5 min ದಲ್ಲಿ ಸೊಳ್ಳೆ ಓಡಿಸುವ ಆಸಾಧಾರಣ ಮದ್ದು!
ಸೊಳ್ಳೆ ಬರುವುದಕ್ಕೆ ಮನೆ ಮುಂದೆ ಮತ್ತು ಹಿಂದೆ ನೀರು ನಿಂತರೆ ಸ್ವಚ್ಛತೆ ಇಲ್ಲದೆ ಇದ್ದರೆ ಸೊಳ್ಳೆ ಬರುವುದಕ್ಕೆ ಮುಖ್ಯ ಕಾರಣವಾಗಿದೆ. ಮುಖ್ಯವಾಗಿ ಸೊಳ್ಳೆ ಬರದೇ ಇರುವ ಹಾಗೆ ಕಾಳಜಿ ವಹಿಸಬೇಕು.ಅದಕ್ಕಾಗಿ ಮನೆ ಹಿಂದೆ ಮತ್ತು ಮುಂದೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.
ಸೊಳ್ಳೆ ಓಡಿಸುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ಹಸುವಿನ ಭೇರಣಿ (ಸಗಣಿ). ಇದಕ್ಕೆ ಸ್ವಲ್ಪ ಬೆಂಕಿ ಹಚ್ಚಿದರೆ ಒಂದು ಸೊಳ್ಳೆ ಕೂಡ ಬರುವುದಿಲ್ಲ. ಇದಕ್ಕೆ ಬೆಂಕಿ ಹಚ್ಚಿದ ಮೇಲೆ ಬೇವಿನ ಸೊಪ್ಪಿನ ಎಲೆಯ ಪುಡಿಯನ್ನು ಹಾಕಿ. ಈ ರೀತಿ ಮಾಡಿದರೆ ಸಂಪೂರ್ಣವಾಗಿ ಸೊಳ್ಳೆಗಳು ಮನೆಯಿಂದ ಹೋಗುತ್ತವೆ.
ಇನ್ನು ಸಿಟಿಯಲ್ಲಿ ವಾಸಿಸುವವರು ಕಾಯಿಲ್ ಬಳಸುತ್ತಾರೆ. ಇದನ್ನು ಬಳಸುವುದರಿಂದ ಲಂಗ್ಸ್ ಗೆ ತೊಂದರೆ ಆಗುತ್ತದೆ. ಇದರ ಟ್ಯೂಬ್ ತೆಗೆದು 2 ಗ್ರಾಂ ಪಚ್ಚ ಕರ್ಪೂರ ತೆಗೆದುಕೊಂಡು ,5 ಗ್ರಾಂ ಬೇವಿನ ಎಲೆ,5 ಗ್ರಾಂ ನೀಲಗಿರಿ ಎಲೆಯನ್ನು ಸೇರಿಸಿ ಜಜ್ಜಬೇಕು. ನಂತರ ಇದರ ರಸವನ್ನು ತೆಗೆಯಬೇಕು. ಈ ರಸವನ್ನು ಕಾಯಿಲ್ ಗೆ ಹಾಕಿ ಸ್ವಿಚ್ ಹಾಕಿದರೆ ಸಾಕು. ಇದರಿಂದ ಸೊಳ್ಳೆಗಳ ಕಾಟ ಕೂಡ ಇರುವುದಿಲ್ಲ.
ಇನ್ನು ಪಲಾವ್ ಎಲೆಯನ್ನು ಬೇವಿನ ಎಣ್ಣೆಯಲ್ಲಿ ಮುಳುಗಿಸಿದ ನಂತರ ಸಣ್ಣ ಸಣ್ಣ ತುಂಡಗಿ ಕತ್ತರಿಸಬೇಕು. ಇದನ್ನು ಪಚ್ಚ ಕರ್ಪೂರದ ಮೇಲೆ ಹಾಕಿ ಉರಿಸಬೇಕು. ಇದರಿಂದ ಕೂಡ ಸೊಳ್ಳೆಗಳು ಬೇಗ ಓಡಿ ಹೋಗುತ್ತದೆ.
ಬೇವಿನ ಎಣ್ಣೆಯಲ್ಲಿ ಕಾಟನ್ ಬಟ್ಟೆ ಅದ್ದಿ ಸುರಳಿ ಮಾಡಬೇಕು. ನಂತರ ಬಟ್ಟೆಯನ್ನು ಸುಡಬೇಕು. ಈ ಹೊಗೆಯಿಂದ ಕೂಡ ಬಹಳ ಬೇಗ ಸೊಳ್ಳೆಗಳು ಹೋಗುತ್ತದೆ.