ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿದ ದಿನಾಂಕ ಆಧರಿಸಿ ಯಾವ ವಯಸ್ಸಿನಲ್ಲಿ ಏಳಿಗೆ ಆಗುತ್ತೆ ನೋಡಿ?

0 19,822

ಯಾವ ವಯಸ್ಸಿನಲ್ಲಿ ನೀವು ಅಭಿವೃದ್ಧಿಯನ್ನು ಕಾಣುತ್ತೀರಾ? ನಿಮ್ಮ ಗುಣ, ಸ್ವಭಾವ ಹುಟ್ಟಿದ ದಿನಾಂಕದ ಆಧಾರದ ಮೇಲೆ ಯಾವ ವಿಧವಾಗಿರುತ್ತದೆ? ಸಂಖ್ಯಾಶಾಸ್ತ್ರದ ಪ್ರಕಾರ ಯಾವ ನಿಖರವಾದ ವಯಸ್ಸಿನಲ್ಲಿ ನೀವು ಜೀವನದಲ್ಲಿ ಒಂದು ಹಂತಕ್ಕೆ ತಲುಪುತ್ತಿರಾ ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಹುಟ್ಟಿದ ದಿನಾಂಕವನ್ನು ಅನುಸರಿಸಿ ಜೀವನದ ಏಳಿಗೆ ಮತ್ತು ಅದೃಷ್ಠವನ್ನು ಬಹಳ ಸುಲಭವಾಗಿ ನಿರ್ಧರಿಸಬಹುದು.

1,10,19,28 ಈ ದಿನಾಂಕದಲ್ಲಿ ಹುಟ್ಟಿದರೇ ಅವರಿಗೆ ಸೂರ್ಯನ ಪ್ರಭಾವ ಹೆಚ್ಚಾಗಿರುತ್ತದೆ. ಹುಟ್ಟಿದ ದಿನಾಂಕವನ್ನು ಕೂಡಿದಾಗ 1 ಎಂಬ ಸಂಖ್ಯೆ ಬಂದರೇ ಅವರ ಮೇಲೂ ಕೂಡ ಸೂರ್ಯನ ಪ್ರಭಾವ ಹೆಚ್ಚಾಗಿರುತ್ತದೆ. ಇವರಿಗೆ ನಾಯಕತ್ತ್ವದ ಗುಣ ಹೆಚ್ಚಾಗಿರುತ್ತದೆ. ಸೂರ್ಯನ ಶಾಖ ಬೆಳಿಗ್ಗೆ ಕಡಿಮೆ ಇರುತ್ತದೆ ಹಾಗೆಯೇ ಮಧ್ಯಾಹ್ನದ ಸಮಯದಲ್ಲಿ ಶಾಖದ ಪ್ರಭಾವ ಹೆಚ್ಚಾಗಿರುತ್ತದೆ.

ಈ ನಂಬರ್ ನಲ್ಲಿ ಜನಿಸಿದವರ ಜೀವನದಲ್ಲಿ ಆರಂಭದಲ್ಲಿ ಯಶಸ್ಸು ಇರುವುದಿಲ್ಲ. 25ನೇ ವಯಸ್ಸನ್ನು ದಾಟಿದ ನಂತರ ಅಂದರೆ ತಮ್ಮ 28ನೇ ವಯಸ್ಸಿನಲ್ಲಿ ಅದೃಷ್ಠವು ಕೂಡಿ ಬರುತ್ತದೆ. ಲಕ್ಕಿ ನಂಬರ್ 1 ಇದ್ದವರ ಜೀವನದಲ್ಲಿ 28ನೇ ವಯಸ್ಸಿನಲ್ಲಿ ಅಭಿವೃದ್ಧಿಯನ್ನು ಕಾಣುತ್ತಾರೆ. 2,11,20,29 ದಿನಾಂಕದಲ್ಲಿ ಹುಟ್ಟಿದವರಿಗೆ ಅದೃಷ್ಠ ಸಂಖ್ಯೆ 2 ಆಗಿರುತ್ತದೆ. ಹುಟ್ಟಿದ ಸಂಖ್ಯೆಯನ್ನು ಕೂಡಿದರೇ 2 ಸಂಖ್ಯೆ ಬಂದರೆ,

