ಮಧುಮೇಹವನ್ನು ಕಟ್ಟಿ ಹಾಕುವ ಪವರ್ಫುಲ್ ಬೀಜಗಳು!

0 37

ಅಗಸೆಬೀಜ ಅಥವಾ ಪ್ಲ್ಯಾಕ್ಸ್ ಬೀಜ ನೀವು ನೋಡಿರಬಹುದು. ಯಾರು ತೂಕ ಇಳಿಸಬೇಕೆಂದಿರುತ್ತಾರೋ ಅವರು ಹೆಚ್ಚಾಗಿ ಇದನ್ನು ಸೇವಿಸುತ್ತಾರೆ. ಹಾಗಂದ ಮಾತ್ರಕ್ಕೆ ಇದು ಬರೀ ತೂಕ ಇಳಿಸಲು ಸಹಕಾರಿಯಲ್ಲ, ಅಗಸೆ ಬೀಜವನ್ನು ಸೇವಿಸುವುದರಿಂದ ಇನ್ನೂ ಹಲವಾರು ಪ್ರಯೋಜನಗಳಿವೆ.

ಭಾರತದಲ್ಲಿ ಸಾವಿರಾರು ವರ್ಷಗಳಿಂದ ಅಗಸೆಬೀಜವನ್ನು ಆಯುರ್ವೇದ ಔಷಧದಲ್ಲಿ ಬಳಸಲಾಗುತ್ತಿದೆ. ಅಗಸೆಬೀಜವು ಬೀಜ, ಎಣ್ಣೆ, ಪುಡಿ, ಮಾತ್ರೆಗಳು, ಕ್ಯಾಪ್ಸುಲ್‌ಗಳು ಮತ್ತು ಹಿಟ್ಟಿನ ರೂಪದಲ್ಲಿ ಲಭ್ಯವಿದೆ. ಮಲಬದ್ಧತೆ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಹೃದ್ರೋಗ, ಕ್ಯಾನ್ಸರ್ ಮತ್ತು ಇತರ ಅನೇಕ ರೋಗಗಳನ್ನು ತಡೆಗಟ್ಟಲು ಜನರು ಇದನ್ನು ಆಹಾರದಲ್ಲಿ ಬಳಸುತ್ತಾರೆ.

​ಅಗಸೆಬೀಜದ ಪೋಷಕಾಂಶಗಳು

ಅಗಸೆಬೀಜಗಳು ಲಿಗ್ನಾನ್‌ಗಳು, ಆಂಟಿಆಕ್ಸಿಡೆಂಟ್‌ಗಳು, ಫೈಬರ್, ಪ್ರೋಟೀನ್ ಮತ್ತು ಆಲ್ಫಾ-ಲಿನೋಲೆನಿಕ್ ಆಮ್ಲ ಅಥವಾ ಒಮೆಗಾ -3 ನಂತಹ ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳನ್ನು ಹೊಂದಿದೆ.

ನೀವು ಮಾಂಸ ಮತ್ತು ಮೀನುಗಳನ್ನು ತಿನ್ನದಿದ್ದರೆ, ಅಗಸೆ ಬೀಜಗಳು ನಿಮಗೆ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಇದನ್ನು ಸಸ್ಯ ಆಧಾರಿತ ಪ್ರೋಟೀನ್ ಎಂದು ಪರಿಗಣಿಸಲಾಗುತ್ತದೆ. ಇದು ಸಸ್ಯಾಹಾರಿಗಳಿಗೆ ಉತ್ತಮ ಆಯ್ಕೆಯಾಗಿದೆ.

ಆಯುರ್ವೇದ ವೈದ್ಯೆ ದೀಕ್ಷಾ ಭಾವಸರ್

ಅಗಸೆಬೀಜದ ಸೇವನೆಯು ವಿವಿಧ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಯುರ್ವೇದ ವೈದ್ಯ ದೀಕ್ಷಾ ಭಾವಸರ್ ಅವರು ನಿಮ್ಮ ಆಹಾರದಲ್ಲಿ ಅಗಸೆ ಬೀಜಗಳನ್ನು ಸೇರಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ಇಲ್ಲಿ ತಿಳಿಸಿದ್ದಾರೆ.

