ಎಲ್ಲವನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ಕೊರಗಬೇಡ ಮೊದಲು ಇದನ್ನು ತಿಳಿ

Recent stories

ಎಲ್ಲವನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ಕೊರಗಬೇಡ ಮೊದಲು ಇದನ್ನು ತಿಳಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನನಗಿಂತ ಬೇರೆ ಅವರು ಒಳ್ಳೆಯ ಸಾಧನೆ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ನಿಮ್ಮ ದಾಖಲೆಯನ್ನು ಮುರಿಯುವುದು ಹೇಗೆ ಎಂಬುದರ ಬಗ್ಗೆ ಯೋಚಿಸಿ ಇದರಲ್ಲಿ ಯಶಸ್ವಿ ಆದರೆ ಬೇರೆಯವರ ಜೊತೆ ಸೆಣೆಸಿ ಗೆಲ್ಲಬಹುದು ಎಲ್ಲವನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ನಿಮಗೆ ಅನಿಸಿದಾಗ ಒಂದು ಕ್ಷಣ ಮರವನ್ನು ನೆನಪಿಸಿಕೊಳ್ಳಿ ಅದು ಪ್ರತಿ ವರ್ಷ ತನ್ನ ಎಲೆಗಳೆಲ್ಲವನ್ನು ಕಳೆದುಕೊಂಡು ಬೋಳಾದರೂ ಮತ್ತೊಮ್ಮೆ ಮರದ ತುಂಬೆಲ್ಲ ಎಲೆಗಳನ್ನು ಧರಿಸಿಕೊಳ್ಳಲು

ಆ ಸಮಯಕ್ಕಾಗಿ ಕಾಯುತ್ತದೆ ಎಲ್ಲ ಸಲವು ನಮ್ಮ ಪರವಾದ ಸಂಗತಿಗಳೇ ಜರಗುವುದಿಲ್ಲ ನಿಮ್ಮ ಆಶಯಕ್ಕೆ ವಿರುದ್ಧವಾದವು ಗಟಿಸುತ್ತಲೇ ಇರುತ್ತವೆ ಆಗ ಧೃತಿಗೆಡಬಾರದು ಪ್ರತಿಕೂಲ ಪ್ರಸಂಗವನ್ನು ಎದುರಿಸಲು ನಮ್ಮ ಮನಸ್ಸು ಸದಾ ಸಹಜವಾಗಿ ಸನ್ನದ್ಧವಾಗಿರಬೇಕು ಜೀವನದಲ್ಲಿ ನಿಮ್ಮ ಸಾಧನೆಗೆ ನಿಮ್ಮ ದೌರ್ಬಲ್ಯವನ್ನು ಮರೆಸುವ ಶಕ್ತಿ ಇದೆ, ಈ ಜಗತ್ತು ಸಾಧನೆಗೆ ತಲೆಬಾಗುತ್ತದೆ

ನಿಮ್ಮದು ಯಾವುದೇ ಕ್ಷೇತ್ರ ಇರಬಹುದು ಸಾಧನೆ ಮಾಡದೆ ವಿರಾಮಿಸಬೇಡಿ ನಿಮ್ಮ ನಂತರವೂ ಸಾಧನೆ ಒಂದೇ ಮಾತನಾಡುತ್ತದೆ ಸಮುದ್ರದ ಆಳಕ್ಕೆ ಧುಮುಕು ಮುತ್ತು ರತ್ನಗಳು ದೊರೆಯುತ್ತವೆ ಸುರಕ್ಷಿತವಾಗಿ ಇರಬೇಕೆಂದು ಅಲ್ಲಾಡದೆ ಕುಳಿತರೆ ದಂಡೆಯ ಮರಳು ಅಷ್ಟೇ ನಿನ್ನ ಪಾಲಿಗೆ ಸಿಗುವುದು ಮರದ ತುಂಡುಗಳನ್ನು ಕಡೆದರೆ ಬೆಂಕಿ ಉತ್ಪತ್ತಿಯಾಗುತ್ತದೆ

ಭೂಮಿಯನ್ನು ಆಳದವರೆಗೆ ಹಗೆದರೆ ನೀರು ಸಿಗುತ್ತದೆ ಉತ್ಸಾಹದಿಂದ ಕೆಲಸ ಮಾಡುವ ಯಾವ ಮನುಷ್ಯನಿಗೂ ಅಸಾಧ್ಯ ಎನ್ನುವುದು ಯಾವುದು ಇಲ್ಲ ಸರಿಯಾದ ರೀತಿಯಲ್ಲಿ ಆರಂಭಿಸಿದ ಎಲ್ಲಾ ಕೆಲಸಗಳು ಫಲ ನೀಡುತ್ತವೆ ಬುದ್ಧಿವಂತರಿಗೆ ಸಲಹೆಗಳ ಅಗತ್ಯವಿಲ್ಲ ಮೂರ್ಖರಂತು ಅವುಗಳನ್ನು ಯಾವತ್ತು ಸ್ವೀಕರಿಸುವುದಿಲ್ಲ ಸಲಹೆ ಮಾರ್ಗದರ್ಶನವೆಂಬುದು ಯಾರಿಗೂ ಬೇಕಾಗಿಲ್ಲ ಬಗ್ಗಿದರೆ ಸಾಕು ಆಲಸ್ಯ ಆವರಿಸಿಕೊಳ್ಳಲು ಕಾಯುತ್ತಿರುತ್ತದೆ

ಹೊಸ ಹೊಸ ಕೆಲಸಗಳನ್ನು ಮಾಡುತ್ತಲೇ ಇರಿ ಬೈಗಳ್ಳತನ ಬೆನ್ನೇರಲು ಎಂದು ಬಿಡಬೇಡಿ ನೀವು ನೋವಿನಲ್ಲಿದ್ದರೆ ಏನು ಆಗಲ್ಲ ಅನಿಸಿದರೆ ಕನ್ನಡಿ ಮುಂದೆ ನಿಂತುಕೊಳ್ಳಿ ನಿಮ್ಮೆಲ್ಲ ಸಮಸ್ಯೆಗಳನ್ನು ಪರಿಹರಿಸಬಲ್ಲ ವ್ಯಕ್ತಿ ಅಲ್ಲಿ ಕಾಣಿಸುತ್ತಾರೆ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ ಇಲ್ಲದಿದ್ದರೆ ನಿನ್ನಿಂದ ಏನು ಮಾಡಲು ಸಾಧ್ಯವಿಲ್ಲ ನಂಬಿಕೆಯೇ ಆತ್ಮವಿಶ್ವಾಸ.

Leave a Reply

Your email address will not be published. Required fields are marked *