಿಕೊಂಡಿರುವ ಪಿ.ಸಿ.ಮೋಹನ್ ತಮ್ಮ ಕ್ಷೇತ್ರದ ಜನರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ’‘ ನಾನು ಸುಲಭವಾಗಿ ದೊರೆಯುವ ಜನ ಪ್ರತಿನಿಧಿ. ನಾನು ಯಾವಾಗಲೂ ಬರುವ ಫೋನ್‌ ಕರೆಗಳನ್ನ ಖುದ್ದು ನಾನೇ ಸ್ವೀಕರಿಸುತ್ತೇನೆ ಮತ್ತು ಜನರ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ನಮ್ಮ ಕ್ಷೇತ್ರಕ್ಕೆ ವಿವಿಧ ವರ್ಗದ ಜನರಿದ್ದಾರೆ. ಅವ್ರ ಸೇವೆ ಸಲ್ಲಿಸುವ ಪ್ರಕ್ರಿಯೆಯಲ್ಲಿ ನಾನು ಅವರೊಟ್ಟಿಗೆ ವೈಯುಕ್ತಿಕ ಬಾಂಧವ್ಯವನ್ನು ಇಟ್ಟುಕೊಂಡಿದ್ದೇನೆ. ರಾಜಕೀಯ ಆದತ್ಯೆಗಳನ್ನು ಲೆಕ್ಕಸಿದೆ ಅವರ ಅಗತ್ಯದ ಸಮಯದಲ್ಲಿ ನಾನು ಅವರೊಟ್ಟಿಗಿರುತ್ತೇನೆ’’ ಎಂದರು.

ಜನರ ಸಮಸ್ಯೆ ಬಗ್ಗೆ ಸದಾ ಆಲಿಸುವ ಜನಪ್ರತಿನಿಧಿಯಾಗಿ ಕಳೆದ 15 ವರ್ಷದಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪಿ.ಸಿ.ಮೋಹನ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆ ಹೊತ್ತು ಮತ್ತೊಮ್ಮೆ ಜನರ ಸೇವೆ ಮಾಡುವ ತವಕದಲ್ಲಿದ್ದಾರೆ.

ಅಂದಹಾಗೆ ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡನೇ ಮತ್ತು ಮೂರನೇ ಹಂತದ ಮತದಾನ ನಡೆಯಲಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1, ಪಕ್ಷೇತರ 1 ಸ್ಥಾನ ಗೆದ್ದಿತ್ತು. ಆದರೆ ಈ ಬಾರಿಯ ಚುನಾವಣೆಯ ಲೆಕ್ಕಾಚಾರಗಳು ಏನಾಗಬಹುದು ಎಂಬ ಕುತೂಹಲ ಇದೆ.

Leave A Reply

Your email address will not be published.