ಇವರ ಲಕ್ಕಿ ನಂಬರ್ 2 ಆಗುತ್ತದೆ. ಇವರ ಸ್ವಭಾವ ಹೇಗಿರುತ್ತದೆ ಎಂದರೆ ಸ್ವಲ್ಪ ದಿನ ಚೆನ್ನಾಗಿದ್ದರೇ ಸ್ವಲ್ಪ ದಿನಗಳ ಕಾಲ ಚೆನ್ನಾಗಿರುವುದಿಲ್ಲ. ಅಮಾವಾಸ್ಯೆಯಿಂದ ಪೌರ್ಣಮಿಗೆ ಚುರುಕಾಗಿದ್ದರೇ, ಮತ್ತೆ ಪೌರ್ಣಮಿಯಿಂದ ಅಮಾವಾಸ್ಯೆಗೆ ಮಂಕಾಗಿರುತ್ತಾರೆ. ಈ ಸಮಯದಲ್ಲಿ ಅತೀ ಹೆಚ್ಚು ಆಲೋಚನೆಗಳನ್ನು ಮಾಡುತ್ತಾರೆ. ಇವರು ಹೆಚ್ಚಾಗಿ ಯಾರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದಿಲ್ಲ.

ಇವರು ತಮ್ಮ 23ನೇ ವಯಸ್ಸಿನಲ್ಲಿ ಅದೃಷ್ಠವನ್ನು ಹೊಂದುತ್ತಾರೆ. ಜೀವನದಲ್ಲಿ 23ನೇ ವಯಸ್ಸಿಗೆ ಒಂದು ಹಂತಕ್ಕೆ ಬಂದು ತಲುಪುತ್ತಾರೆ. 3,12,21,30 ಹುಟ್ಟಿದ ದಿನಾಂಕವನ್ನು ಕೂಡಿದಾಗ 3 ಸಂಖ್ಯೆ ಬರುತ್ತದೆ. ಈ ದಿನಾಂಕದಲ್ಲಿ ಹುಟ್ಟಿದವರಿಗೆ ಕಲಾರಂಗದಲ್ಲಿ ವಿಶೇಷವಾದ ಶಕ್ತಿ ಇರುತ್ತದೆ. ಸೆಲೆಬ್ರೆಟಿಗಳಾಗುವ ಅವಕಾಶಗಳು ಇರುತ್ತದೆ. ಹುಟ್ಟಿದ ಸಂಖ್ಯೆ ಕೂಡಿದಾಗ 3 ಸಂಖ್ಯೆ ಬರುವ ಶೇ 90ರಷ್ಟು ಜನರು ಸೆಲೆಬ್ರೆಟಿಗಳಾಗುತ್ತಾರೆ. 

30ರ ತನಕ ಒಂದು ತರಹ ಜೀವನವಾದರೇ, 30ನೇ ವಯಸ್ಸಿನ ನಂತರ ಮತ್ತೊಂದು ಜೀವನವನ್ನು ಕಾಣುತ್ತಾರೆ. ಉತ್ತಮ ರೀತಿಯಲ್ಲಿ ಜೀವನವನ್ನು ನಡೆಸುತ್ತಾರೆ. 30 ವರ್ಷ ದಾಟಿದ ನಂತರ ಯಶಸ್ಸನ್ನು ಪಡೆಯುತ್ತಾರೆ.

