ಅರ್ಧ ತಲೆನೋವು ಬಂದಾಗ ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ ತಲೆನೋವು ತಕ್ಷಣ ಕಡಿಮೆಯಾಗುತ್ತದೆ
ಅರ್ಧ ತಲೆನೋವು ಬಂದಾಗ ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ ತಲೆನೋವು ತಕ್ಷಣ ಕಡಿಮೆಯಾಗುತ್ತದೆ
ಅರ್ಧ ತಲೆನೋವು ಹೆಚ್ಚಾಗಿ ಬರಲು ಮೂಲ ಕಾರಣ ಹೊಟ್ಟೆಯಲ್ಲಿರುವ ಆಮ್ಲಗಳು ಮೂಲ ಕಾರಣ ಕೆಲವೊಮ್ಮೆ ಅಸಿಡಿಟಿ ತೊಂದರೆ ಇದ್ದಾಗ ಸರಿಯಾಗಿ ನಿದ್ದೆ ಮಾಡದೆ ಇದ್ದಾಗ ತಲೆನೋವು ಬರುತ್ತದೆ ಹಾಗೂ ಜಾಸ್ತಿ ನಿದ್ದೆ ಮಾಡಿದರು ಕೂಡ ಅರ್ಧ ತಲೆನೋವು ಬರುತ್ತದೆ ಒಂದೇ ರೂಮಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕಿಟಕಿ ಬಾಗಿಲುಗಳನ್ನು ಹಾಕಿಕೊಂಡು ಕಂಪ್ಯೂಟರ್ ಅಥವಾ ಮೊಬೈಲನ್ನು ಉಪಯೋಗಿಸುವುದರಿಂದ ಅರ್ಧ ತಲೆನೋವು ಬರುತ್ತದೆ
ಈ ರೀತಿ ಬಂದಾಗ ನೀವು ಒಂದು ಗಂಟೆ ಹೊರಗಡೆ ಹೋಗಿ ಪ್ರಕೃತಿಯಲ್ಲಿ ಓಡಾಡಿ ಆಗ ತಲೆ ನೋವು ಕಡಿಮೆಯಾಗುತ್ತದೆ ಇನ್ನು ಕೆಲವರಿಗೆ ಅತಿಯಾದ ಬಿಸಿಲಿನಲ್ಲಿ ಓಡಾಡಿದಾಗ ಅರ್ಧ ತಲೆನೋವು ಬರುತ್ತದೆ ಮತ್ತು ಸುತ್ತಮುತ್ತಲಿನ ವಾತಾವರಣದಲ್ಲಿ ವ್ಯತ್ಯಾಸವಾದಗ ಅರ್ಧ ತಲೆನೋವು ಬರುತ್ತದೆ ಮತ್ತು ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಮುಖ್ಯವಾಗಿ ಇದು ಮಹಿಳೆಯರಲ್ಲಿ ಕಂಡುಬರುತ್ತದೆ ಮತ್ತು ಆಹಾರ ಸಮಯದಲ್ಲಿ ವ್ಯತ್ಯಾಸ ಆದಾಗ, ಮಾನಸಿಕ ಒತ್ತಡ ಇದ್ದಾಗ, ಅತಿಯಾದ ಶಬ್ದ ಇದ್ದಾಗ, ವಾಸನೆಯಿಂದ ಬರುತ್ತದೆ ಮತ್ತು ಮಲಗುವ ಸಮಯದಲ್ಲಿ ವ್ಯತ್ಯಾಸ ಆದರೆ ಅರ್ಧ ತಲೆನೋವು ಬರುತ್ತದೆ
ಅತಿಯಾದ ಲೈಂಗಿಕ ಕ್ರಿಯೆ ಮಾಡುವುದರಿಂದ ಅರ್ದ ತಲೆ ನೋವು ಬರುತ್ತದೆ, ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವುದರಿಂದ ಅರ್ಧ ತಲೆನೋವು ಬರುತ್ತದೆ ಇನ್ನು ಈ ಅರ್ಧ ತಲೆ ನೋವು ಬಂದರೆ ಮನೆಯಲ್ಲಿ ಯಾವ ರೀತಿಯ ಪರಿಹಾರಗಳನ್ನು ಮಾಡಿಕೊಳ್ಳಬಹುದು ಎಂದರೆ ಮೊದಲನೆಯದಾಗಿ ನಿಮಗೇನಾದರೂ ಹೊಟ್ಟೆಯ ಸಮಸ್ಯೆಗಳು ಇದ್ದರೆ ಅದನ್ನು ಕಡಿಮೆ ಮಾಡಿದರೆ ಖಂಡಿತವಾಗಿಯೂ ನಿಮ್ಮ ಅರ್ಧ ತಲೆನೋವು ಹೋಗುತ್ತದೆ ಹೊಟ್ಟೆಯಲ್ಲಿ ಪಿತ್ತ ಹೆಚ್ಚಾಗಿದ್ದರೆ ತಲೆನೋವು ಬರುತ್ತದೆ ಹಾಗಾಗಿ ಪಿತ್ತವನು ಕಡಿಮೆ ಮಾಡಿಕೊಳ್ಳಬೇಕು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ
ಒಂದು ಅಥವಾ ಅರ್ಧ ಬೆಲ್ಲವನ್ನು ಸೇವನೆ ಮಾಡಬೇಕು ಇದರಿಂದ ಅರ್ಧ ತಲೆನೋವು ಕಡಿಮೆಯಾಗುತ್ತದೆ ಮತ್ತು ಹೊಟ್ಟೆಯಲ್ಲಿರುವ ಪಿತ್ತ ಕಡಿಮೆಯಾಗಲು ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯಿರಿ ಇದರಿಂದ ಅರ್ಧ ತಲೆನೋವು ಕಡಿಮೆಯಾಗುತ್ತದೆ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಚೆನ್ನಾಗಿ ಇಟ್ಟುಕೊಳ್ಳಲು 100 ಗ್ರಾಂ ಸೋಂಪು ಮತ್ತು ಓಂ ಕಾಳು ಹಾಗೂ 100 ಗ್ರಾಂ ಒಣಶುಂಟಿಯನ್ನು ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಿ ಊಟಕ್ಕಿಂತ ಮೊದಲು ಇದನ್ನು ಸೇವನೆ ಮಾಡಬೇಕು ಇದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯ ತೊಂದರೆ ಕಡಿಮೆಯಾಗುತ್ತದೆ
ಆಗ ಪಿತ್ತ ವೃದ್ದಿಯೂ ಕಡಿಮೆಯಾಗುತ್ತದೆ ನಿಮ್ಮ ಕಣ್ಣಿನಲ್ಲಿ ಏನಾದರೂ ತೊಂದರೆ ಇದ್ದರೆ ಅರ್ಧ ತಲೆ ನೋವು ಬರಬಹುದು ನಿಮ್ಮ ಜೀವನ ಶೈಲಿಯನ್ನು ಸರಿಯಾಗಿ ಇಟ್ಟುಕೊಂಡರೆ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ ಒಂದೇ ಸಮಯದಲ್ಲಿ ಮಲಗುವುದು, ಊಟ ಮಾಡುವುದು ಎಲ್ಲವನ್ನು ಸರಿಯಾಗಿ ಪಾಲಿಸಿಕೊಂಡು ಹೋಗಬೇಕು ಪೋಷಕಾಂಶಗಳು ಇರುವ ಆಹಾರವನ್ನು ಸೇವನೆ ಮಾಡುವುದರಿಂದ ಅರ್ಧ ತಲೆನೋವು ಬರುವುದಿಲ್ಲ