ಹಸಿರು ಬಂಗಾರ ವೀಳ್ಯದೆಲೆ ಬಳ್ಳಿ ಮನೆಯ ಈ ದಿಕ್ಕಿನಲ್ಲಿ ಬೆಳೆಸಿದರೆ ಧನಾಭಿವೃದ್ಧಿ
ಸಾಮಾನ್ಯವಾಗಿ ವೀಳ್ಯದೆಲೆಯನ್ನು ಹಸಿರು ಬಂಗಾರ ಎಂದು ಕರೆಯುತ್ತೇವೆ. ವೀಳ್ಯದೆಲೆಯಲ್ಲಿ ಶುಭಕರವಾದ ಅಷ್ಟ ವಸ್ತುಗಳಲ್ಲಿ ಇದು ಒಂದು ಆಗಿರುತ್ತದೇ. ವೀಳ್ಯದೆಲೆಯಲ್ಲಿ ಅನೇಕ ದೇವರು ನೆಲೆಸಿರುತ್ತಾರೆ.ಶಾಸ್ತ್ರದ ಪ್ರಕಾರ ಲಕ್ಷ್ಮಿ ಭಗವತಿ ಜೇಷ್ಠ ಪಾರ್ವತಿ ಭೂದೇವಿ ಶಿವ ವಿಷ್ಣು ಇಂದ್ರ ಸೂರ್ಯ ಕಾಮದೇವ ಇನ್ನು ಆನೆಕ ದೇವತೆಗಳು ಈ ವೀಳ್ಯದೆಲೆಯಲ್ಲಿ ನೆಲೆಸಿರುವುದರಿಂದ ಶುಭಕಾರ್ಯದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ವೀಳ್ಯದೆಲೆ ಇಲ್ಲದೆ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ.
ಹಿಂದೂ ಧರ್ಮದ ಪ್ರಕಾರ ಪುರಾಣಗಳಲ್ಲಿ ದೇವನು ದೇವತೆಗಳು ಈ ಎಲೆ ಬಳ್ಳಿ ಬೀಜವನ್ನು ಸಮುಂದ್ರದಿಂದ ತೆಗೆದುಕೊಂಡು ಬಂದು ಶಿವ ಪಾರ್ವತಿ ವಿವಾಹದ ನಂತರ ಶಿವ ಪಾರ್ವತಿಯಾರು ಹಿಮಾಲಯದಲ್ಲಿ ಬಿತ್ತಿರುತ್ತಾರೆ.ಈ ರೀತಿ ಪುರಾಣದಲ್ಲಿ ಉಲ್ಲೇಖವಿದೆ.
ವೀಳ್ಯದೆಲೆಯ ಬಳ್ಳಿಯನ್ನು ಮನೆಯಲ್ಲಿ ಬೆಳೆಸಿದರೆ ಯಾವಾಗಲು ಲಕ್ಷ್ಮಿಯ ಕೃಪಾಕಟಾಕ್ಷ ನೆಲೆಸಿರುತ್ತಾರೆ. ಇಷ್ಟೆಲ್ಲಾ ದೇವತೆಗಳು ನೆಲೆಸಿರುವ ಈ ವೀಳ್ಯದೆಲೆ ಬಳ್ಳಿಯನ್ನು ಬೆಳೆಸಿರುವುದರಿಂದ ಮನೆಯಲ್ಲಿ ಯಾವುದೇ ರೀತಿಯ ಒಂದು ನಕಾರಾತ್ಮಕ ಶಕ್ತಿ ಕೂಡ ಮನೆಯಲ್ಲಿ ಪ್ರವೇಶ ಮಾಡುವುದಕ್ಕೆ ಸಾಧ್ಯನೇ ಆಗುವುದಿಲ್ಲ.
ಇನ್ನು ವೀಳ್ಯದೆಲೆ ಬಳ್ಳಿಯನ್ನು ಅಗ್ನೇಯ ದಿಕ್ಕಿನಲ್ಲಿ ಇಟ್ಟು ಬೆಳೆಸಿದರೆ ತುಂಬಾ ಒಳ್ಳೆಯದು. ಈ ಬಳ್ಳಿ ಹಬ್ಬಿದಷ್ಟು ಒಳ್ಳೆಯದು ಹಾಗು ಯಾವುದೇ ಕಾರಣಕ್ಕೂ ಈ ಬಳ್ಳಿ ಒಣಗಬಾರದು. ಪಿರೇಡ್ಸ್ ಸಮಯದಲ್ಲಿ ಗಿಡಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು. ಆ ರೀತಿ ಮುಟ್ಟಿದರೆ ತುಂಬಾ ದೋಷ ಬರುವ ಸಾಧ್ಯತ್ರ ಇರುತ್ತದೆ. ಮನೆಯಲ್ಲಿ ಹೆಚ್ಚು ಬೆಳೆದಷ್ಟು ಮನೆಯಲ್ಲಿ ಆರ್ಥಿಕ ಅಭಿವೃದ್ಧಿ ಹೊಂದುತ್ತ ಹೋಗುತ್ತದೆ. ಈ ಬಳ್ಳಿ ಬೆಳೆಸುವುದರಿಂದ ವಾಸ್ತು ದೋಷ ಕೂಡ ನಿವಾರಣೆ ಆಗುತ್ತದೆ.