ಹಾಗೆಯೇ 4,13,22,31 ಈ ದಿನಾಂಕದಲ್ಲಿ ಹುಟ್ಟಿದವರಿಗೆ ಅಥವಾ ಜನ್ಮ ದಿನಾಂಕವನ್ನು ಕೂಡಿದಾಗ ಸಂಖ್ಯೆ 4 ಬಂದರೆ ಇವರಿಗೆ  31ನೇ ವಯಸ್ಸಿಗೆ ದೊಡ್ಡ ಮಟ್ಟದ ಅದೃಷ್ಠ ಕೂಡಿಬರುತ್ತದೆ. ಸರ್ಕಾರಿ ಉದ್ಯೋಗಗಳು ಸಿಗುವ ಅದೃಷ್ಠ ಹೆಚ್ಚಾಗಿರುತ್ತದೆ. ಇವರಿಗೆ ಮನಸ್ಸೇ ಶತೃ. ಲಕ್ಕಿ ನಂಬರ್ 4 ಇದ್ದವರಿಗೇ ಶತೃಗಳೇ ಇರುವುದಿಲ್ಲ. ವಿವಿಧ ರೀತಿಯ ಆಲೋಚನೆಗಳು, ಗೊಂದಲಗಳು ಇವರ ತಲೆಯಲ್ಲಿ ಓಡಾಡುತ್ತಿರುತ್ತದೆ. ಚಂಚಲ ಮನಸ್ಸು ಇವರದ್ದಾಗಿರುತ್ತದೆ. ಇವರ ಜೊತೆ ಇದ್ದವರಿಗೆ ಮತ್ತು ಸ್ನೇಹಿತರಿಗೆ ಹೆಚ್ಚು ಲಾಭವನ್ನು ನೀಡುತ್ತಾರೆ.

ಹಾಗೆಯೇ 5,14,23 ಈ ದಿನಾಂಕದಲ್ಲಿ ಜನಿಸಿದವರಿಗೆ ಲಕ್ಕಿ ನಂಬರ್ 5 ಎಂದು ಕರೆಯಲಾಗುತ್ತದೆ. ಹುಟ್ಟಿದ ದಿನಾಂಕ ಕೂಡಿದರೇ 5 ಸಂಖ್ಯೆ ಬಂದರೇ ಲಕ್ಕಿ ನಂಬರ್ 5 ಎಂದು ಹೇಳಲಾಗುತ್ತದೆ. ಇಂತಹ ವ್ಯಕ್ತಿಗಳು ಮನಸ್ಸಿನ ಒಳಗೆ ಒಂದು ರೀತಿ ಇರುತ್ತಾರೆ, ಮನಸ್ಸಿನ ಹೊರಗೆ ಒಂದು ರೀತಿಯಲ್ಲಿ ಇರುತ್ತಾರೆ. ಇವರು ಸದಾ ಏಕಾಂಗಿಯಾಗಿ ಇರಲು ಬಯಸುತ್ತಾರೆ.

ನಾಟಕೀಯ ರೀತಿಯಲ್ಲಿ ಜೀವನವನ್ನು ನಡೆಸುತ್ತಾರೆ. ಇವರು ತಮ್ಮ 23ನೇ ವಯಸ್ಸಿನಲ್ಲಿ ಸೆಟ್ಲ್ ಆಗುವಂತಹ ಅವಕಾಶಗಳು ಹೆಚ್ಚಾಗಿರುತ್ತದೆ. 6,15,24 ಈ ದಿನಾಂಕದಲ್ಲಿ ಜನಿಸಿದವರಿಗೆ ಲಕ್ಕಿ ನಂಬರ್ 6 ಆಗಿರುತ್ತದೆ. ಅಂದರೆ ಹುಟ್ಟಿದ ದಿನಾಂಕವನ್ನು ಕೂಡಿದರೇ 6 ಸಂಖ್ಯೆ ಬಂದರೇ ಇವರು ತಮ್ಮ ಮನಸ್ಸಿನಲ್ಲಿ ಏನನ್ನು ಇಟ್ಟುಕೊಳ್ಳುವುದಿಲ್ಲ.

ಯಾರು ಇಲ್ಲದಿದ್ದರೂ ಗೋಡೆಗೆ ಹೇಳಿಕೊಳ್ಳುವ ಸ್ವಭಾವ ಇವರದಾಗಿರುತ್ತದೆ. ಇವರು ತಮ್ಮ 24ನೇ ವಯಸ್ಸಿನಲ್ಲಿ ಅದೃಷ್ಠವನ್ನು ಹೊಂದುತ್ತಾರೆ. ಸೆಟ್ಲ್ ಆಗುವಂತಹ ಅವಕಾಶಗಳು 24ನೇ ವಯಸ್ಸಿನಲ್ಲಿ ಇವರಿಗೆ ಹೆಚ್ಚಾಗಿರುತ್ತದೆ.
7,16,25 ಈ ದಿನಾಂಕದಲ್ಲಿ ಜನಿಸಿದವರಿಗೆ ಲಕ್ಕಿ ನಂಬರ್ 7 ಆಗಿರುತ್ತದೆ. ಅಂದರೆ ಹುಟ್ಟಿದ ದಿನಾಂಕವನ್ನು ಕೂಡಿದರೇ 7 ಸಂಖ್ಯೆ ಬಂದವರು ವಿಮರ್ಶೆ ಮಾಡದೇ ಏನನ್ನು ಒಪ್ಪಿಕೊಳ್ಳುವುದಿಲ್ಲ.

