ಚಳಿಗಾಲದಲ್ಲಿ ಯಾವ ಆಹಾರ ತಿಂದರೆ ಉತ್ತಮ
ಚಳಿಗಾಲದಲ್ಲಿ ಯಾವ ಆಹಾರ ತಿಂದರೆ ಉತ್ತಮ
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈಗ ಚಳಿಗಾಲ ಶುರುವಾಗಿದೆ ಈ ಚಳಿಗಾಲದಲ್ಲಿ ನೆಗಡಿ, ಕೆಮ್ಮು ಬರುವುದು ಸಹಜ ಆದರೆ ನಾವು ಸೇವಿಸುವ ಆಹಾರಗಳು ನಮ್ಮ ದೈಹಿಕ ಸ್ಥಿತಿಯನ್ನು ಸಮತೋಲನದಲ್ಲಿ ಇಡುತ್ತದೆ ಅಂತಹ ಆಹಾರಗಳು ಯಾವುದು ಎನ್ನುವ ಬಗ್ಗೆ ನಾವು ನಿಮಗೆ ತಿಳಿಸುತ್ತಿದ್ದೇವೆ,
ಚಳಿಗಾಲದಲ್ಲಿ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ ಈ ವೇಳೆ ನೀವು ಸಿರಿಧಾನ್ಯಗಳ ಸೇವನೆ ಮಾಡುವುದು ಉತ್ತಮ ರಾಗಿ ದೋಸೆ, ಮುದ್ದೆ, ರೊಟ್ಟಿ, ಸಾಮೆ ನವಣೆಯ ಉಪ್ಪಿಟ್ಟು ಹೀಗೆ ಸಿರಿಧಾನ್ಯಗಳ ಪದಾರ್ಥ ಮಾಡಿ ತಿನ್ನುವುದು ಒಳ್ಳೆಯದು ಇದು ಉಷ್ಣ ಪದಾರ್ಥವಾಗಿರುವುದರಿಂದ ಚಳಿಗಾಲದಲ್ಲಿ ಇದರ ಸೇವನೆಯೂ ಕೂಡ ಒಳ್ಳೆಯದು.
ಇನ್ನು ಕಿತ್ತಳೆ ಹಣ್ಣು: ಕಿತ್ತಳೆ ಹಣ್ಣು ಚಳಿಗಾಲದಲ್ಲಿ ಹೆಚ್ಚಾಗಿ ಸಿಗುವ ಹಣ್ಣು ಚಳಿಗಾಲದಲ್ಲಿ ತಂಪು ಹಣ್ಣು ತಿಂದರೆ ನೆಗಡಿ ಆಗುವುದಿಲ್ಲವ ಎನ್ನುವುದು ನಿಮ್ಮ ಪ್ರಶ್ನೆ ಆಗಿರುತ್ತದೆ ಆದರೆ ಚಳಿಗಾಲದಲ್ಲಿ ತಂಪಾದ ಹಣ್ಣು ಅಂದರೆ ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಜೀರ್ಣಕ್ರಿಯ ಉತ್ತಮವಾಗಿರುತ್ತದೆ ಚಳಿಗಾಲ ಎಂದು ನಾವು ಉಷ್ಣ ಪದಾರ್ಥವನ್ನು ಹೆಚ್ಚಾಗಿ ತಿನ್ನುತ್ತೇವೆ ಅದರೊಂದಿಗೆ ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹ ಸಮತೋಲನದಲ್ಲಿರುತ್ತದೆ ಆಗ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ಮೂರನೆಯದಾಗಿ ನೆನೆಸಿದ ಶೇಂಗಾ ಬೀಜ :- ಶೇಂಗಾ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು 20 ಶೇಂಗ ಕಾಳು ತಿಂದರೆ ಸಾಕು ಇದರಿಂದ ನಮ್ಮ ದೇಹದಲ್ಲಿನ ಉಷ್ಣತೆ ಸಮ ಪ್ರಮಾಣದಲ್ಲಿ ಇರುತ್ತದೆ ರಕ್ತದ ಪ್ರಮಾಣ ಕೂಡ ಹೆಚ್ಚಾಗುತ್ತದೆ ಇದು ಕೂದಲಿನ ಆರೋಗ್ಯ ಮತ್ತು ಚರ್ಮದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.
ನಾಲ್ಕನೆಯದಾಗಿ ಕ್ಯಾರೆಟ್ ಮತ್ತು ಬೀಟ್ರೂಟ್ :- ಕ್ಯಾರೆಟ್ ಮತ್ತು ಬೀಟ್ರೂಟ್ ತಿನ್ನುವುದು ತುಂಬಾನೇ ಒಳ್ಳೆಯದು ಕ್ಯಾರೆಟ್ ಬೀಟ್ರೂಟ್ ಜ್ಯೂಸ್, ಸಲಾಡ್ ಮಾಡಿಕೊಂಡು ಸೇವಿಸಬಹುದು ಇದು ಚಳಿಗಾಲದಲ್ಲಿ ನಮ್ಮ ಆರೋಗ್ಯ ಮತ್ತು ಸೌಂದರ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಐದನೆಯದಾಗಿ ಹಸಿರು ಸೊಪ್ಪುಗಳು :- ಪಾಲಕ್, ಮೆಂತೆ ಸೊಪ್ಪು, ಸಬ್ಬಸಿಗೆ ಸೊಪ್ಪು, ಬಸಳೆ ಸೊಪ್ಪು, ಹರಿವೇ ಸೊಪ್ಪು, ಇತ್ಯಾದಿ ಸೊಪ್ಪುಗಳ ಸೇವನೆ ಮಾಡಬೇಕು ಇದು ನಮ್ಮ ದೇಹದಲ್ಲಿ ಕಬ್ಬಿಣ ಅಂಶವನ್ನು ಹೆಚ್ಚಿಸಲು ಸಹಕಾರಿ ಆಗುತ್ತದೆ.
ಆರನೆಯದಾಗಿ : ಡ್ರೈ ಫ್ರೂಟ್ಸ್,
ಅರಿಶಿಣ ಹಾಲು, ಜೇನುತುಪ್ಪ, ಗ್ರೀನ್ ಟೀ, ತುಪ್ಪ, ತೆಂಗಿನ ಎಣ್ಣೆ, ಏಲಕ್ಕಿ, ಚಕ್ಕೆ, ಲವಂಗ, ಶುಂಠಿ, ಜೀರಿಗೆ ಇತ್ಯಾದಿ ಪದಾರ್ಥಗಳು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಂಡರೆ ಉತ್ತಮ ಚಳಿಗಾಲದಲ್ಲಿ ನೀವು ಆದಷ್ಟು ಬಿಸಿ ನೀರು ಕುಡಿದರೆ ಒಳ್ಳೆಯದು ನೀರಿಗೆ ತುಳಸಿ ಎಲೆ ಜೀರಿಗೆ ಹಾಕಿ ಕುದಿಸಿ ಕುಡಿಯುವುದು ಇನ್ನೂ ಉತ್ತಮ ಇದು ಹಲವು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.