​ಮಲಬದ್ಧತೆಗೆ
ಅಗಸೆ ಬೀಜಗಳು ಫೈಬರ್‌ಲ್ಲಿ ಸಮೃದ್ಧವಾಗಿವೆ ಮತ್ತು ಅದಕ್ಕಾಗಿಯೇ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ತೊಡೆದುಹಾಕಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

​ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ

ಅಗಸೆಬೀಜಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರ ಜೊತೆಗೆ ಉತ್ತಮ ಕೊಲೆಸ್ಟ್ರಾಲ್ ಅನ್ನು ಸುಧಾರಿಸುತ್ತದೆ. ಇದರಿಂದಾಗಿ ನೀವು ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಅಗಸೆ ಬೀಜಗಳು ಸಹಾಯಕವಾಗಿವೆ. ಇದರ ಕರಗುವ ಫೈಬರ್ ನಿಮಗೆ ಬೇಗನೆ ಹಸಿವಾಗದಂತೆ ಮಾಡಲು ಸಹಾಯ ಮಾಡುತ್ತದೆ, ಆದ್ದರಿಂದ ತೂಕ ನಷ್ಟದ ಪ್ರಯತ್ನದಲ್ಲಿರುವವರಿಗೆ ಮತ್ತು ಬೊಜ್ಜು ಹೊಂದಿರುವವರಿಗೆ ಇದು ಉತ್ತಮವಾಗಿದೆ.

​ಯಾರೆಲ್ಲಾ ಎಚ್ಚರಿಕೆಯಿಂದಿರಬೇಕು

ಇದು ರುಚಿಯಲ್ಲಿ ಸಿಹಿ ಮತ್ತು ಕಹಿ ಯಾಗಿದ್ದು ಲೋಳೆಯಂತಿರುತ್ತದೆ ಆದ್ದರಿಂದ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದು ನರಸೆಳೆತ, ಪಾರ್ಶ್ವವಾಯು, ಸಂಧಿವಾತದಂತಹ ವಾತ ಅಸ್ವಸ್ಥತೆಗಳಿಗೆ ಉಪಯುಕ್ತವಾಗಿದೆ.

ಇದು ವಾತವನ್ನು ಸಮತೋಲನಗೊಳಿಸುತ್ತದೆ ಆದರೆ ಪಿತ್ತ ಮತ್ತು ಕಫವನ್ನು ಉಲ್ಬಣಗೊಳಿಸುತ್ತದೆ ಆದ್ದರಿಂದ ಅತಿಯಾದ ರಕ್ತಸ್ರಾವದ ಅಸ್ವಸ್ಥತೆಗಳಿಂದ ಬಳಲುತ್ತಿರುವ ಮತ್ತು ಗರ್ಭಧರಿಸಿರುವವರು ಇದನ್ನು ಎಚ್ಚರಿಕೆಯಿಂದ ಬಳಸಬೇಕು.

​ಇದನ್ನು ಸೇವಿಸುವುದು ಹೇಗೆ?

ಅಗಸೆ ಬೀಜವನ್ನು ನೀವು ಹಾಗೇ ಸೇವಿಸಿದರೆ ಅದು ನಿಮ್ಮ ಮಲದ ಜೊತೆಗೆ ಹಾಗೆಯೇ ಹೊರಹೋಗುತ್ತದೆ. ಅದಕ್ಕಾಗಿ ನೀವು ಈ ಬೀಜವನ್ನು ಪುಡಿಮಾಡಿ ಸೇವಿಸಿ. ಇಲ್ಲವಾದರೆ ಇದನ್ನು ನೀರಿನಲ್ಲಿ ನೆನೆಸಿಟ್ಟು ಕೂಡಾ ಸೇವಿಸಬಹುದು. ಅಗಸೆ ಬೀಜದ ಎಣ್ಣೆಯನ್ನು ಕೈ ಕಾಲು ನೋವಿಗೂ ಬಳಸಬಹುದು.

Leave A Reply

Your email address will not be published.