ರಕ್ತಸಂಬಂಧಕ್ಕೆ ಹೆಚ್ಚು ಮಹತ್ತ್ವವನ್ನು ಕೊಡುತ್ತಾರೆ. ಯಾರಾದರೂ ತಪ್ಪು ಮಾಡಿದರೇ ಇವರು ಸಹಿಸುವುದಿಲ್ಲ. ಇವರು ತಮ್ಮ 25ನೇ ವಯಸ್ಸಿನಲ್ಲಿ ಸೆಟ್ಲ್ ಆಗುವ ಅವಕಾಶಗಳು ಇರುತ್ತದೆ. ಇವರಿಗೆ ಆತ್ಮತೃಪ್ತಿ ಎನ್ನುವುದು ಇರುವುದಿಲ್ಲ. ಹಾಗೆಯೇ 8,17,26 ಹುಟ್ಟಿದವರು ಅಥವಾ ಹುಟ್ಟಿದ ದಿನಾಂಕವನ್ನು ಕೂಡಿದಾಗ 8 ಸಂಖ್ಯೆ ಹೊಂದಿರುವ ವ್ಯಕ್ತಿಗಳು ಯಾರೇ ಏನೇ ಹೇಳಿದರೂ ಮಾಡುವಂತಹ ಸ್ವಭಾವ ಇವರದಾಗಿರುತ್ತದೆ.

ಇವರಿಗೆ ಶತೃಗಳು ಹೆಚ್ಚಾಗಿರುತ್ತಾರೆ. ತಮ್ಮತನ ಎಲ್ಲರಿಗೂ ತಿಳಿಯಬೇಕು, ತನ್ನ ಸಾಧನೆಯನ್ನು ಎಲ್ಲರೂ ಗುರುತಿಸಬೇಕೆಂಬ ಆಸೆಯನ್ನು ಹೊಂದಿರುತ್ತಾರೆ. ತಮ್ಮ 26ನೇ ವಯಸ್ಸಿನಲ್ಲಿ ಅದೃಷ್ಟವನ್ನು ಹೊಂದಿ ಜೀವನದಲ್ಲಿ ಸೆಟ್ಲ್ ಆಗುವಂತಹ ಅವಕಾಶಗಳು ಇರುತ್ತದೆ. 9,18,27 ಈ ದಿನಾಂಕದಲ್ಲಿ ಜನಿಸಿದವರು ಅಥವ ಹುಟ್ಟಿದ ದಿನಾಂಕವನ್ನು

ಕೂಡಿದಾಗ 9 ಸಂಖ್ಯೆ ಬರುತ್ತದೆಯೋ ಅಂತಹ ವ್ಯಕ್ತಿಗಳು ಮೂಗಿನ ಮೇಲೆಯೇ ಕೋಪವನ್ನು ಹೊಂದಿರುತ್ತಾರೆ ಹಾಗೆಯೇ ಬಹಳ ಬೇಗ ತಣ್ಣಗಾಗುತ್ತಾರೆ. ಸರ್ಕಾರಿ ಉದ್ಯೋಗ ಪಡೆಯುವ ಯೋಗ ಇವರಿಗೆ ಹೆಚ್ಚಾಗಿರುತ್ತದೆ. ಪ್ರಮಾಣಿಕವಾಗಿ ಮತ್ತೊಬ್ಬರ ಜೊತೆ ಇರುವುದಿಲ್ಲ. ಇವರು ತಮ್ಮ 27ನೇ ವಯಸ್ಸಿನಲ್ಲಿ ಅದೃಷ್ಠವನ್ನು ಹೊಂದಿ ಜೀವನದಲ್ಲಿ ಸೆಟ್ಲ್ ಆಗುತ್ತಾರೆ.

Leave A Reply

Your email address will not be published.